Published On: Sat, Oct 12th, 2019

ಮಾನವೀಯಮೌಲ್ಯ ಮೈಗೂಡಿಸಿ : ಪ್ರಭು

 ಬಂಟ್ವಾಳ:  ಸಾರ್ವಜನಿಕ ಬದುಕಿಗೆ ಎನ್ .ಎಸ್ .ಎಸ್ ಪೂರಕವಾಗಿದ್ದು, ವಿದ್ಯಾರ್ಥಿಗಳು ಈ ಶಿಬಿರವನ್ನು ಸದುಪಯೋಗಪಡಿಸಿಕೊಂಡು ಸದ್ಗುಣಗಳೊಂದಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿ ದೇಶದ ಉತ್ತಮ ನಾಗರಿಕರಾಗಿ ಬದುಕಬೇಕೆಂದು ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ಹೇಳಿದ್ದಾರೆ.
IMG-20191011-WA0051 ರಾಯಿ     ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ನಡೆದ  ಸಿದ್ದಕಟ್ಟೆ  ಸ.ಪ.ಪೂ ಕಾಲೇಜಿನ   2019-20 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯನ್ನು  ನೆರ   ವೇರಿಸಿ ಅವರು ಮಾತನಾಡಿದರು.  ಮುಖ್ಯ ಅತಿಥಿಗಳಾಗಿದ್ದ ರಾಯಿ ಗ್ರಾಮ ಪಂಚಾಯಿತ್ ನ ಮಾಜಿ ಅಧ್ಯಕ್ಷ,ಹಾಲಿ  ಸದಸ್ಯ  ಹರೀಶ್ ಆಚಾರ್ಯ, ಕೊಯಿಲ ಸ.ಹಿ.ಪ್ರಾ ಶಾಲೆಯ  ನಿವೃತ್ತ ಮುಖ್ಯೋಪಧ್ಯಾಯ  ವೇದಾನಂದ ಕಾರಂತ,  ರಾಯಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಖ್ಯೋಪಧ್ಯಾಯರಾದ ಜಯರಾಮ ಪಡ
 ಅತಿಥಿಗಳಾಗಿ ಭಾಗವಹಿಸಿ  ಶುಭಹಾರೈಸಿದರು. ರಾಯಿ  ಹಾಲು ಉತ್ಪಾದಕರ ಸಂಘದ ಅಧ್ಯಕ್ಷ  ಸುಂದರ ಭಂಡಾರಿ, ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ರಾಯಿಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್ ಮೀಯಾಲು, ರಾಯಿ ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಎಸ್ ಡಿ ಎಂ ಸಿ  ಉಪಾಧ್ಯಕ್ಷ ರಮೇಶ್ ಗೌಡ, ಕಾಲೇಜಿನ ಪ್ರಾಂಶುಪಾಲರಾದ ಉದಯಕುಮಾರ್,ಶಾಲೆಯ  ದೈಹಿಕ ಶಿಕ್ಷಕಿ ಗಾಯತ್ರಿ ದೇವಿ ಉಪಸ್ಥಿತರಿದ್ದರು. ರಾಯಿ ಗ್ರಾಮ ಪಂಚಾಯಿತ್ ಅಧ್ಯಕ್ಷ ದಯಾನಂದ ಸಫಲ್ಯಅಧ್ಯಕ್ಷತೆ ವಹಿಸದ್ದರು. ಎನ್ ಎಸ್ ಎಸ್ ಯೋಜನಾಧಿಕಾರಿ  ಶೀನಪ್ಪ ಎನ್ ಸ್ವಾಗತಿಸಿ ಪ್ರಸ್ತಾವನೆಗೈದರು.  ಮುಕುಂದ ಭಟ್  ವಂದಿಸಿದರು. ಉಪನ್ಯಾಸಕ ಸಂಜಯ್ ಬಿ.ಎಸ್ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter