Published On: Wed, Sep 11th, 2019

ಸಿದ್ಧಕಟ್ಟೆ: ವಲಯ ಟೈಲರ್ಸ್ ಎಸೋಸಿಯೇಶನ್ ಸ್ಮಾರ್ಟ್ ಕಾರ್ಡ್ ಮತ್ತು ಗುರುತಿನ ಚೀಟಿ ವಿತರಣೆ

ಬಂಟ್ವಾಳ:ಸಮಾಜದಲ್ಲಿ ಟೈಲರ್ ವೃತ್ತಿ ನಡೆಸುತ್ತಿರುವ ಅಸಂಘಟಿತ ಕಾರ್ಮಿಕರು ಸಂಘಟಿತರಾಗಿ ನಮಗೆ ಸರ್ಕಾರದಿಂದ ಸಿಗುವ ವಿವಿಧ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುವುದು ನಮ್ಮ ಹಕ್ಕು ಆಗಿದೆ. ಇದಕ್ಕಾಗಿ ಪ್ರತಿಯೊಬ್ಬ ವೃತ್ತಿ ಬಾಂಧವರು ಕೂಡಾ ಒಟ್ಟಾಗಿ ಸಂಘದ ಜೊತೆಗೆ ಕೈ ಜೋಡಿಸುವ ಮೂಲಕ ಸಂಘಟನೆ ಬಲಪಡಿಸಬೇಕು ಎಂದು ಟೈಲರ್ಸ್ ಎಸೋಸಿಯೇಶನ್ ರಾಜ್ಯಾಧ್ಯಕ್ಷ ಕೆ.ಎಸ್.ಆನಂದ ಹೇಳಿದ್ದಾರೆ.

10btl-Tailor
ಇಲ್ಲಿನ ಸಿದ್ಧಕಟ್ಟೆ ವಲಯ ಟೈಲರ್ಸ್ ಎಸೋಸಿಯೇಶನ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಸ್ಮಾರ್ಟ್ ಕಾರ್ಡ್ ಮತ್ತು ಗುರುತಿನ ಚೀಟಿ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ವಲಯಾಧ್ಯಕ್ಷ ದೇಜಪ್ಪ ವಿ.ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಸಂಘದ ಸದಸ್ಯರಿಗೆ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಸ್ಮಾರ್ಟ್ ಕಾರ್ಡ್ ಮತ್ತು ಗುರುತಿನ ಚೀಟಿ ವಿತರಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಪ್ರಜ್ವಲ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕ್ಷೇತ್ರಾಧ್ಯಕ್ಷ ಈಶ್ವರ ಕುಲಾಲ್, ರಾಜ್ಯ ಸಮಿತಿ ಸ್ಥಾಪಕ ಸದಸ್ಯ ನಾರಾಯಣ ಬಿ.ಎ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ಶುಭ ಹಾರೈಸಿದರು. ಪ್ರಮುಖರಾದ ಸುರೇಶ ಇರ್ವತ್ತೂರು, ರಮೇಶ ಸಾಲ್ಯಾನ್ ಮತ್ತಿತರರು ಇದ್ದರು.
ಸಮಿತಿ ಸದಸ್ಯರಾದ ದಯಾನಂದ ಟೈಲರ್ ರಾಯಿ ಸ್ವಾಗತಿಸಿ, ಶೌಕತ್ ಆಲಿ ಆಲದಪದವು ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter