Published On: Wed, Sep 11th, 2019

“ಶಾಂಭವಿ ಕಲಾವಿದರ್ ಸಾಣೂರು” ನಾಟಕ ತಂಡ ಉದ್ಘಾಟನೆ

ಕಾರ್ಕಳ : ತುಳು ನಾಟಕಗಳು ಸಮಾಜದಲ್ಲಿ ಸಾಮರಸ್ಯದ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದು, ಈ‌ ನಿಟ್ಟಿನಲ್ಲಿ ನಾಟಕ ತಂಡ ಮತ್ತು ಕಲಾವಿದರನ್ನು ಸಮಾಜ ಪ್ರೋತ್ಸಾಹುಸಬೇಕೆಂದು ಸಾಣೂರು ದೇಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ  ಶ್ರೀರಾಮ್ ಭಟ್ ಕರೆನೀಡಿದರು. ಅವರು ಸಾಣೂರಿನ ಶಿವರಾಮ ರೈ ಕಲಾವೇದಿಕೆಯಲ್ಲಿ “ಶಾಂಭವಿ ಕಲಾವಿದರೆ ಸಾಣೂರು” ನಾಟಕ ತಂಡವನ್ನು ಉದ್ಘಾಟಿಸಿ,ಮಾತನಾಡಿದರು.
IMG-20190911-WA0055
ಸಾಣೂರು ಗ್ರಾ.ಪಂ ಅಧ್ಯಕ್ಷೆ ರಾಜೇಶ್ವರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಡೆದ ಸಮಾರಂಭದಲ್ಲಿ ಚಲನ ಚಿತ್ರನಟ  ಹರಿಬಂಗೇರಾ ಇವರನ್ನು ಸನ್ಮಾನಿಸಲಾಯಿತು. ಖ್ಯಾತ ಕಲಾವಿದ ಇಂದುಶೇಖರ್ ಮಾತನಾಡಿ ಕಲಾವಿದರು ಸಮಯಪಾಲನೆ ಹಾಗೂ ಸಹಕಲಾವಿದರನ್ನು ಗೌರವಿಸುವ ಪರಂಪರೆಯನ್ನು ಬೆಳೆಸಿಕೊಳ್ಳಬೇಕು ಹಾಗೆಯೇ ಯಾವುದೇ ದುಶ್ಚಟಗಳನ್ನು ಹೊಂದದೆ ಮಾದರಿಯಾಗಬೇಕೆಂದು ಕಿವಿಮಾತು ಹೇಳಿದರು.
IMG-20190911-WA0053
 ಕಲಾವಿದ ಮೋಹನದಾಸ ಜಿ ಪ್ರಭು ಶುಭಹಾರೈಸಿದರು‌. ಮರತಂಗಡಿ ಶಾಲೆಯ ಮುಖ್ಯ ಶಿಕ್ಷಕಿ ಮೋಹಿನಿ, ಸಾಣೂರು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ  ಸೋಮಶೇಖರ ರಾವ್, ಉದ್ಯಮಿ ಅನಿಲ್  ಕೋಟ್ಯಾನ್, ನಾಟಕ ತಂಡದ ನಿರ್ಮಾಪಕ ಸಂತೋಷ ಬಂಗೇರಾ, ನಾಟಕ ರಚನೆಗಾರ ಅಶೋಕ ಪೂಜಾರಿ, ಚಂದ್ರಹಾಸ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.
IMG-20190911-WA0052
ತಂಡದ ಪ್ರಥಮ ನಾಟಕ “ನಾಟಕ ದಾಯೆ ”  ಪ್ರದರ್ಶನಗೊಂಡಿತು.ಸಾಣೂರು ಗ್ರಾಮ ಪಂ ಸದಸ್ಯ ಕರುಣಾಕರ ಎಸ್ ಕೋಟ್ಯಾನ್ ಸ್ವಾಗತಿಸಿದರು. ಅರ್.ಕೆ ರಂಜಿತ್ ವಂದಿಸಿದರು. ಸುಕೇಶ್ ಕೊಟ್ಯಾನ್ ನಿರೂಪಿಸಿದರು.IMG-20190911-WA0052
IMG-20190911-WA0051IMG-20190911-WA0054

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter