Published On: Tue, Sep 10th, 2019

ಬಿ.ತಮ್ಮಯ್ಯ ನಿಧನ

ಬಂಟ್ವಾಳ:  ಬಿ.ಸಿ.ರೋಡ್ ಕೈಕುಂಜೆ ಪೂರ್ವ ಬಡಾವಣೆ ನಿವಾಸಿ ತುಳು ಲಿಪಿ ಶಿಕ್ಷಕ, ಬಂಟ್ವಾಳ ತಾಲೂಕು ಕಸಾಪ ಮಾಜಿ ತಾಲೂಕು ಅಧ್ಯಕ್ಷ, ಯುವವಾಹಿನಿ ಬಂಟ್ವಾಳ ಸ್ಥಾಪಕಾಧ್ಯಕ್ಷ ಬಿ.ತಮ್ಮಯ್ಯ (71) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.

10bhtammayyaಪತ್ನಿ, ಪುತ್ರ ಸಹಿತ ಬಂಧು ಮಿತ್ರರನ್ನು ಅಗಲಿದ್ದಾರೆ.  ಸುದೀರ್ಘ ಅವಧಿಯಲ್ಲಿ ಕಂದಾಯ ಇಲಾಖೆಯಲ್ಲಿ ಗ್ರಾಮ ಕರಣಿಕರಾಗಿ, ಪ್ರಥಮ ದರ್ಜೆ ಸಹಾಯಕರಾಗಿ, ಕಂದಾಯ ಅಧಿಕಾರಿಯಾಗಿ ಕರ್ತವ್ಯ ಸಲ್ಲಿಸಿ ನಿವೃತ್ತರಾದ ಅವರು, ಸರಕಾರಿ ನೌಕರರ ಸಂಘ, ಬಂಟ್ವಾಳ ತಾಲೂಕು ಯುವವಾಹಿನಿಯ ಸ್ಥಾಪಕಾಧ್ಯಕ್ಷರಾಗಿ, ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಿಂದಿರುಗಿ ನೋಡಿದಾಗ ಆತ್ಮಚರಿತ್ರೆ, ಸಹಿತ ಆರು ಕವನ ಸಂಕಲನ, ಕಥೆ, ಲೇಖನ, ಕಥಾಸಂಕಲನಗಳನ್ನು ರಚಿಸಿರುವ ಅವರು, ನಿವೃತ್ತಿಯಾದ ಬಳಿಕ ತುಳು ಲಿಪಿಯನ್ನು ಆಸಕ್ತರಿಗೆ ಕಲಿಸುವ ಮೂಲಕ ಪ್ರಸಿದ್ಧರಾಗಿದ್ದರು. ಹಾಳೆ ಚಪ್ಪಲಿಯನ್ನು ರಚಿಸಿ, ಗಮನ ಸೆಳೆದಿದ್ದ ಅವರು, ಹಲವು ಸಾಮಾಜಿಕ ಚಟುವಟಿಕೆಗಳಲ್ಲ ಸಕ್ರಿಯರಾಗಿದ್ದರು. ಬಿ.ತಮ್ಮಯ್ಯ ಅವರ ನಿಧನಕ್ಕೆ ಶಾಸಕ ರಾಜೇಶ್ ನಾಯ್ಕ್,ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter