Published On: Fri, Nov 8th, 2019

ತ್ಯಾಜ್ಯ ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿ :ನಾಗೇಶ್ ಶೆಟ್ಟಿ

ಕುಪ್ಪೆಪದವು::ತ್ಯಾಜ್ಯವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿದ್ದು .ತ್ಯಾಜ್ಯ ನಿರ್ವಹಣೆಯ ಕುರಿತು ಸರಿಯಾದ ಮಾಹಿತಿ ಪಡೆದುಕೊಂಡು .ತ್ಯಾಜ್ಯ ಉತ್ಪತ್ತಿಯ ಸಂಧರ್ಭದಲ್ಲಿಯೇ .ಅದನ್ನು ವಿಂಗಡಿಸಿ ಸಮರ್ಪಕವಾದ ರೀತಿಯಲ್ಲಿ ನಿರ್ವಹಿಸಿದರೆ .ತ್ಯಾಜ್ಯದ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು ಹೇಳಿದ್ದಾರೆ .
IMG_20191108_170135_621ಅವರು ಶುಕ್ರವಾರ ಮುತ್ತೂರು ಪಬ್ಲಿಕ್ ಶಾಲೆಯಲ್ಲಿ .ದ .ಕ .ಜಿಲ್ಲಾಪಂಚಾಯತ್ ನ ಸಹಕಾರದಲ್ಲಿ .ಪಿಂಗಾರಕಲಾವಿದರು .ಅಭಿನಯಿಸಿದ ‘ತ್ಯಾಜ್ಯ ನಿರ್ವಹಣೆ ಕುರಿತ ಸಂವಹನ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು .ನಮ್ಮಿಂದ ಉತ್ಪತ್ತಿಯಾದ ಕಸವನ್ನು ಎಲ್ಲೆಂದರಲ್ಲಿ ಹಾಕಿ .ಆ ಕಸವನ್ನು ಯಾರೋ ತೆಗೆದು ಸ್ವಚ್ಛಗೊಳಿಸಬೇಕೆಂಬ ಅಸಡ್ಡೆ ಸಲ್ಲದು .ತ್ಯಾಜ್ಯ ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು .ಮುತ್ತೂರು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವಸಂತಿ ಯವರು ಮಾತನಾಡಿ ‘ಎಲ್ಲಾ ಗ್ರಾಮಸ್ಥರು ಮನಸ್ಸು ಮಾಡಿದರೆ ಸ್ವಚ್ಛಗ್ರಾಮ ಸಾಧ್ಯ .ಗ್ರಾಮಗಳು ಸ್ವಚ್ಛ ವಾದರೆ ಇಡೀ ದೇಶ ಸ್ವಚ್ಛವಾಗುತ್ತದೆ ಎಂದರು .ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಮಂಜುಳಾ .ಐ .ಜಿ .ಭರತ್ .ಎಸ್ ಕರ್ಕೇರ ತ್ಯಾಜ್ಯನಿರ್ವಹಣೆ ಕುರಿತು ಮಾತನಾಡಿದರು .ಪಂ .ಸದಸ್ಯ ತಾರಾನಾಥ ಕುಲಾಲ್ .ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ .ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ .ಆಶಾಕಾರ್ಯಕರ್ತೆ ಗೀತಾ. ಎಸ್ .ಆಳ್ವ .ವೇಣುಗೋಪಾಲ್ .ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .ಪಂಚಾಯತ್ ಸಿಬಂದಿ ಲಕ್ಷ್ಮಣ ಸಹಕರಿಸಿದರು .ಸಂತೋಷ್ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.
Attachments area

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter