Published On: Wed, Oct 9th, 2019

ವಾಮದಪದವಿನಲ್ಲಿ ಸ್ವಚ್ಚತಾ ಕಾರ್ಯ

ಬಂಟ್ವಾಳ: ವಾಮದಪದವು ಸರಕಾರಿ  ಪ್ರಥಮ  ದರ್ಜೆ ಕಾಲೇಜಿನ  ರಾಷ್ಟ್ರೀಯ  ಸೇವಾ ಯೋಜನೆ,  ಗ್ರಾಮ ಪಂಚಾಯತ್  ಚೆನ್ನೈತ್ತೋಡಿ, ಸಮುದಾಯ  ಆರೋಗ್ಯ ಕೇಂದ್ರ ವಾಮದಪದವು ಇವರ ಜಂಟಿ ಆಶ್ರಯದಲ್ಲಿ ಗಾಂಧಿಜಯಂತಿ ಪ್ರಯುಕ್ತ ಗ್ರಾಮ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಯಿತು.
SWACHATHA PROGRAMME PHOTO
ಚೆನ್ನೈತ್ತೋಡಿ  ಗ್ರಾಮಪಂಚಾಯತ್ ಅಧ್ಯಕ್ಷ  ಯತೀಶ್ ಎಂ ಶೆಟ್ಟಿ  ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲರಾದ ಪ್ರೊ.ಹರಿಪ್ರಸಾದ್ ಬಿ.ಶೆಟ್ಟಿ ಇವರು ಅಧ್ಯಕ್ಷತೆಯನ್ನು  ವಹಿಸಿದ್ದರು.  ಜನಜಾಗೃತಿ ವೇದಿಕೆ ಸಿದ್ಧಕಟ್ಟೆವಲಯದ ನಿಕಟಪೂರ್ವ ವಲಯಾಧ್ಯಕ್ಷ  ನವೀನ್ ಚಂದ್ರ ಶೆಟ್ಟಿ, ಗ್ರಾಮಪಂಚಾಯತ್  ಸದಸ್ಯರಾದ ಆನಂದ ಆಚಾರ್ಯ, ಅನಂತ ಪೈ ,  ರಾಷ್ಟ್ರೀಯ  ಸೇವಾ ಯೋಜನಾಧಿಕಾರಿ  ಪ್ರೊ.ರೊನಾಲ್ಡ್ ಪ್ರವೀಣ್ ಕೊರೆಯ  , ಆಶಾ ಕಾರ್ಯಕರ್ತೆಯರು ,ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಾವಿನಕಟ್ಟೆ  ಬಸ್ ನಿಲ್ದಾಣದ ಸ್ವಚ್ಛತೆಯೊಂದಿಗೆ ವಾಮದಪದವಿನವರೆಗಿನ ರಸ್ತೆ ಹಾಗೂ ಬಸ್ ನಿಲ್ದಾಣಗಳನ್ನು  ಸ್ವಚ್ಛಗೋಳಿಸಲಾಯಿತು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter