Published On: Thu, Nov 7th, 2019

ಅಶೈಕ್ಷಣಿಕ ಮತ್ತು ಮಕ್ಕಳ ವೃತ್ತಿಶಿಕ್ಷಣ ಕಲಿಕೋತ್ಸವ

ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಕಛೇರಿ (ರಿ), ಸರ್ವಶಿಕ್ಷಣ ಅಭಿಯಾನ ಮಂಗಳೂರು,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ,ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಕರ್ನಾಟಕರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ(ರಿ) ಬೆಂಗಳೂರು-ದಕ್ಷಿಣ ಶಾಲಾ ಹಾಗೂ ಶ್ರೀರಾಮ ಪ್ರೌಢಶಾಲೆಕಲ್ಲಡ್ಕಇವರ ಸಂಯುಕ್ತಆಶ್ರಯದಲ್ಲಿದಕ್ಷಿಣಕನ್ನಡಜಿಲ್ಲಾ ಮಟ್ಟದ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ 2019-20 ಕಾರ್ಯಕ್ರಮನಡೆಯಿತು.

DSC_0363
ಕಸದಿಂದರಸ ಮಾಡುವ ಪರಿಕಲ್ಪನೆಯೇ ವೃತ್ತಿ ಶಿಕ್ಷಣ. ಜೀವನದಲ್ಲಿ ಹೊಸತನವನ್ನುಕಾಣಲು ವೃತ್ತಿ ಶಿಕ್ಷಣ ಅಗತ್ಯ, ಅಂತರದಲ್ಲಿ ಹುದುಗಿ ಸುಪ್ತ ಪ್ರತಿಭೆಯನ್ನು ಹೊರತಂದು ಹೊಸತನವನ್ನು ಸೃಷ್ಟಿ ಮಾಡುವುದರ ಮೂಲಕ ಜೀವನದಆನಂದ ಸಂತೋಷವನ್ನುಅನುಭವಿಸಬೇಕು.ಮಾತ್ರವಲ್ಲ ಸಮಯದ ಸದುಪಯೋಗಆದಾಗಧನಾತ್ಮಕ ಭಾವನೆಗಳು ಉದ್ದೀಪನಗೊಳ್ಳುತ್ತದೆ, ಎಂದುವಿವೇಕಾನಂದ ವಿದ್ಯಾವರ್ಧಕ ಸಂಘಪುತ್ತೂರುಇದರಅಧ್ಯಕ್ಷರಾದಡಾ|| ಪ್ರಭಾಕರ್ ಭಟ್‍ಕಲ್ಲಡ್ಕರವರುಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

DSC_0472
ಇವರು ಶ್ರೀರಾಮ ಪ್ರೌಢಶಾಲೆಕಲ್ಲಡ್ಕದಲ್ಲಿ ಹಮ್ಮಿಕೊಂಡದಕ್ಷಿಣಕನ್ನಡಜಿಲ್ಲಾ ಮಟ್ಟದ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲೋತ್ಸವಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮನುಷ್ಯನನ್ನು ಕೇವಲ ಯಂತ್ರವನ್ನಾಗಿ ಮಾಡದೆ, ಕೌಶಲ್ಯ ಭರಿತ, ಭಾವನಾತ್ಮಕಜೀವಿಯನ್ನಾಗಿ ಮಾಡಬೇಕುಎಂದರು.
ಕಾರ್ಯಕ್ರಮದಲ್ಲಿಕನ್ನಡವಿಷಯಪರಿವೀಕ್ಷಕರಾದ ಶಮಂತ್‍ರವರು ಮಾತಾಡಿ ಇಂದಿನ ಪೀಳಿಗೆ ಜ್ಞಾನದ ಬದಲು ಮೊಬೈಲ್‍ನಕಡೆಗೆ ವಾಲುತ್ತದೆ. ಇದರಿಂದ ಮನಸ್ಸು ಹಾಳಾಗುತ್ತದೆ, ಪರಿಹಾರವಾಗಿಇಂತಹ ವೃತ್ತಿಕ್ಷಣವನ್ನುಕಲಿತರೆ ಮುಂದಾಗುವದೊಡ್ಡಅನಾಹುತವನ್ನುತಪ್ಪಿಸಬಹುದುಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದಜ್ಞಾನೇಶ್‍ಎಮ್ ಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಂಟ್ವಾಳ ವೃತ್ತಿ ಶಿಕ್ಷಣದ ಮೂಲ ಪರಿಕಲ್ಪನೆಕೊಟ್ಟವರುಗಾಂಧೀಜಿಯವರು, ಶಿಕ್ಷಣ ಕೇವಲ ಭೌತಿಕಜ್ಞಾನವಲ್ಲ ಬದಲಾಗಿ ನೈತಿಕ, ಸಾಂಸ್ಕøತಿಕ, ವೈಜ್ಞಾನಿಕ, ವೈಚಾರಿಕ, ಸಾಮಾಜಿಕ, ಬೆಳವಣಿಗೆಗೆ ದಾರಿಮಾಡಿಕೊಡುತ್ತದೆಎಂದರು.
ಕಾರ್ಯಕ್ರಮದಲ್ಲಿಕನ್ನಡಾಂಬೆ ಭುವನೇಶ್ವರಿಯ ಪ್ರತಿಮೆಯಅನಾವರಣವನ್ನುಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಿಲ್ಪಾ ರಮೇಶ್‍ಕಲ್ಲಡ್ಕ ಹಾಗೂ ಶ್ರೀರಾಮ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿಯಾದ ನಿತಿನ್‍ಕಲ್ಲಡ್ಕರವರುತಮ್ಮ ಶುಭ ಹಸ್ತದಲ್ಲಿ ಮಾಡಿದರು.

DSC_0372
ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ್ ಮಾಧವ, ವಯಸ್ಕರ ಶಿಕ್ಷಣಾಧಿಕಾರಿಯಾದ ಸುಧಾಕರ್ ಕೆ, ವಸ್ತು ಪ್ರದರ್ಶನ ನೋಡಲ್‍ಅಧಿಕಾರಿ ಶೊಭಾಎನ್, ಬಂಟ್ವಾಳದ ಕ್ಷೇತ್ರಸಮನ್ವಯಅಧಿಕಾರಿರಾಧಾಕೃಷ್ಣ, ಶ್ರೀರಾಮ ವಿದ್ಯಾಕೇಂದ್ರ ಸಹಸಂಚಾಲಕರಾದರಮೇಶ್‍ಎನ್, ಕಲ್ಲಡ್ಕ ಲಕ್ಷ್ಮೀಗಣೇಶ್‍ಹೋಟೇಲಿನ ಮಾಲಿಕರಾದರಾಜೇಂದ್ರ ಹೊಳ್ಳ, ಮೈಸ್ ಸಂಸ್ಥೆಯ ಮಾಲಕರಾದರಮೇಶ್ ಪೂಜಾರಿ, ಸಂಭ್ರಮಎಲೆಕ್ಟ್ರಾನಿಕ್‍ನ ಮಾಲಕರಾದಗಿರೀಶ್ ನೆಟ್ಲ, ದಕ್ಷಿಣಕನ್ನಡಜಿಲ್ಲಾಚಿತ್ರಕಲಾ ಸಂಘದಅಧ್ಯಕ್ಷರಾದಚೆನ್ನಕೇಶವ, ಬಂಟ್ವಾಳ ತಾಲೂಕುಚಿತ್ರಕಲಾ ಸಂಘದಅಧ್ಯಕ್ಷರಾದ ಮುರಳಿ ಕೃಷ್ಣ, ಶಿಕ್ಷಣ ಸಂಯೋಜಕರಾದ ಸುಶೀ¯,ಬಂಟ್ವಾಳ ತಾಲೂಕು ಮುಖ್ಯೋಪಾದ್ಯಾಯರ ಸಂಘದಅಧ್ಯಕ್ಷರಾದರಮಾನಂದ, ಶ್ರೀರಾಮ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ವಸಂತಿಕುಮಾರಿ, ಶ್ರೀರಾಮ ಪ್ರೌಢಶಾಲಾ ಶಿಕ್ಷಕರು, ದ.ಕಜಿಲ್ಲಾ ವಿವಿಧ ಶಾಲೆಯಎಲ್ಲಾ ಶೀಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನುದೇವದಾಸ್ ಕೆ ಸ್ವಾಗತಿಸಿ, ಸುಫಲಾ ಬಿ ವಂದಿಸಿ, ಜಿನ್ನಪ್ಪ ಏಳ್ತಿಮಾರ್ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter