Published On: Wed, Sep 11th, 2019

ಏಕದಿನ ಶಿಬಿರದ ಸಮಾರೋಪ ಸಮಾರಂಭ

ಬಂಟ್ವಾಳ:ನಾವು ಮಾಡುವ ಯಾವುದೇ ಕಾರ್ಯವು ಪ್ರಾಮಾಣಿಕ ಮತ್ತು ಶಿಸ್ತು ಬದ್ಧವಾಗಿದ್ದರೆ ಅದೇ ಸೇವೆ. ನಮ್ಮ ಸಮಾಜಕ್ಕೆ ನಮ್ಮ ಕೈಲಾದ ಸೇವೆ ಮಾಡುವ ಮೂಲಕ ಬದುಕನ್ನು ಅರ್ಥಪೂರ್ಣವಾಗಿಸಬಹುದು. ಕಾಲೇಜುಗಳು ನಡೆಸುತ್ತಿರುವಂತಹ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯ ಚಟುವಟಿಕೆಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗುತ್ತದೆ. ಬದುಕಿನ ಅತ್ಯಮೂಲ್ಯ ಹಂತ ವಿದ್ಯಾರ್ಥಿ ಜೀವನ. ಇಂತಹ ಸಮಯದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಂಡಾಗ ವಿದ್ಯಾರ್ಥಿಗಳ ಕ್ರೀಯಾಶೀಲಾ ಉನ್ನತಿಗೆ ಕಾರಣವಾಗಬಲ್ಲರು. ಸಮಾಜದೊಂದಿಗೆ ಬೆರೆಯುವ ಸುತ್ತಮುತ್ತಲಿನ ಪರಿಸರವನ್ನು ಅರ್ಥೈಸಿಕೊಳ್ಳವ ಮುಖೇನ ಅಲ್ಲಿನ ಜನರೊಂದಿಗೆ ಏಕತಾಭಾವದಿಂದ ಸಾಂಘಿಕ ಜೀವನವನ್ನು ನಡೆಸುವಲ್ಲಿ ಎನ್.ಎಸ್.ಎಸ್‍ನಂತಹ ಶಿಬಿರಗಳು ಪ್ರಯೋಜನಕಾರಿ ಎಂದು ದ.ಕ.ಜಿ.ಪಂ.ಹಿ ಪ್ರಾಥಮಿಕ ಶಾಲೆ ಮಜಿ, ಇಲ್ಲಿನ ಮುಖ್ಯೋಪಾಧ್ಯಾಯರಾದ ಶ್ರೀ ನಾರಾಯಣ ಪೂಜಾರಿ ನುಡಿದರು.

DSC_0026

ಅವರು ಎಸ್.ವಿ.ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮಜಿ ಶಾಲೆಯಲ್ಲಿ ಆಯೋಜಿಸಲಾದ ಏಕದಿನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಮಾತನಾಡುತ್ತಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪಠ್ಯದೊಂದಿಗೆ ಶ್ರಮದ ಅರಿವನ್ನು ಉಂಟುಮಾಡುತ್ತಾ ಮುಂದಿನ ದಿನಗಳಲ್ಲಿ ಸಮಾಜವನ್ನು ಯಶಸ್ವಿಯಾಗಿ ಎದುರಿಸಲಿಕ್ಕೆ ಬೇಕಾಗುವ ಕೌಶಲಗಳನ್ನು ರೂಪಿಸುವಲ್ಲಿ ಎನ್.ಎಸ್.ಎಸ್ ಉತ್ತಮ ವೇದಿಕೆಯನ್ನು ಕಲ್ಪಿಸುತ್ತದೆ ಎಂದು ನುಡಿದರು. ಎನ್.ಎಸ್.ಎಸ್ ಎಂದರೆ ಬರೀ ಮಣ್ಣು ಹೇರುವುದಲ್ಲ ಬದಲು ಸಾಂಪ್ರಾದಾಯಿಕ ಕೆಲಸಗಳೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲಾಗುತ್ತದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ರಾಮಚಂದ್ರ ಪ್ರಭು, ಸದಸ್ಯರು ಗ್ರಾ.ಪಂ ವೀರಕಂಭ, ಶ್ರೀ ಸಂಜೀವ ಮೂಲ್ಯ, ಅಧ್ಯಕ್ಷರು ಎಸ್.ಡಿ.ಎಂ.ಸಿ ಮಜಿ ಶಾಲೆ, ಶ್ರೀ ವಿಶ್ವನಾಥ ನಿರ್ದೇಶಕರು, ವಿಟ್ಲ ಗ್ರಾಮೀಣ ಬ್ಯಾಂಕ್ ವಿಟ್ಲ, ಶ್ರೀ ಕೊರಗಪ್ಪ ನಾಯ್ಕ ನಿರ್ದೇಶಕರು ರೈತರ ಸಹಕಾರಿ ಬ್ಯಾಂಕ್ ಕಲ್ಲಡ್ಕ, ಮತ್ತು ಶ್ರೀ ರಮೇಶ್ ಗೌಡ ಅಧ್ಯಕ್ಷರು ಹಳೆ ವಿಧ್ಯಾರ್ಥಿ ಸಂಘ ಮಜಿ ಶಾಲೆ, ಮುಂತಾದವರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಸುಶ್ಮಿತಾ ಪೈ ಮತ್ತು ಹರ್ಷಿತ್ ಶಿಬಿರದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಯೋಜನಾಧಿಕಾರಿ ಡಾ| ಮಂಜುನಾಥ ಉಡುಪ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಇನ್ನೊರ್ವ ಯೋಜನಾಧಿಕಾರಿ ಶ್ರೀಮತಿ ಶಶಿಕಲಾ ಎಮ್ ಪಿ ಧನ್ಯವಾದ ಸಮರ್ಪಿಸಿದರು. ಸ್ವಯಂ ಸೇವಕಿ ಶಿಲ್ಪಾ ಪ್ರಾರ್ಥಿಸಿ ಸ್ವಯಂ ಸೇವಕ ಕಾರ್ತಿಕ್ ಕಾರ್ಯಕ್ರಮ ನಿರ್ವಹಿಸಿದರು.
ಊರವರ ಮತ್ತು ಮಜಿ ಶಾಲೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಡೆದ ಶಿಬಿರವನ್ನು ಗಿಡ ನಡುವುದರೊಂದಿಗೆ ಉದ್ಘಾಟಿಸಿ ಶಾಲಾ ತೋಟಕ್ಕೆ ಮಣ್ಣು ಹಾಕುವ ಕಾರ್ಯವನ್ನು ಕೈಗೊಳ್ಳಲಾಯಿತು. ಎನ್.ಎಸ್.ಎಸ್‍ನ ಸಹಯೋಜನಾಧಿಕಾರಿ ಶ್ರೀಮತಿ ಸುಪ್ರಿಯಾ ಬೆಂಡೆ, ಕು.ಶ್ರುತಿ ಹಾಗೂ ಉಪನ್ಯಾಸಕ ಕಿಟ್ಟು ರಾಮಕುಂಜ ಸಹಕರಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter