Published On: Tue, Sep 10th, 2019

ಅಗ್ನಿಶಾಮಕ ದಳದಲ್ಲಿ ಸಾಹಸಮಯ ಕರ್ತವ್ಯ ಮೆರೆದ ನಾಗರಾಜ ಪೂಜಾರಿ

ಮಂಗಳೂರು:ಜಿಲ್ಲೆಯ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ಪ್ರಜ್ಞೆಯೊಂದಿಗೆ ಸಾಹಸಮಯ ಕೆಲಸ ನಿರ್ವಹಿಸುವುದರಲ್ಲಿ ನಾಗರಾಜ ಪೂಜಾರಿ ಎತ್ತಿದ ಕೈ. ಇವರ ಹೆಸರು ಕೇಳದವರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಜನಪ್ರಿಯವಾಗಿದ್ದಾರೆ. ಸದ್ಯ ಇವರು ಕಂದಾಪುರ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಿಂದೆ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು.

atz
ಹಿಂದೊಮ್ಮೆ ಗುರುಪುರದಲ್ಲಿ ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದ್ದ ವೇಳೆ ನದಿ ತಟದಲ್ಲಿ ಕೊಚ್ಚಿ ಹೋಗಬಹುದಾದ ಅಪಾಯ ಎದುರಿಸುತ್ತಿದ್ದ ಮಗು ರಕ್ಷಿಸಿದ ಇವರು, ಇತ್ತೀಚೆಗೆ ಕೊಲ್ಲೂರು ಬಳಿ ಸೌಪರ್ಣಿಕಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ವಯೋವೃದ್ಧರೊಬ್ಬರ ರಕ್ಷಿಸಲು ಮುಂದಾದ ಸನ್ನಿವೇಶ ಎಲ್ಲರಲ್ಲೂ ರೋಮಾಂಚನ ಉಂಟು ಮಾಡುವಂತಹದ್ದಾಗಿದೆ.

IMG-20190910-WA0046
ಎಲ್ಲಿ ನೋಡಿದರಲ್ಲಿ ಜಲಾವೃತಗೊಂಡಿದ್ದು, ಅಂದು ಸೌಪರ್ಣಿಕಾ ನದಿ ಪ್ರವಾಹ ಉಕ್ಕೇರಿ ಹರಿಯುತ್ತಿದ್ದ ಒಂದು ಅಪಾಯಕಾರಿ ಸಂದರ್ಭ. ಆಗ ಕಚೇರಿಗೆ ಕೊಲ್ಲೂರಿನಿಂದ ಕರೆಯೊಂದು ಬರುತ್ತದೆ. ಆ ಕರೆ ಅನುಸರಿಸಿ, ಸುರಿಯುತ್ತಿದ್ದ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಉಕ್ಕೇರಿ ಹರಿಯುತ್ತಿದ್ದ ಸೌಪರ್ಣಿಕಾ ನದಿಯತ್ತ ಬರುತ್ತಾರೆ. ಅಲ್ಲಿ ಅದಾಗಲೇ ವೃದ್ಧರೊಬ್ಬರು ಕಾಲುಜಾರಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದರು. ಅಪಾಯವನ್ನೂ ಲೆಕ್ಕಿಸದೆ ವೃದ್ಧರ ರಕ್ಷಿಸಲು ನಾಗರಾಜ ಪೂಜಾರಿ ಹಗ್ಗದೊಂದಿಗೆ ಮುಂದೆ ಸಾಗುತ್ತಾರೆ. ಈಜಾಡುತ್ತಲೇ, ಹಗಗದ ಸಹಾಯದಿಂದ ಮುಂದೆ ಸಾಗಿದಾಗ ಕೈಮೀರಿದ ಅವಧಿಯಲ್ಲಿ ವೃದ್ಧರನ್ನು ಜೀವಂತವಾಗಿ ರಕ್ಷಿಸಲು ಸಾಧ್ಯವಾಗದೆ ಶವ ಮೇಲೆತ್ತುವಲ್ಲಿ ಯಶಸ್ವಿಯಾಗುತ್ತಾರೆ.

IMG-20190910-WA0047
ಕರ್ತವ್ಯ ಪ್ರಜ್ಞೆಯಿಂದ ಹಲವು ಬಾರಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸಿದ ನಾಗರಾಜ ಪೂಜಾರಿಯವರ ಸಾಹಸಗಾಥೆ ಒಂದೆರಡು ವೀಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
ಮತ್ತೊಂದು ಸಂದರ್ಭದಲ್ಲಿ ಸಾಲಿಗ್ರಾಮದ ಕಾರ್ಕಡದಲ್ಲಿ ವೃದ್ಧೆಯೊಬ್ಬರು ಮನೆ ಎದುರಿನ ಬಾವಿಗೆ ಹಾರಿ ಪ್ರಾಣ ಬಿಟ್ಟರು. ಶವ ಮೇಲೆತ್ತಲು ಬಾವಿಯಲ್ಲಿನ ನೀರು ಖಾಲಿ ಮಾಡಲು ಹೆವಿ ಮೋಟಾರು ಬಳಸಿದರ ಪರಿಣಾಮ ಶವ ಐದಾರು ಅಡಿ ಮಣ್ಣಿನಡಿಗೆ ಕುಸಿದು ಹೋಗಿತ್ತು. ಸ್ಥಳಕ್ಕೆ ಧಾವಿಸಿದ ನಾಗರಾಜ ನೇತೃತ್ವದ ತಂಡ ಸಾಹಸಮಯ ಕಾರ್ಯಾಚರಣೆಯೊಂದಿಗೆ ಶವ ಮೇಲೆಕ್ಕೆತ್ತಿ ತಂದಿತ್ತು. ಹೋದ ವರ್ಷ ಅತಿವೃಷ್ಟಿಗೆ ಬನ್ನಾಡಿಯ ವಸತಿ ಪ್ರದೇಶದತ್ತ ಪ್ರವಾಹ ಉಕ್ಕೇರಿ ಹರಿದ ಸಂದರ್ಭ. ಅಂದು ಹಲವು ಮನೆ ಮಂದಿ ಅಪಾಯ ಎದುರಿಸುತ್ತಿದ್ದರು. ಆಗಲೂ ನಾಗರಾಜ ಮತ್ತವರ ತಂಡ ವೀರೋಚಿತ ಕಾರ್ಯಾಚರಣೆ ನಡೆಸುವ ಮೂಲಕ ಹಲವರನ್ನು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ದಿತ್ತು.
ಕೆಲವು ವರ್ಷದಿಂದ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಅಪಾಯದ ಸಂದರ್ಭಗಳನ್ನೂ ಲೆಕ್ಕಿಸದೆ ಜೀವದ ಮೇಲಿನ ಹಂಗು ತೊರೆದು ಜನರ ಪ್ರಾಣ ರಕ್ಷಿಸಲು ಪ್ರಯತ್ನಿಸುತ್ತಾರೆ. ಬಹುತೇಕ ಕಡೆಗಳಲ್ಲಿ ಇವರು ಪ್ರಾಣಾಪಾಯದಲ್ಲೊಇದ್ದ ಜನರ ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದಲ್ಲಿ ಇವರೊಬ್ಬರ ಸಾಹಸಮಯಿ ಪ್ರವೃತ್ತಿಯ ಸಿಬ್ಬಂದಿ ಎಂಬುದಕ್ಕೆ ಹಲವು ಜ್ವಲಂತ ಸಾಕ್ಷಿಗಳಿವೆ. ಇವರ ಧ್ಯೆರ್ಯ ಎಲ್ಲಡೆ ಮೆಚ್ಚುಗೆಗೆ ಪಾತ್ರವಾಗಿದೆ. ಭವಿಷ್ಯದಲ್ಲಿ ಇವರ ಸಾಧನೆಯ ಪ್ರತಿ ಹಂತದಲ್ಲೂ ಯಶಸ್ವಿ ಹಾದಿ ಸಿಗಲಿ ಹಾಗೂ ಪುರಸ್ಕಾರಗಳು ಲಭಿಸುವಂತಾಗಲಿ ಎಂಬುದು ನಮ್ಮ ಹಾರೈಕೆ.

ಧನಂಜಯ ಗುರುಪುರ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter