Published On: Fri, Aug 23rd, 2019

ಮಂಚಿ ವಲಯ ಮಟ್ಟದ ಬಾಲಕ,ಬಾಲಕಿಯರ ಕಬಡ್ಡಿ ಪಂದ್ಯಾಟ

ಬಂಟ್ವಾಳ:  ಮಂಚಿ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ, ಬಾಲಕಿಯರ ಕಬಡ್ಡಿ  ಪಂದ್ಯಾಟ   ಇರಾ  ತಾಳಿತ್ತಬೆಟ್ಟು  ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯ ಮೈದಾನದಲ್ಲಿ ನಡೆಯಿತು.               ಬಂಟ್ವಾಳ ತಾಲೂಕು ಪಂಚಾಯಿತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ರವರು ಕಬಡ್ಡಿಿ ಪಂದ್ಯಾಟವನ್ನು  ಉದ್ಘಾಟನೆಯನ್ನು   ನೆರವೇರಿಸಿ ಶುಭ ಹಾರೈಸಿದರು     ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ   ಸಭಾಧ್ಯಕ್ಷತೆ  ವಹಿಸಿದ್ದರು.      ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಚಂದ್ರಿಕಾ ಆರ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಮಂಚಿ ವಲಯ ಕ್ರೀಡಾಕೂಟದ ಅಧ್ಯಕ್ಷ ವಿಠಲ್ ನಾಯಕ್ ಹಾಗೂ ಕಾರ್ಯದರ್ಶಿಯಾದ ಶಶಿ ಬಿ, ಸಮೂಹ ಸಂಪನ್ಮೂಲ ವ್ಯಕ್ತಿಯಾದ ರೋಹಿಣಿ, ನಿಕಟಪೂರ್ವ ಅಧ್ಯಕ್ಷ ಮುರಳೀಧರ ಭಂಡಾರಿ, ಸುರಕ್ಷಾ ಸಮಿತಿ ಅಧ್ಯಕ್ಷ ಜಗನ್ನಾಥ ಪಕ್ಕಳ, ಊರಿನ ಹಿರಿಯರಾದ ವಾಮನ ಪೂಜಾರಿ ಮತ್ತು ಶಾಲಾ ಮುಖ್ಯ ಶಿಕ್ಷಕಿ ಸುಜಾತ ಟಿ.ಎಸ್ ರವರು ವೇದಿಕೆಯಲ್ಲಿದ್ದರು.

19-04-04-IMG-20190822-WA0016-768x440ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಗೂ ಶಾಲಾ ಸಹ ಶಿಕ್ಷಕರಾದ ಜೋನ್ ಅಂತೋನಿ ಫೆರ್ನಾಂಡಿಸ್ ರವರು ವೀಕ್ಷಕ ವಿವರಣೆ ನೀಡಿದರು.    ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಅಂಬರ್ ವ್ಯಾಲಿ ಆಂಗ್ಲ ಮಾಧ್ಯಮ ಶಾಲೆ, ದ್ವಿತೀಯ ಸ್ಥಾನವನ್ನು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ.ಹಿ.ಪ್ರಾ.ಶಾಲೆ ಸುರಿಬೈಲು, ದ್ವಿತೀಯ ಸ್ಥಾನವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಹಾಗೂ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ.ಪ್ರೌ.ಶಾಲೆ ಮಂಚಿ ಕುಕ್ಕಾಜೆ, ದ್ವಿತೀಯ ಸ್ಥಾನವನ್ನು ಸ.ಪ್ರೌ.ಶಾಲೆ ಸಜೀಪ ನಡು ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ.ಪ್ರೌ.ಶಾಲೆ ಸುರಿಬೈಲು, ಹಾಗೂ ದ್ವಿತೀಯ ಸ್ಥಾನವನ್ನು ಸ.ಪ್ರೌ.ಶಾಲೆ ಕಾಡುಮಠ ಪಡೆದುಕೊಂಡವು .

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter