Published On: Wed, Oct 16th, 2019

ಕಳವು ಪ್ರಕರಣ: ಆರೋಪಿ ಸೆರೆ

ಬಂಟ್ವಾಳ: ಬಿ.ಸಿ.ರೋಡಿನ ನಂದಿನಿ ಮಿಲ್ಕ್ ಪಾಯಿಂಟ್ ನಲ್ಲಿ ನಡೆದಿದೆಯೆನ್ನಲಾದ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಬಂಟ್ವಾಳ ಅಪರಾಧ ವಿಭಾಗದ ಪೋಲೀಸರು ಬಂಧಿಸಿದ್ದಾರೆ.ಪುತ್ತೂರು ಸಾಲುಮರ ನಿವಾಸಿ ಯೂಸೂಪ್ ಅವರ ಪುತ್ರ ಕೆ.ಮಹಮ್ಮದ್ ಸಲಾಂ ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ ಒಂದು ಬೈಕ್, ನಗದು ಹಣ, ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು,ಇದರ  ಮೌಲ್ಯ 60ಸಾವಿರ ಎಂದು ಅಂದಾಜಿಸಲಾಗಿದೆ.IMG-20191015-WA0073

ಬಂಟ್ವಾನ ನಗರ ಠಾಣೆಯ ಮೂಗಿನ ನೇರದಲ್ಲಿರುವ ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿರುವ ನಂದಿನಿ ಮಿಲ್ಕ್ ಪಾಯಿಂಟ್‌ ನಲ್ಲಿ ಆ.5 ರಂದು ಮುಂಜಾನೆ ಕಳವು ನಡೆದಿತ್ತು ಎನ್ನಲಾಗಿದೆ.ಅಲೋಶಿಯಸ್ ಡಿ.ಸೋಜ ಅವರಿಗೆ ಸೇರಿದ ನಂದಿನಿ ಮಿಲ್ಕ್ ಪಾಯಿಂಟ್ ಶಟರ್ ಮುರಿದು ಒಳಪ್ರವೇಶಿಸಿದ ಆರೋಪಿ ಕೌಂಟರ್ ನಲ್ಲಿದ್ದ ಹನ್ನೊಂದು ಸಾವಿರ ರೂ ಕಳವುಗೈದು ಪರಾರಿಯಾಗಿದ್ದ ಎಂದು ಹೇಳಲಾಗಿತ್ತು.ಸೋಮವಾರ  ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪೋಲೀಸರು ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ  ಬೈಕನ್ನು ಅನುಮಾನಾಸ್ಪದವಾಗಿ ಚಲಾಯಿಸ ಬರುತ್ತಿದ್ದುದನ್ನು ತಡೆದಾಗ  ಆರೋಪಿ ಪೋಲಿಸರನ್ನು ಕಂಡು ಪರಾರಿಯಾಗಲು ಯತ್ನಿಸಿದಾಗ ತಕ್ಷಣ ಪೋಲೀಸ್ ಸಿಬ್ಬಂದಿಗಳು ಈತನನ್ನು ವಶಕ್ಕೆಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ವಿರುದ್ದ ಪುತ್ತೂರು ನಗರ ಠಾಣೆ  , ಗೋವಾ ರಾಜ್ಯದ ಮಡಗಾಂವ್ ಪೋಲೀಸ್ ಠಾಣೆ, ಹಾಗೆಯೇ ಇತರ ಪೋಲೀಸ್ ಠಾಣೆಗಳಲ್ಲಿಯು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರ ವಿಚಾರಣೆಯ ವೇಳೆ ಬಯಲಿಗೆ ಬಂದಿದೆ.ಆರೋಪಿಯನ್ನು ಪೋಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter