Published On: Fri, Aug 23rd, 2019

ಇಲಿಜ್ವರ ನಿಯಂತ್ರಣದ ಮಾಹಿತಿ ಕಾರ್ಯಾಗಾರ

ಬಂಟ್ವಾಳ:   ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ  ಆಂತರಿಕ ಗುಣಮಟ್ಟ ಭರವಸೆ ಕೋಶ, ರೆಡ್‌ರಿಬ್ಬನ್ ಘಟಕಗಳ ಆಶ್ರಯದಲ್ಲಿ ಇಲಿ ಜ್ವರ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಜಾಗೃತಿ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.   ರಾಯಿಪ್ರಾಥಮಿಕ ಆರೋಗ್ಯ ಕೇಂದ್ರ್ರದ  ವೈದ್ಯಾಧಿಕಾರಿ ಡಾ.ದೀಪಕ್   ವಿದ್ಯಾರ್ಥಿಗಳಿಗೆ ಇಲಿಜ್ವರದ ಬಗ್ಗೆ ಮಾಹಿತಿ ನೀಡಿದರು. ಇಲಿ ಜ್ವರವು ಮಳೆಗಾಲದಲ್ಲಿ ಕಂಡು ಬರುವ ಸಾಂಕ್ರಾಮಿಕ ರೋಗವಾಗಿದ್ದು ಲೆಪ್ಟೋಸ್ಪೈರ ಎಂಬ ಸೂಕ್ಷ್ಮಾಣು ಜೀವಿಯಿಂದ ಹರಡುತ್ತದೆ. ಸಾಕು ಪ್ರಾಣಿಗಳು ಹಾಗೂ ಕಾಡು ಪ್ರಾಣಿಗಳ ಮೂತ್ರದಿಂದ ನೀರಿನ ಮೂಲಕ ದೇಹವನ್ನು ಸೇರಿಕೊಳ್ಳುತ್ತದೆ. ಮುಂಜಾಗ್ರತಾ ಕ್ರಮವಾಗಿ ಪರಿಸರವನ್ನು ನಿರ್ಮಲವಾಗಿಟ್ಟುಕೊಳ್ಳು  ವುದು ಹಾಗೂ  ಶುದ್ಧೀಕರಿಸಿದ ನೀರನ್ನು ಬಳಸುವಂತೆ   ತಿಳಿ ಹೇಳಿದರು.

18-29-27-IMG_20190821_144110ಆರೋಗ್ಯ ಸಹಾಯಕಿ   ಜ್ಯೋತಿ   ಹಾಗೂ  ಆಶಾ ಕಾರ್ಯಕರ್ತೆ  ಸೀತಾ  ಇಲಿಜ್ವರದ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕುರಿತ ಕರಪತ್ರಗಳನ್ನು ವಿದ್ಯಾರ್ಥಿಗಳಿಗೆ ಹಂಚಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ಭಟ್ ಇವರು ಮಾತನಾಡಿ ನಾವು ವಾಸಿಸುವ ಪರಿಸರವನ್ನು ಪರಿಶುದ್ಧವಾಗಿ ನಿರ್ವಹಿಸದಿದ್ದರೆ ರೋಗರುಜಿನಗಳು ಉದ್ಭವಿಸುವುದು ಸಹಜವಾಗಿರುತ್ತದೆ. ಇಲಿಜ್ವರವು ಸಾಂಕ್ರಾಮಿಕ ರೋಗವಾಗಿದ್ದು ನೀರಿನ ಮೂಲಕ ಸೂಕ್ಷ್ಮಾಣು ಜೀವಿಗಳು ಮಾನವನ ದೇಹ ಸಂಪರ್ಕ ಪಡೆದು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪರಿಸರ ನೈರ್ಮಲ್ಯ ಹಾಗೂ ಕ್ರಮಬದ್ಧ ಚಿಕಿತ್ಸೆಯಿಂದ ಈ ರೋಗವನ್ನು ತಡೆಗಟ್ಟಬಹುದು ಎಂದರು.ರೆಡ್‌ರಿಬ್ಬನ್ ಘಟಕದ ಸಂಚಾಲಕರಾದ ದೇವಿಪ್ರಸಾದ್       ಹಾಜರಿದ್ದರು. ವಿದ್ಯಾರ್ಥಿಗಳಾದ  ರಾಜೇಶ್   ಸ್ವಾಗತಿಸಿದರೆ, ದಿನೇಶ್ ಕೆ ವಂದಿಸಿದರು   ಗುರುಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು,

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter