Published On: Tue, Sep 10th, 2019

ಜಪಾನ್‍ನ ತಂದೆ-ಮಗನಿಂದ ಬಂಟ್ವಾಳದಲ್ಲಿ ಕರಾಟೆ ಕ್ಲಾಸ್! ವಿವಿಧ ರಾಜ್ಯಗಳಿಂದ 400 ವಿದ್ಯಾರ್ಥಿಗಳು ಭಾಗಿ!

ಬಂಟ್ವಾಳ: ಭಾರತೀಯ ಯಮಾಟೊ ಶೋಟೋಕಾನ್ ಕರಾಟೆ ಅಸೋಸಿಯೇಷನ್ ಇದರ ಆಶ್ರಯದಲ್ಲಿ ನಡೆಯಲಿರುವ 3 ದಿನಗಳ ಅಲ್ ಇಂಡಿಯಾ ಶೋಟೋಕಾನ್ ಕರಾಟೆ ತರಬೇತಿ ಶಿಬಿರಕ್ಕೆ ರವಿವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಚಾಲನೆ ಸಿಕ್ಕಿದೆ.

9 btl Karate (3)
ಜಪಾನ್‍ನ ಗ್ರಾಂಡ್ ಮಾಸ್ಟರ್ ನಿಮುರಾ ಕೆಂಜಿ ಕರಾಟೆ ತರಬೇತಿ ಶಿಬಿರವನ್ನು ಉದ್ಘಾಟಿಸಿದರು. ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಮುಖ್ಯ ಅತಿಥಿಯಾಗಿದ್ದ ಭಾಗವಹಿಸಿದ್ದ ಶಿಬಿರದಲ್ಲಿ ಸುಮಾರು 400 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಮೊದಲ ದಿನದಂದು ಫಸ್ಟ್ ಎಲ್ಲೊ ಬೆಲ್ಟ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಸೋಮವಾರದಂದು ಬ್ಲಾಕ್ ಬೆಲ್ಟ್ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

9 btl Karate (2)
79ರ ಹರೆಯದ ಮಾಸ್ಟರ್:
ಜಪಾನ್ ದೇಶದ ಕರಾಟೆ ಗ್ರ್ಯಾಂಡ್ ಮಾಸ್ಟರ್ 79ರ ಹರೆಯದ ನಿಮುರಾ ಕೆಂಜಿಲ್ ಮತ್ತು ಸಹಾಯಕ ತರಬೇತುದಾರರಾಗಿ ಅವರ ಪುತ್ರ ಶಿಹಾನ್ ನಿಮುರಾ ಮಸಾಕಿ ಅವರು ತರಬೇತಿ ನೀಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕರಾಟೆಯನ್ನು ಕಲಿಸಲು ನಿಮುರಾ ಅವರು ಭಾರತಕ್ಕೆ 2ನೇ ಬಾರಿಗೆ ಬಂದಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಮಂಗಳೂರಿನ ಕ್ಯೋಶಿ ಶಾಜು ಮುಲವನ ನೇತೃತ್ವದಲ್ಲಿ ಬಂಟ್ವಾಳದ ಅಶೋಕ್ ಆಚಾರ್ಯ, ಜೆರಾಲ್ಡ್ ಫೆರ್ನಾಂಡಿಸ್, ಪ್ರಕಾಶ್ ಪೂಜಾರಿ, ಜೋಕಿಂ ಪಿಂಟೊ, ಗೌರಿಪ್ರಸಾದ್, ರಂಗಸ್ವಾಮಿ, ಜೋಸ್ ಕೇರಳ ಶಿಬಿರವನ್ನು ಆಯೋಜಿಸಿದ್ದಾರೆ.

9 btl Karate (1)
ಬುಧವಾರದವರೆಗೆ ನಡೆಯುವ ಶಿಬಿರದಲ್ಲಿ ಸುಮಾರು 400 ಮಂದಿ ಕರ್ನಾಟಕ, ಕೇರಳ, ತಮಿಳುನಾಡು ಪಾಂಡಿಚೇರಿ ಸಹಿತ ವಿವಿಧ ರಾಜ್ಯಗಳಿಂದ ಪಾಲ್ಗೊಳ್ಳುತ್ತಿದ್ದಾರೆ. ಜಪಾನ್‍ನ ಈ ತಂದೆ, ಮಗ ಕರಾಟೆಯ ತಂತ್ರಗಳಲ್ಲಿ ಮತ್ತು ಕುಮಿಟೆ ತರಬೇತಿ ನೀಡುತ್ತಿದ್ದಾರೆ.
ನಿಮುರಾ ಕೆಂಜಿಲ್ ಅವರು ಸುಮಾರು 40 ವರ್ಷಗಳಿಂದ ಕರಾಟೆ ಕಲಿಸುತ್ತಿದ್ದು, ಇವರ ಶಿಷ್ಯರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter