Published On: Wed, Sep 11th, 2019

ವೀರಕಂಬ ಹಾ.ಉ.ಸ.ಸಂಘದ ಮಹಾಸಭೆ

ಬಂಟ್ವಾಳ:  ತಾಲೂಕಿನ ವೀರಕಂಬ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಇದರ 2018 -19 ನೇ ಸಾಲಿನ  ವಾರ್ಷಿಕ  ಸಭೆಯು ವೀರಕಂಬ ಪಂಚಾಯತನ ರಾಜೀವ್ ಗಾಂಧಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ದಿಲೀಪ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
IMG-20190910-WA0046
ಈ ಕಾರ್ಯಕ್ರಮದಲ್ಲಿ ಕೆಎಂಎಫ್ ವಿಸ್ತರಣಾಧಿಕಾರಿ  ಜಗದೀಶ್ ಭಾಗವಹಿಸಿ ಸದಸ್ಯರಿಗೆ ಲಾಭದಾಯಕ ಹೈನುಗಾರಿಕೆ ,ಗುಣಮಟ್ಟದ ಹಾಲು ಪೂರೈಕೆ, ಹೈನುಗಾರಿಕೆಗೆ ಸಿಗುವ ಸವಲತ್ತುಗಳು, ವಿಮಾ   ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ 2018 -19 ನೇ ಸಾಲಿನಲ್ಲಿ ಸಂಘಕ್ಕೆ ವಾರ್ಷಿಕ 500 ಲೀಟರ್ ಗಿಂತ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು . ಇದೇ ವೇಳೆ  ಸದಸ್ಯರಿಗೆ  ಶೇ.15  ಡಿವಿಡೆಂಟ್ ಘೋಷಿಸಲಾಯಿತು.ಸಂಘದ ಕಾರ್ಯನಿರ್ವಹಣ ಅಧಿಕಾರಿ ಹರೀಶ್ ಬಂಗೇರ ಸ್ವಾಗತಿಸಿ, ಸಂಘದ ವರದಿಯನ್ನು ಮಂಡಿಸಿದರು. ನಿರ್ದೇಶಕರುಗಳಾದ ಅಶೋಕ್ ಕುಮಾರ್ ತೆಕ್ಕಿಪಾಪು, ನಾರಾಯಣ ಮೂಲ್ಯ ಬೆತ್ತ ಸರವು, ಜಗನ್ನಾಥ್ ಆಲ್ವಾ ಮೈರ,,ಪದ್ಮನಾಭ ಗೌಡ ಮೈರ , ಉಮೇಶ್ ಮಜಿ ,ಪದ್ಮನಾಭ ಮಜಿ  ವೆಂಕಪ್ಪ ಪೂಜಾರಿ ಮೈರ, ಜಯಂತಿ ಬೆತ್ತ ಸರವು, ಉಪಸ್ಥಿತರಿದ್ದರು.ನಿರ್ದೇಶಕ  ಕೇಶವ ನಾಯ್ಕ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter