Published On: Tue, Nov 19th, 2019

ಇರುವೈಲ್ ಗ್ರಾ.ಪಂ ಸದಸ್ಯ ಬಟಾರ ಮನೆ ಶಿವಪ್ಪ ಪೂಜಾರಿ ನಿಧನ

ಇರುವೈಲ್: ಹೈಕೋರ್ಟ್ ಎಡ್ವಕೇಟ್ ತಾರನಾಥ ಪೂಜಾರಿ ಅವರ ಸಹೋದರ ಇರುವೈಲ್ ಗ್ರಾ. ಪಂ. ಸದಸ್ಯ ಶಿವಪ್ಪ ಪೂಜಾರಿ (64) ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ .ನ.17ರಂದು ನಿಧನರಾದರು. ಮೃತರು ಪತ್ನಿ ಇಬ್ಬರು ಹೆಣ್ಣು ಮಕ್ಕಳನ್ನು ಹಾಗೂ ತಾಯಿ ಮುತ್ತು ಪೂಜಾರ್ತಿ , ಸಹೋದರ ಧರ್ಮಣ ಪೂಜಾರಿ ಮತ್ತು ಸಹೋದರಿಯರನ್ನು ಅಪಾರ ಬಂದುವರ್ಗದವರನ್ನು ಅಗಲಿದ್ದಾರೆ.mbd_nov18_3 Shivappa Poojary

ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದ ಪ್ರಸ್ತುತ ಹತ್ತು ವರ್ಷಗಳಿಂದ ಗ್ರಾ.ಪಂ. ಸದಸ್ಯರಾಗಿ ಸೇವೆ ಸಲ್ಲಿಸಿದ ಶಿವಪ್ಪ ಪೂಜಾರಿ ಅವರ ಅಂತ್ಯೆಕ್ರೀಯೆಯು ಇರುವೈಲ್ ಬಟಾರ ಮನೆಯ ವಠಾರದಲ್ಲಿ ನೆರವೇರಿತು. ಅಂತ್ಯೆಕ್ರೀಯೆಯಲ್ಲಿ   ಮಾಜಿ ಸಚಿವ ಅಭಯಚಂದ್ರ ಜೈನ್, ಜಿ. ಪಂ. ಸದಸ್ಯ ಸುಚರಿತ ಶೆಟ್ಟಿ, ,ಪಿಡಿಒ ಕಾಂತಪ್ಪ, ಇರುವೈಲ್ ಗ್ರಾ.ಪಂ ಅಧ್ಯಕ್ಷೆ ನವೀನ ಗ್ರಾಮ ಪಂಚಾಯತ್ ಸದಸ್ಯರು ,  ಪ್ರತ್ವಿರಾಜ್ , ಸತಿಶ್ಚಂದ್ರ ಸಾಲಿಯಾನ್,ರಂಜಿತ್ ಪೂಜಾರಿ,ಚಂದ್ರಾಹಾಸ ಸನಿಲ್, ಎಡ್ವಕೇಟ್ ಬಿ.ಎ ಮಹಮ್ಮದ್ ಹನೀಪ್, ತಾ.ಪಂ. ಸದಸ್ಯ ರೀಟಾ ಕುಟಿನೊ ,ಬಿ.ಎ. ಅಬುಬಕ್ಕರ್, ಪೂವಪ್ಪ ಪೂಜಾರಿ, ಯೋಗೀಶ್ ಬಂಗೇರಾ, ರಾಮಪ್ಪ ಪೂಜಾರಿ , ಹಲಾವಾರು ಬಂದುಮಿತ್ರರು ಪಾಲ್ಗೊಂಡಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter