Published On: Mon, Dec 9th, 2019

ಪಾಂಗಲ್ಪಾಡಿ: ಕುಣಿತ ಭಜನೆ ತರಬೇತಿ ಉದ್ಘಾಟನೆ

ಬಂಟ್ವಾಳ: ಬಂಟ್ವಾಳ ತಾಲೂಕು ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಕುಣಿತ ಭಜನ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಡಿ.8ರಂದು ಸಂಜೆ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ಸತ್ಯನಾರಾಯಣ ಸಭಾ ಭವನದಲ್ಲಿ ಜರಗಿತು.  ಉದ್ಯಮಿ ಡಾ. ವರದರಾಜ ಪೈ ಮಾವಿನಕಟ್ಟೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಲಿಯುಗದಲ್ಲಿ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಅತಿ ಸುಲಭ ಮಾರ್ಗವೆಂದರೆ ಅದು ಭಗವನ್ನಾಮ ಸಂಕೀರ್ತನೆ. ಭಜನೆ ಮೂಲಕ ದೇವರನ್ನು ಸುಲಭವಾಗಿ ಒಲಿಸಿಕೊಳ್ಳಬಹುದು ಎಂದು ಹೇಳಿದರು.

ನಯನಾಡು ಶ್ರೀ ರಾಮ ಭಜನ ಮಂಡಳಿಯ ಅಧ್ಯಕ್ಷ ಸುಂದರ ಪೂಜಾರಿ ಕಾಜಲ ಅವರು ಅಧ್ಯಕ್ಷತೆ ವಹಿಸಿದ್ದರು.  ವಾಮದಪದವು ಶ್ರೀ ಗಣೇಶ ಭಜನ ಮಂಡಳಿಯ ಅಧ್ಯಕ್ಷ ಹರಿಪ್ರಸಾದ್ ಅವರು ಮಾತನಾಡಿ, ಭಕ್ತಿಯ ಜ್ಞಾನ ಜಾಗೃತಗೊಳಿಸಲು ಭಜನೆ ದಾರಿಯಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಭಜನೆ ಇಂದು ದೂರವಾಗುತ್ತಿರುವುದು ಖೇದಕರವಾಗಿದೆ. ಆಧುನಿಕ ತಂತ್ರಜ್ಞಾನಗಳ ಆಕರ್ಷಣೆಯಿಂದ ಯುವ ಜನಾಂಗ ಭಜನೆಯಿಂದ ದೂರವಾಗುತ್ತಿರುವ ಕಾಲಘಟ್ಟದಲ್ಲಿ ಯುವ ಜನತೆಯನ್ನು ಭಜನೆಯತ್ತ ಸೆಳೆಯುತ್ತಿರುವ ಕಾರ್ಯ ಮಾಡಿತ್ತಿರುವ ಶ್ರೀ ಶಾರದೋತ್ಸವ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.

0912pkt1
ಭಜನ ತರಬೇತುದಾರ, ರಾಯಿ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನ ಮಂಡಳಿಯ ಅಧ್ಯಕ್ಷ ದಿನೇಶ್ ಸುವರ್ಣ ಅವರು ಮಾತನಾಡಿ, ಭಜನೆ ಎಂಬುವುದು ಆಧ್ಯಾತ್ಮಿಕ ಚಿಂತನೆ ಮೂಡಿಸುವುದರ ಜತೆಗೆ ಮಾನಸಿಕ ನೆಮ್ಮದಿ, ಶಾರೀರಿಕ ಆರೋಗ್ಯವನ್ನೂ ನೀಡುತ್ತದೆ. ಮಕ್ಕಲಿಗೆ ಉತ್ತಮ ಸಂಸ್ಕಾರ, ಭಾಷಾ ಪ್ರಭುತ್ವವನ್ನು ನೀಡುತ್ತದೆ. ಭಜನೆಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಪಾಂಗಲ್ಪಾಡಿ ಶ್ರೀ ಕಷ್ಣ ಜನ್ಮಾಷ್ಟಮಿ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಕೆ.ಲಕ್ಷ್ಮೀ ನಾರಾಯಣ ಉಡುಪ, ಸಿದ್ದಕಟ್ಟೆ ವಲಯ ಶ್ರೀ ರಾಗತರಂಗಿಣಿ ಭಜನ ಒಕ್ಕೂಟ ಅಧ್ಯಕ್ಷ ರವೀಂದ್ರ ಪೂಜಾರಿ ಬದನಡಿ, ಪಾಂಗಲ್ಪಾಡಿ ಶ್ರೀ ವಿಷ್ಣು ಮೂರ್ತಿ ಭಜನ ಮಂಡಳಿ ಅಧ್ಯಕ್ಷ ಉಮೇಶ್ ಆಚಾರ್ಯ, ವಾಮದಪದವು ಶ್ರೀ ವೀರ ವಿಟ್ಠಲ ಭಜನ ಮಂಡಳಿ ಅಧ್ಯಕ್ಷ ಸತೀಶ್ ಪೂಂಜ, ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಡಾ. ರಾಮಕೃಷ್ಣ ಎಸ್. ಮತ್ತು ಪದಾ„ಕಾರಿಗಳು ಉಪಸ್ಥಿತರಿದ್ದರು.  ದಯಾನಂದ ಎಸ್. ಎರ್ಮೆನಾಡು ಸ್ವಾಗತಿಸಿದರು. ಶಂಕರ ಶೆಟ್ಟಿ ಬೆದ್ರಮಾರ್ ವಂದಿಸಿದರು. ಗಣೇಶ್ ಶೆಟ್ಟಿ ಸೇವಾ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter