Published On: Wed, Sep 11th, 2019

ರೈತರ ಸಾಲ ಮನ್ನಾ ಹಣವನ್ನು ಕೂಡಲೇ ಬಿಡುಗಡೆ ಮಾಡಲು ಒತ್ತಾಯ

ಬಂಟ್ವಾಳ : ಯಂ ಚಂದ್ರಶೇಖರ ಪೂಜಾರಿ ನ್ಯಾಯವಾದಿ/ನೋಟರಿ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೇಸ್ ಕಮಿಟಿ ಮಂಗಳೂರು. ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಾಗ ಮಾನ್ಯ ಶ್ರೀ ಹೆಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಘೋಷಣೆಯಲ್ಲಿ ಪ್ರತಿ ಕುಟುಂಬಕ್ಕೆ ತಲಾ ರೂ. 1,00,000/- ತಕ್ಷಣ ಸಾಲವನ್ನು ಮನ್ನಾ ಘೋಷಣೆ ಮಾಡಿದ್ದಾರೆ ಹಾಗೂ ರೈತರ ಎಲ್ಲಾ ಸಹಕಾರಿ ಬ್ಯಾಂಕ್‍ಗಳಲ್ಲಿ ಹಾಗೂ ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿರುವ ಎಲ್ಲಾ ಸಾಲಗಳನ್ನು ಹಂತಹಂತವಾಗಿ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.ಘೋಷಣೆಯಾದ ಹಣದಲ್ಲಿ ಕೆಲವು ರೈತರಿಗೆ ಸಾಲ ಮನ್ನಾ ಸೌಲಭ್ಯ ಸಿಕ್ಕಿದ್ದು, ಇನ್ನೂ ಳಿ ದಷ್ಟು ರೈತರು ಸಾಲ ಮನ್ನಾ ಸೌಲಭ್ಯವನ್ನು ಪಡೆಯಬೇಕಾಗಿದೆ. ರೈತರು ಈ ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಕೃಷಿ ಭೂಮಿಯಲ್ಲಿರುವ ಅಡಿಕೆ ಮರ, ತೆಂಗಿನ ಮರ ಬಿರುಗಾಳಿಯಿಂದ ಬಿದ್ದು ನಾಶವಾಗಿರುತ್ತದೆ ಹಾಗೂ ಕೊಳೆ ರೋಗದಿಂದ ಉತ್ಪತ್ತಿ ನಾಶವಾಗಿ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ರೈತರ ಸಾಲ ಮನ್ನಾ ಹಣವನ್ನು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‍ನಲ್ಲಿ ರೈತರ ಖಾತೆಗಳಿಗೆ ನೇರ ಪಾವತಿ ಮಾಡುವುದಾಗಿ ಎಲ್ಲಾ ರೈತರ ಚಾಲ್ತಿ ಖಾತೆಯನ್ನು ತೆರೆಯಲಾಗಿದೆ. ಆದ ಕಾರಣ ರೈತರ ಸಾಲ ಮನ್ನಾದ ಹಣವನ್ನು ಕೂಡಲೇ ಖಾತೆಗೆ ಜಮಾ ಆಗುವಂತೆ ಶೀಘ್ರ ಕ್ರಮಕೈಗೊಳ್ಳಬೇಕು ಮತ್ತು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‍ಗಳಲ್ಲಿ ರೈತರ ಖಾತೆಗಳಿಗೆ ನೇರ ಹಣವನ್ನು ಜಮಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರೋತ್ಸವ ಭಾಷಣದಲ್ಲಿ “ರೈತರ ಉತ್ಪತ್ತಿ” ಯನ್ನು ದ್ವಿಗುಣಗೊಳಿಸುವುದಾಗಿ ಘೋಷಿಸಿರುತ್ತಾರೆ. ಅದೇ ರೀತಿ ಮಾನ್ಯ ಮುಖ್ಯ ಮಂತ್ರಿ ಶ್ರೀಮಾನ್ ಬಿ.ಎಸ್. ಯಡಿಯೂರಪ್ಪ ತಾನು ಮುಖ್ಯ ಮಂತ್ರಿ ಪ್ರಮಾಣ ವಚನ ಮಾಡುವಾಗ ರೈತರ ಚಿಹ್ನೆ ಹಸಿರು ಶಾಲು ಹಾಕಿ ಪ್ರಮಾಣ ವಚನ ಸ್ವೀಕರಿಸಿ, ರೈತರ ಹಿತ ಕಾಪಾಡುವುದಾಗಿ ಘೋಷಿಸಿದ್ದಾರೆ. ಆದ ಕಾರಣ ರೈತರ ಸಾಲ ಮನ್ನಾ ಹಣವನ್ನು ಸರಕಾರ ತಕ್ಷಣ ಬಿಡುಗಡೆ ಮಾಡಿ ಬಡ ರೈತರಿಗೆ ಸಹಕಾರಿಯಾಗಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರಾದ ನಾವು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಹಾಗೂ ಸಹಕಾರಿ ವ್ಯವಸಾಯ ಬ್ಯಾಂಕ್‍ಗಳ ಮುಂದೆ ಧರಣಿ, ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ.
ಆದ ಕಾರಣ ತಕ್ಷಣ ಸಾಲ ಮನ್ನಾ ಹಣವನ್ನು ಬಿಡುಗಡೆ ಮಾಡಿ ರೈತರ ನಿರೀಕ್ಷೆಯನ್ನು ಈಡೇರಿಸಬೇಕಾಗಿಯೂ, ಸಾಲ ಮನ್ನಾ ಹಣವನ್ನು ಶೀಘ್ರ ಪಾವತಿ ಮಾಡಲಿದ್ದಲ್ಲಿ ಮುಂದಕ್ಕೆ ಬರುವ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅಸಹಾಕಾರ ಚಳುವಳಿಯನ್ನು ಮಾಡುವುದಾಗಿ ಘೋಷಿಸಿದ್ದಾರೆ.
ಆದ್ದರಿಂದ ಶೀಘ್ರ ಸಾಲ ಮನ್ನಾ ಹಣವನ್ನು ಬಿಡುಗಡೆ ಮಾಡಬೇಕಾಗಿ ಮಾನ್ಯ ಮುಖ್ಯ ಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ರವರನ್ನು ಒತ್ತಾಯಿಸಿ, ಆಗ್ರಹಿಸಲಾಗಿದೆ ಎಂದು ಜಿಲ್ಲಾ ಕಾಂಗೇಸ್ ಪ್ರಧಾನ ಕಾರ್ಯದರ್ಶಿ ಯಂ ಚಂದ್ರಶೇಖರ ಪೂಜಾರಿ, ನ್ಯಾಯವಾದಿ/ನೋಟತಿ ಹಾಗೂ ರೈತರು ಒತ್ತಾಯಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter