Published On: Sun, Sep 22nd, 2019

ಮನೆಗಳ ಮುಂಭಾಗ ಕೊಳಚೆ ನೀರು ತುಂಬಿದ ಪರಿಣಾಮ ಸ್ಥಳೀಯರಿಗೆ ಸಮಸ್ಯೆ

ಶ್ರೀನಿವಾಸಪುರ : ಪಟ್ಟಣದ ವಾರ್ಡ್ ನಂ. 5 ಕಟ್ಟೆಕೆಳಗಿನ ಪಾಳ್ಯದಲ್ಲಿ ವಾಸವಾಗಿರುವ ಮನೆಗಳ ಮುಂಭಾಗ ಪಟ್ಟಣದ ಕೊಳಚೆ ನೀರು ತುಂಬಿದ್ದು ಈ ನೀರಿನಿಂದ ಕೆಲವರು ಪ್ರಭಾವಿಗಳು ಜಿರಾಯಿತಿ ಕೆಲಸಗಳನ್ನು ಮಾಡಿಕೊಳ್ಳುವುದರಿಂದ ಸ್ಥಳೀಯರಿಗೆ ತುಂಬಾ ಸಮಸ್ಯೆ ಉಂಟಾಗಿರುವುದರಿಂದ ಕೂಡಲೇ ಇದನ್ನು ಸರಿಪಡಿಸಬೇಕೆಂದು ಸ್ಥಳೀಯರು ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಎ.ಸಿ.ಸೋಮಶೇಖರ್ ರವರು ಸ್ಥಳ ಪರಿಶೀಲಿಸಿ ಅವ್ಯವ್ಯಸ್ಥೆಯನ್ನು ಕಂಡು ಕೂಡಲೇ ಯಾರೇ ಪ್ರಭಾವಿಗಳಾದರೂ ಅವರ ಮೇಲೆ ಪ್ರಕರಣವನ್ನು ದಾಖಲು ಮಾಡಿಸಿ ಸ್ಥಳೀಯರಿಗೆ ಆಗಿರುವ ಸಮಸ್ಯೆಯನ್ನು ಸರಿಪಡಿಸಿಬೇಕೆಂದು ಮುಖ್ಯಾಧಿಕಾರಿ ಮೋಹನ್ ಕುಮಾರ್ ರವರಿಗೆ ತಿಳಿಸಿದ್ದಾರೆ.
News 2-1

ಉಪವಿಭಾಗಾಧಿಕಾರಿ ಸೋಮಶೇಖರ್ ರವರು ವಾರ್ಡ್ ನಂ.5 ರ ನಿವಾಸಿಗಳ ಮನವಿಯಂತೆ ಸ್ಥಳಕ್ಕಾಗಮಿಸಿದಾಗ ಇಲ್ಲಿನ ವಾಸಿಗಳಾದ ಅನೇಕ ದಲಿತರು, ದಲಿತ ಮುಖಂಡರು, ಮಹಿಳೆಯರು, ಸಾರ್ವಜನಿಕರು ಮನವಿ ಮಾಡಿ ಪಟ್ಟಣದ ಭೌಗಳಿಕವಾಗಿ ಪಟ್ಟಣದ ಕೊಳಚೆ ನೀರು ಕೆರೆಗೆ ಹಾಯಿಸಲು ಕೆ.ಕೆ.ಪಾಳ್ಯದ ಮೂಲಕವೇ ಚರಂಡಿ ಚೇಂಬರ್‍ಗಳು ನಿರ್ಮಿಸಿದ್ದು ಸದರಿ ನೀರು ಕೆರೆಗೆ ಹಾದು ಹೋಗಲು ಅವೈಜ್ಞಾನಿಕವಾಗಿ ಸಂಭಂದಿಸಿದ ಅಧಿಕಾರಿಗಳು ಕೆಲಸ ಪ್ರಾರಂಭಿಸಿರುವುದರಿಂದ ಕೊಳಚೆ ನೀರು ಹಾದು ಹೋಗದೆ ಈ ಸ್ಥಳದಲ್ಲಿ ನಿಂತು ದುರ್ವಾಸನೆ ಬರುತ್ತಿದೆ. ಈ ವಾರ್ಡಿನಲ್ಲಿ ಸುಮಾರು 300 ಕ್ಕಿಂತ ಹೆಚ್ಚು ಎಸ್.ಸಿ./ಎಸ್.ಟಿ. ಮತ್ತು ಇತರೆ ವರ್ಗದ ಬಡ ಜನತೆ ವಾಸಿವಾಗಿದ್ದೇವೆ.

News 2
ಕೆಲವು ಪ್ರಭಾವಿ ವ್ಯಕ್ತಿಗಳು ಕೊಳಚೆ ನೀರನ್ನು ಸ್ಟಾಕ್ ಮಾಡಿಕೊಂಡು ಅವರ ಅನುಕೂಲಕ್ಕಾಗಿ ಕೊಳಚೆ ನೀರನ್ನು ಬಳಕೆ ಮಾಡಿಕೊಂಡು ಮೇವು ಇತರೆ ಬೆಳೆಗಳನ್ನು ಬೆಳೆಯಲು ಕೊಚ್ಚೆ ನೀರನ್ನು ಬಳಕೆ ಮಾಡಿಕೊಳ್ಳಲು ಯು.ಜಿ.ಡಿ ಪೈಪ್‍ಲೈನಿಗೆ ಮತ್ತು ಹುಂಡಿಗಳಿಗೆ ಅವರ ಅನುಕೂಲಕ್ಕೆ ಬೇಡವಾದ ವಸ್ತುಗಳನ್ನು ತುಂಬಿ ಕಾಲುವೆಗಳಿಂದ ಬರುವ ನೀರನ್ನು ಅವರ ಬೆಳೆಗಳಿಗೆ ಉಪಯೋಗಿಸಿಕೊಳ್ಳಲು ಮುಂದಾಗಿರುತ್ತಾರೆ. ಈ ಕೆಲಸದಿಂದ ಇಲ್ಲಿನ ನಮಗೆ ಅನೈಮರ್ಲಯ್ಯ ಕಾರಣ ಆರೋಗ್ಯದ ಮೇಲೆ ಪರಿಣಾಮ, ದುರ್ವಾಸನೆ ಮಲ ಮೂತ್ರಗಳು ಮನೆಗಳ ಆವರಣದಲ್ಲಿ ತುಂಬಿ ಸಾಂಕ್ರಾಮಿಕ ರೋಗಗಳು ಹರುಡುತ್ತವೆ ಎಂದು ಉಪವಿಭಾಗಾಧಿಕಾರಿಗಳಿಗ ತಮ್ಮ ಅಳಲನ್ನು ತೋರಿದರು.

News 2-2
ವಿಷಯವನ್ನು ಆಲಿಸಿ ಸ್ಥಳ ಪರಿಶೀಲಿಸಿ ಎ.ಸಿ.ಮಂಜುನಾಥ್ ರವರು ಕೆಂಡಾಮಂಡಲವಾಗಿ ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿ ಇಷ್ಟೆಲ್ಲಾ ಅನಾಹುತಗಳು ಆಗುತ್ತಿದ್ದರು ನೀವು ಏನು ಮಾಡುತ್ತಿದ್ದೀರ ಚರಂಡಿಯ ಮೂಲಕ ಹಾದು ಹೋಗುವ ನೀರು ಯಥಾ ಪ್ರಕಾರ ಹಿಂದಿನಂತೆ ಯು.ಜಿ.ಡಿ ಪೈಪು ಮೂಲಕ ಹಾದು ಹೋಗಬೇಕು ಈ ಸಂಪರ್ಕವನ್ನು ಯಾವುದೇ ಕಾರಣಕ್ಕೂ ಕೆರೆ ಒಳಗೆ ಬಿಡಬಾರದು ಈ ನೀರನ್ನು ಉಪಯೋಗಿಸಿಕೊಳ್ಳುತ್ತಿರುವವರ ಮೇಲೆ ಪೊಲೀಸ್ಠಾ ಣೆಯಲ್ಲಿ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ತಿಳಿಸಿ ಸಿ.ಪಿ.ಐ ರಾಘವೇಂದ್ರ ಪ್ರಕಾಶ್ರ ವರಿಗೆ ದೂವಾಣಿ ಸಂಪರ್ಕಿಸಿ ಪ್ರಕರಣ ದಾಖಲಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ವಾಟರ್ ಬೋರ್ಡ್ ಇಂಜಿನಿಯರ್ ರವಿಕುಮಾರ್, ಆರೋಗ್ಯ ನಿರೀಕ್ಷ ಕೆ.ಜಿ.ರಮೇಶ್, ಸ್ಥಳೀಯರಾದ ಟಿ.ನಾರಾಯಣಸ್ವಾಮಿ, ನಾಗರಾಜ್, ಕೃಷ್ಣಮೂರ್ತಿ, ರವಿ, ಕೋಮಲಮ್ಮ ಅನೇಕರು ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter