Published On: Sat, Nov 9th, 2019

5 ಶತಮಾನಗಳ ವಿವಾದಕ್ಕೆ ತೆರೆ // ವಿವಾದಿತ ಭೂಮಿಯನ್ನು ನ್ಯಾಸ್​ಗೆ ನೀಡಲು ಸುಪ್ರೀಂ ಕೋರ್ಟ್ ಆದೇಶ

ಬಂಟ್ವಾಳಾ :  ದೇಶದ ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದೆ. ಈ ಮೂಲಕ ಸುಮಾರು 5 ಶತಮಾನಗಳ ವಿವಾದಕ್ಕೆ ತೆರೆ ಬಿದ್ದಂತಾಗಿದೆ. ವಿವಾದಿತ ಭೂಮಿಯನ್ನು ನ್ಯಾಸ್​ಗೆ ನೀಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇನ್ನು ಸರಿಯಾಗಿ 10.30ಕ್ಕೆ ತೀರ್ಪನ್ನು ಓದಲು ಆರಂಭಿಸಿದ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯಿ, ಅರ್ಧಗಂಟೆಗೂ ಅಧಿಕ ಕೂಲಂಕುಶವಾಗಿ ವಿವರಿಸಿದರು.

CJI

 

1. ರಾಮ ಜನ್ಮ ಭೂಮಿ ವಿವಾದಿತ ಭೂಮಿ ರಾಮಜನ್ಮ ಭೂಮಿ ನ್ಯಾಸ್​ಗೆ ನೀಡಲು ಆದೇಶ   :-    ಈ ವೇಳೆ ಅಲಹಾಬಾದ್​ ಹೈ ಕೋರ್ಟ್​ ತೀರ್ಪನ್ನು ಬರ್ಖಾಸ್ತುಗೊಳಿಸಿದ ಸುಪ್ರೀಂ ಕೋರ್ಟ್​, ಮಸೀದಿ ಕಟ್ಟಲು ಪರ್ಯಾಯ ಜಾಗ ನೀಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿತು. ನಂತರ ವಿವಾದಿತ  ಸ್ಥಳವನ್ನು ರಾ ನೀಡಬೇಕು, ಕೇಂದ್ರ ಸರ್ಕಾರ ವಿವಾದಿತ ಸ್ಥಳವನ್ನ ಮೂರು ತಿಂಗಳಲ್ಲಿ ಪಡೆದುಕೊಂಡು ಸ್ವೀಕೃತದಾರರಿಗೆ ನೀಡಬೇಕು.

2. ರಾಮಲಲ್ಲಾನನ್ನು ಪಿರ್ಯಾಯುದಾರನಾಗಿ ಪರಿಗಣನೆ  :-   ವಿಶೇಷವೆಂದರೆ ಶಿಯಾ ವಕ್ಫ್​ ಬೋರ್ಡ್​​ ಹಾಗೂ ನಿರ್ಮೋಹಿ ಅಖಾಡವನ್ನು ಪಿರ್ಯಾಯದಾರ ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್​ ಸುನ್ನಿ ವಕ್ಫ್ ಬೋರ್ಡ್​ ಹಾಗೂ ರಾಮಲಲ್ಲಾನನ್ನು ಪರಿಗಣಿಸಿತು. ಆದರೆ, ವಿವಾದಿತ ಭೂಮಿಯನ್ನು ನೇರವಾಗಿ ರಾಮಲಲ್ಲಾನಿಗೆ ನೀಡದೇ, ರಾಮಜನ್ಮ ಭೂಮಿ ಟ್ರಸ್ಟ್​ಗೆ ನೀಡಿತು.

Front-1-Ram-Mandir-and-Supreme-Court

 

3. ಸುನ್ನಿ ವಕ್ಫಬೋರ್ಡ್​ಗೆ ಪರ್ಯಾಯವಾಗಿ 5 ಎಕರೆ ಸ್ಥಾನ ನೀಡಲು ಆದೇಶ  :-  ಈ ವೇಳೆ ಅಲಹಾಬಾದ್​ ಹೈ ಕೋರ್ಟ್​ ತೀರ್ಪನ್ನು ಬರ್ಖಾಸ್ತುಗೊಳಿಸಿದ ಸುಪ್ರೀಂ ಕೋರ್ಟ್​, ಮಸೀದಿ ಕಟ್ಟಲು ಪರ್ಯಾಯ ಜಾಗ ನೀಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿತು. ಮುಸ್ಲಿಮರಿಗೆ ಮಸೀದಿಗಾಗಿ ಪರ್ಯಾಯ ಜಾಗ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು.\

ಇನ್ನು ಸುನ್ನಿ ವಕ್ಫ್​​ ಬೋರ್ಡ್​ಗೆ ಪರ್ಯಾಯವಾಗಿ 5 ಎಕೆರೆ ಜಾಗವನ್ನು ನೀಡಬೇಕು ಎಂದು ತಿಳಿಸಿದ ಸುಪ್ರೀಂ ಕೋರ್ಟ್, ವಿವಾದಿತ ಜಾಗಕ್ಕೆ ಸಂಬಂಧಿಸಿದಂತೆ ಮುಸ್ಲಿಮ್​ ಕಕ್ಷಿದಾರರು ಸೂಕ್ತ ಸಾಕ್ಷ್ಯವನ್ನು ಒದಗಿಸಿಲ್ಲ, ವಿವಾದಿತ ಜಾಗವನ್ನು ತಮ್ಮದು ಎಂದು ಸಾಬೀತು ಪಡಿಸುವಲ್ಲಿ ಮುಸ್ಲಿಮ್​ ಕಕ್ಷಿದಾರರು ವಿಫಲವಾಗಿದ್ದಾರೆ ಎಂದು ಸ್ಪಷ್ಟಪಡಿಸಿತು.

sc

4. ರಾಮಜನ್ಮ ಭೂಮಿ ಟ್ರಸ್ಟ್ ನಿರ್ಮಿಸಲು ಆದೇಶ :-  ಮೂರು ತಿಂಗಳಲ್ಲಿ ಟ್ರಸ್ಟ್​ ನಿರ್ಮಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತು. ಅಲ್ಲದೇ ಆ ಟ್ರಸ್ಟ್​ ಮೂಲಕವೇ ಮಂದಿರ ನಿರ್ಮಾಣದ ದೇಖರೇಕಿ ಹಾಗೂ ವಶ ಪಡಿಸಿಕೊಂಡ ಭೂಮಿ ಹಂಚಿಕೆಯನ್ನು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

5. ಟ್ರಸ್ಟ್​ನಲ್ಲಿ ನಿರ್ಮೋಹಿ ಅಖಾಡಕ್ಕೆ ಪ್ರಾತಿನಿಧ್ಯ ನೀಡಲು ಸೂಚನೆ :-  ವಿಶೇಷ ಅಂದರೆ ನಿರ್ಮೋಹಿ ಅಖಾಡದ ಅರ್ಜಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ನಿರ್ಮಿಸುವ ಮಂಡಳಿಯಲ್ಲಿ ನಿರ್ಮೋಹಿ ಅಖಾಡದ ಪ್ರಾತಿನಿಧ್ಯಕ್ಕೆ ಅವಕಾಶವನ್ನು ನೀಡಬೇಕು ಎಂದು ಕೂಡ ತಿಳಿಸಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter