ಕಾವಳಮೂಡೂರು ಗ್ರಾ.ಪಂ. ಮಾದರಿ ಗ್ರಾಮ ದತ್ತು ಯೋಜನೆ ಸಮಾಲೋಚನ ಸಭೆ
ಬಂಟ್ವಾಳ: ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ , ಸೆಲ್ಕೊ ಫೌಂಡೇಶನ್ ಬೆಂಗಳೂರು, ಬಿ.ಎ. ಐಟಿಐ ತುಂಬೆ ಇವರ ಆಶ್ರಯದಲ್ಲಿ ಕಾವಳಮೂಡೂರು ಗ್ರಾಮ ಪಂಚಾಯತನ್ನು ದತ್ತು ಸ್ವೀಕಾರ ಪಡೆದಿದ್ದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಾಲೋಚನ ಸಭೆ ಕೆದ್ದಳಿಕೆ ಹಿ.ಪ್ರಾ.ಶಾಲೆಯಲ್ಲಿ ಶನಿವಾರ ನಡೆಯಿತು. ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಭಾರತೀಯ ವಿಕಾಸ ಟ್ರಸ್ಟ್‍ನ ಮುಖ್ಯ ಸಲಹೆಗಾರ ಬಾಲಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ, ಸುಮಾರು 44 ವರ್ಷಗಳಿಂದ ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟ್ರಸ್ಟ್ ನ ಸಾಮಾಜಿಕ ಸೇವಾ ಪ್ರಯುಕ್ತ ಜಿಲ್ಲೆಯ ಒಂದು ಗ್ರಾಮದ ಪೈಕಿ ಕಾವಳಮೂಡೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಸೆಲ್ಕೊ ಫೌಂಡೇಶನ್ ಜತೆ ದತ್ತು ಸ್ವೀಕಾರ ಪಡೆದುಕೊಳ್ಳಲಾಗಿದೆ ಎಂದರು. ದತ್ತು ಯೋಜನೆಯಲ್ಲಿ ಡಿಜಿಟಲ್ ಕ್ಲಾಸ್‍ರೂಮ್, ಇ-ಗವರ್ನೆನ್ಸ್, ಸ್ವೋದ್ಯೋಗ, ಗುಡಿ ಕೈಗಾರಿಕೆಗಳ ಅಭಿವೃದ್ಧಿ, ಮಾರುಕಟ್ಟೆ ಸಂಪರ್ಕ, ಸೋಲಾರ್ ವಿಲೇಜ್ ಮೊದಲಾದ ಕಾರ್ಯಕ್ರಮಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಮ್ಮಿ ಕೊಳ್ಳಲಾಗಿದೆ ಎಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷ ಸಂತೋಷ್ ಪೂಂಜ , ಟ್ರಸ್ಟ್ ಸದಸ್ಯರಾದ ಅರುಣ್ ಪಟವರ್ಧನ್, ಜೀವನ್, ಪ್ರತಿಮಾ, ತುಂಬೆ ಬಿಎ ಐಟಿಐ ಪ್ರಾಂಶುಪಾಲ ನವೀನ್, ಪ್ರೋ ಗ್ರಾಮರ್‍ಗಳಾದ ಕಿಶನ್, ಕೀರ್ತೇಶ್, ಕಾವಳಮೂಡೂರು ವ್ಯ.ಸೇ.ಸ.ಸಂಘದ ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಪೀರ್ಯ, ಗ್ರಾ.ಪಂ. ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ಸತೀಶ್ ಪೂಜಾರಿ ಪಡಂತ್ರಬೆಟ್ಟು, ಇಸ್ಮಾಯಿಲ್ ಸಿದ್ದೀಕ್, ಜಯಂತ ಪ್ರಭು, ಮೋಹನ್ ಆಚಾರ್ಯ, ಪೂವಕ್ಕ, ಕೃಷ್ಣಪ್ಪ ನಾಯ್ಕ, ವಿಶಾಲಾಕ್ಷಿ ಪುಟ್ಟಪ್ಪ, ಚಂಪಾ, ಪ್ರಮುಖರಾದ ರಾಜಗೋಪಾಲ, ಯಶೋಧರ ಕಲ್ಲಂಜ, ಪಡಿ ಸಂಸ್ಥೆಯ ರಾಜೇಶ್ವರಿ, ವಿವಿಧ ಶಾಲಾ ಮುಖ್ಯ ಶಿಕ್ಷಕರಾದ ಪುಷ್ಪಲತಾ, ಪ್ರೇಮಾ ಕೆ.ಕೆ., ಉಮಾ ಡಿ.ಗೌಡ, ಚಂದ್ರಶೇಖರ ನಾಯಕ್, ಪತ್ರಕರ್ತರಾದ ಮೋಹನ ಕೆ.ಶ್ರೀಯಾನ್, ಸಂದೀಪ್ ಸಾಲ್ಯಾನ್, ರತ್ನದೇವ್, ಕೆದ್ದಳಿಕೆ ಶಾಲಾ ಶಿಕ್ಷಕ ವೃಂದ, ಗ್ರಾಮಸ್ಥರು ಉಪಸ್ಥಿತರಿದ್ದರು.
ರಾಷ್ಟ್ರ ಪ್ರಶಸ್ತಿ ಪುರಸ್ಕøತ ಕೆದ್ದಳಿಕೆ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಸ್ವಾಗತಿಸಿದರು. ಶಿಕ್ಷಕ ಚಂದಪ್ಪ ವಂದಿಸಿದರು.