Published On: Wed, Oct 23rd, 2019

ಮಾತಿನ ಚತುರ ತೇಜೇಶ್.ಜೆ.ಬಂಗೇರ

ಅರಳು ಹುರಿದಂತೆ ಮಾತನಾಡುತ್ತಾ ತಮ್ಮ ಮಾತಿನಮೋಡಿಯ ಮೂಲಕವೇ ಜನರನ್ನು ರಂಜಿಸುತ್ತಿರುವವರು ತೇಜೇಶ್ .ಜೆ.ಬಂಗೇರ.ಮೂಲತಹ ಉಡುಪಿಯವರಾಗಿದ್ದು ತಂದೆ ಜಯಬಂಗೇರ ಹಾಗೂ ತಾಯಿ ಸುಗಂಧಿಯವರ ಪ್ರೋತ್ಸಾಹ ಇವರ ಸಾಧನೆಗೆ ಪ್ರೇರಣೆ. ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಆದಿವುಡುಪಿ ಯಲ್ಲಿ ಪಡೆದರು. ಪದವಿ ಪೂರ್ವ ಶಿಕ್ಷಣವನ್ನು ತೆಂಕನಿಡಿಯೂರಿನಲ್ಲಿ ,ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣ ವನ್ನು ಪೂರೈಸಿದರು.ಇವರ ತಂದೆಯವರು ಮೂಲತಹ ಯಕ್ಷಗಾನ,ಭಜನೆ ಹಾಗೂ ನಾಟಕ ಕಲಾವಿದರಾಗಿದ್ದವರು. ಮನೆಯ ವಾತಾವರಣವೇ ಸಾಂಸ್ಕೃತಿಕ ಮಯವಾಗಿತ್ತು. ಹಾಗಾಗಿ ಇದುವೇ ಇವರನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡಿದೆ.

07665da5-e8ee-432c-8c0d-784530a71cb7
ತಮ್ಮ ತಂದೆಯವರಿಂದ ಯಕ್ಷಗಾನದ ಬಾಲಪಾಟವನ್ನು ಕಲಿತರು. ನಂತರ ಹೆಚ್ಚಿನ ಯಕ್ಷಶಿಕ್ಷಣವನ್ನು ಬನ್ನಂಜೆ ಸಂಜೀವ ಸುವರ್ಣರಿಂದ ಪಡೆದು ಕೊಂಡರು.ಇದೀಗ ಸುಮಾರು ನೂರಕ್ಕೂ ಹೆಚ್ಚು ಪಾತ್ರಗಳನ್ನು ಮಾಡುತ್ತಾ ರಂಗದ ಮೇಲೆ ಜನರನ್ನು ರಂಜಿಸುತ್ತಿದ್ದಾರೆ. ಇವರು ಕೇವಲ ಯಕ್ಷಗಾನ ಕಲಾವಿದ ಮಾತ್ರವಲ್ಲದೆ ರಾಜ್ಯ ಮಟ್ಟದ ಭಾಷಣ ಗಾರನು ಹೌದು. ಅಚಾನಕ್ಕಾಗಿ ಸಿಕ್ಕ ನಿರೂಪಣಾ ಅವಕಾಶವೇ ಇಂದು ಇವರನ್ನು ಪ್ರಸಿದ್ದಿಯ ಮುನ್ನಲೆಗೆ ತಂದಿದೆ. ಎಂಟನೇ ತರಗತಿಯಿಂದ ನಿರುಪಣಾ ಕ್ಷೇತ್ರದಲ್ಲಿತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಇವರ ನಿರೂಪಣ ಕ್ಷೇತ್ರಕ್ಕೆ ಇದೀಗ ಹನ್ನೊಂದರ ಹರಯ.

ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಉಡುಪಿಯ ಪ್ರಸಿದ್ಧ ಸುದ್ದಿವಾಹಿನಿಯಾದ ಮುಕ್ತ ವಾಹಿನಿಯಲ್ಲಿ ನಿರೂಪಕರಾಗಿ ಮತ್ತು ಕಾರ್ಯನಿರ್ವಾಹಕರಾಗಿ ನೇಮಕಗೊಂಡರು. ಮುಕ್ತ ವಾಹಿನಿಯಲ್ಲಿ ಇವರು ನಡೆಸಿ ಕೊಡುವ ಮುಂಜಾನೆ ಮಾತು, ವೀಕ್ಷಕರ ನೋವು ನಲಿವುಗಳ ಕ್ಷಣಗಳನ್ನು ಹಂಚಿಕೊಳ್ಳುವ ನೂರೊಂದು ನೆನಪು ಎದೆಯಾಳದಿಂದ, ಪ್ರತಿಭೆಗಳ ಪಾಲಿನ ಮುಕುಟವಾಗಿರುವ ಅನ್ವೇಷಣ್, ಮುಕ್ತ ವೇದಿಕೆ, ಬಣ್ಣ ಬಣ್ಣದ ಬದುಕು, ಡಿಬೆಟಿಂಗ್ ಟು ನೈಟ್, ಯಕ್ಷ ಕುಸುಮ ಹೀಗೆ ಹತ್ತು ಹಲವು ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಾ ಹಲವಾರು ಬಾರಿ ವಾರ್ತಾ ವಾಚಕರಾಗಿಯೂ ಕಾಣಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಜಾನಪದ ನೃತ್ಯ,ಫಿಲ್ಮಿ ಡ್ಯಾನ್ಸ್, ಡ್ರಾಮಾ ವಿದ್ ಡ್ಯಾನ್ಸ್ ಹೀಗೆ ಹಲವು ಪ್ರಕಾರದ ನೃತ್ಯಗಳನ್ನು ಮಾಡುವುದರ ಜೊತೆಗೆ ಇದುವರೆಗೆ ಸುಮಾರು ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಹಾಸ್ಯ ,ಕಥಾ ನಾಯಕ, ಖಳನಾಯಕ ದಂತಹ ಪಾತ್ರಗಳಲ್ಲಿ ಮಿಂಚಿದ್ದಾರೆ.

ತಮ್ಮನ್ನು ಸಮಾಜಸೇವೆಯಲ್ಲಿಯೂ ತೊಡಗಿಸಿ ಕೊಂಡಿದ್ದಾರೆ.ಪ್ರಸ್ತುತ ಉಡುಪಿ ಡ್ರೀಮ್ ಮೇಕರ್ಸ್ ಎಂಬ ಇವೆಂಟ್ ಮ್ಯಾನೇಜ್ಮೆಂಟ್ ಅನ್ನು ಪ್ರಾರಂಭಿಸಿದ್ದಾರೆ. ಉಡುಪಿ, ಮಂಗಳೂರು ಮಾತ್ರವಲ್ಲದೆ ಮುಂಬೈಯಲ್ಲಿಯು ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಿದ್ದಾರೆ. ಇವರ ಈ ಪ್ರತಿಭೆಯನ್ನು ಗಮನಿಸಿದ ಸುಮಾರು ನೂರೈವತ್ತಕ್ಕೂ ಸಂಘ ಸಂಸ್ಥೆ ಗಳು ಗೌರವಿಸಿವೆ.

ತೇಜೇಶ್ ಕೋಟ್

ಇಲ್ಲಿಯವರೆಗೆ ಸುಮಾರು ೧೫೦೦ಕ್ಕು ಅಧಿಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದೇನೆ. ಪ್ರತಿಯೊಂದು ಕಾರ್ಯಕ್ರಮವು ನನ್ನ ಬೆಳವಣಿಗೆಗೆ ಸಹಕಾರಿಯಾಗಿದೆ.ಇದೇಕ್ಷೇತ್ರದಲ್ಲಿ ಮುಂದುವರೆಯುವ ಆಸೆ ,ಆಸಕ್ತಿ ಇದೆ

ಶ್ರೀರಕ್ಷ ರಾವ್ ಪುನರೂರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter