ಕೆತ್ತಿಕಲ್ ಖ್ಯಾತ ನಾಟಿವೈದ್ಯೆಯಾಗಿದ್ದ ಕಲ್ಯಾಣಿ ಪೂಜಾರ್ತಿ ನಿಧನ
ಕೈಕಂಬ: ವಾಮಂಜೂರು ಕೆತ್ತಿಕಲ್ ಪರಿಸರದಲ್ಲಿ ಖ್ಯಾತ ನಾಟಿವೈದ್ಯೆಯಾಗಿದ್ದ ಕಲ್ಯಾಣಿ ಪೂಜಾರ್ತಿ (95) ಆ 30ರಂದು ಮುಂಜಾನೆ ದೇವಸ ಬೆಟ್ಟು ಮನೆ, ಕೆತ್ತಿಕಲ್ ವಾಮಂಜೂರಿನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ವಾಮಂಜೂರು ಪರಿಸರದಲ್ಲಿ ಹಲವಾರು ವರ್ಷಗಳಿಂದ ನಾಟಿವೈದ್ಯೆಯಾಗಿ ಪ್ರಸಿದ್ದಿ ಪಡೆದಿದ್ದರು. ಇತ್ತೀಚೆಗೆ ಅಲ್ಪಕಾಲಿಕ ಅಸೌಖ್ಯದಿಂದ ಬಳಲುತ್ತಿದ್ದರು.