Published On: Sun, Sep 15th, 2019

ಬ್ರಹ್ಮಶ್ರೀ ನಾರಾಯಣ ಗುರು ಅವರ 165ನೇ ಗುರುಜಯಂತಿ

ಗುರುಪುರ : ಗುರುಪುರ ಗುರುನಗರದ ಬಿಲ್ಲವ ಸಮಾಜ ಸೇವಾ ಸಂಘ(ರಿ) ಇಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಅವರ 165ನೇ ಗುರುಜಯಂತಿ ಹಾಗೂ ಗುರುಪೂಜೆ ಅದ್ದೂರಿಯಾಗಿ ನೆರವೇರಿತು.ಕಾವೂರು ಶಾಂತಿನಗರದ ಮನೋಜ್ ಭಟ್ ಪೌರೋಹಿತ್ಯದಲ್ಲಿ ಗುರು ಮಂದಿರದಲ್ಲಿ ವೈದಿಕ ಪೂಜೆ, ನವಕ ಕಲಶ ಪೂಜೆ, ಗುರುವಿಗೆ ಅಭಿಷೇಕ ಹಾಗೂ ಮಹಾಪೂಜೆ ನಡೆಯಿತು. ಸಂಘದ ಅರ್ಚಕ ಐತಪ್ಪ ಪೂಜಾರಿ ಸಹಕರಿಸಿದರು.

gur-sep-15-gurpur gurupooje-1

ಪೂಜಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಹಾಬಲ ಅಮೀನ್ ಮತ್ತು ಪದಾಧಿಕಾರಿಗಳಾದ ಬಳ್ಳಿ ಶೇಖರ, ದೇವದಾಸ ಬಂಗೇರ, ಮಹಿಳಾ ಸದಸ್ಯರು, ಬಿಜೆಪಿ ಪದಾಧಿಕಾರಿ ರಾಜೇಶ ಸುವರ್ಣ ಹಾಗೂ ನೂರಾರು ಬಿಲ್ಲವ ಬಂಧುಗಳು ಪಾಲ್ಗೊಂಡಿದ್ದರು.

gur-sep-15-bharath shetty-1

ಪೂಜಾ ಕಾರ್ಯಕ್ರಮಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಆಗಮಿಸಿ, ಪ್ರಸಾದ ಸ್ವೀಕರಿಸಿದರು. ಈ ವೇಳೆ,ಬಿಲ್ಲವ ಸಂಘದ ವತಿಯಿಂದ ಅಂದಾಜು 1.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಭಾಭವನಕ್ಕೆ ಸರ್ಕಾರದಿಂದ ಅನುದಾನ ಒದಗಿಸುವಂತೆ ಕೋರಿ ಶಾಸಕರಿಗೆ ಮಹಾಬಲ ಅಮೀನ್, ದೀಪಕ್ ಕೋಟ್ಯಾನ್ ಹಾಗೂ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter