Published On: Mon, Nov 11th, 2019

ನ.14 ರಂದು ಅಮ್ಮುಂಜೆ ಶಾಖೆಯ ಕಟ್ಟಡ “ಸ್ವರ್ಣ ಸೌಧದ” ಲೋಕಾರ್ಪಣೆ

 ಪೊಳಲಿ: ಪೊಳಲಿ ಸೇವಾ ಸಹಕಾರ ಸಂಘ(ನಿ.) ಇದರ ನೂತನ ಅಮ್ಮುಂಜೆ ಶಾಖೆಯ ಕಟ್ಟಡ “ಸ್ವರ್ಣ ಸೌಧದ” ಲೋಕಾರ್ಪಣೆ ಹಾಗೂ ಜಿಲ್ಲಾ ಮಟ್ಟದ 66 ನೇ ಸಹಕಾರ ಸಪ್ತಾಹದ ಉದ್ಘಾಟನೆ ಮತ್ತು ಗ್ರಾಮೀಣ ಸಹಕಾರ ಸಂಘಗಳ  ಮೂಲಕ ಅನ್ವೇಷಣೆ ದಿನಾಚರಣೆ ಕಾರ್ಯಕ್ರಮ ನ.14 ರಂದು ಗುರುವಾರ ಅಮ್ಮುಂಜೆ ಶಾಖೆಯ ವಠಾರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಪಿ.ವೆಂಕಟೇಶ್ ನಾವಡ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯರವಿ ಪೆರ್ನಾಂಡಿಸ್ ಜಂಟಿಯಾಗಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.8e5b677a-7cd8-4f6a-9914-3684590f1357
ಅಮ್ಮುಂಜೆ ಸೇವಾ ಸಹಕಾರಿ ಸಂಘ ಆರಂಭವಾಗಿ ತನ್ನ 50. ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆ ಸವಿ ನೆನಪಿಗಾಗಿ  ಸುಮಾರು 10. ಸೆಂಟ್ಸ್ ಜಾಗದಲ್ಲಿ 50ಲಕ್ಷ  ರೂ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಸ್ವರ್ಣ ಸೌಧದ ನಿರ್ಮಾಣ ವಾಗಿದೆ ಎಂದು ಅವರು ತಿಳಿಸಿದ್ದಾರೆ.ಈ ಕಟ್ಟಡದ ಉದ್ಘಾಟನೆಯನ್ನು ನ.14 ರಂದು ಗುರುವಾರ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ! ಪ್ರಭಾಕರ್ ಭಟ್ ಕಲ್ಲಡ್ಕ ಅವರು ನೆರವೇರಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ!ಎಂ.ಎನ್.ರಾಜೇಂದ್ರ ಕುಮಾರ್ ವಹಿಸಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬ್ಯಾಂಕಿಂಗ್ ವಿಭಾಗ ವನ್ನು ಉದ್ಘಾಟಿಸಲಿದ್ದಾರೆ.
ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಭದ್ರತಾ ಕೋಶದ ಉದ್ಘಾಟನೆ ನಡೆಸಲಿದ್ದು, ಮಾರಾಟ ವಿಭಾಗದ ಉದ್ಘಾಟನೆ ಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಮಾಡಲಿದ್ದಾರೆ.ಮಾಜಿ ಸಚಿವ ಅಮರನಾಥ ಶೆಟ್ಟಿ ಕಲ್ಪವೃಕ್ಷ ಠೇವಣಾತಿ ಬಿಡುಗಡೆ ಮಾಡಲಿದ್ದಾರೆ.ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಸಹಕಾರ ಸಪ್ತಾಹ ಉದ್ಘಾಟಿಸಲಿದ್ದಾರೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಗ್ರಾಮೀಣ ಸಹಕಾರ ಸಂಸ್ಥೆಗಳ ಮೂಲಕ ಅನ್ವೇಷಣೆ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಜಿ.ಪಂ.ಸದಸ್ಯರುಗಳು, ತಾಪಂ. ಸದಸ್ಯರು ಸೇರಿದಂತೆ ಅನೇಕ  ಜನಪ್ರತಿನಿಧಿಗಳು  ಹಾಗೂ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter