Published On: Thu, Aug 22nd, 2019

ಕಲ್ಲಡ್ಕ ಶಾಲೆಯಲ್ಲಿ ಎನ್ ಎಸ್ ಎಸ್ ಉದ್ಗಾಟನೆ

ಬಂಟ್ವಾಳ :  ರಾಷ್ಟ್ರೀಯ ಸೇವಾಯೋಜನೆಯ ಸ್ವಯಂಸೇವಕರು ಸಮಾಜದಲ್ಲಿ ಉತ್ಸಾಹ, ತ್ಯಾಗ, ಸಹಬಾಳ್ವೆ ಹಾಗೂ ನಿಸ್ವಾರ್ಥದಿಂದ ಸೇವೆ ಮಾಡಬೇಕು. ಎನ್.ಸಿ.ಸಿ ದೇಶದ ರಕ್ಷಣೆಗೆ ಶ್ರಮಿಸಿದರೆ, ದೇಶವನ್ನು ಕಟ್ಟುವ ಕಾರ್ಯದಲ್ಲಿ ರಾಷ್ಟ್ರೀಯ ಸೇವಾಯೋಜನೆಯು ಶ್ರಮಿಸುತ್ತದೆ ಎಂದು  ಸವಣೂರು  ವಿದ್ಯಾರಶ್ಮಿ ಪದವಿ ವಿದ್ಯಾಲಯ  ಇಲ್ಲಿಯ ಉಪನ್ಯಾಸಕ ವೆಂಕಟರಮಣ.ಎನ್ ನುಡಿದರು. ಪ್ರಥಮದರ್ಜೆ ಕಾಲೇಜು ಕಲ್ಲಡ್ಕ ಇದರ ರಾಷ್ಟ್ರೀಯ ಸೇವಾಯೋಜನೆಯ 2019-20ನೇ ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

_DSC0059

_DSC0040

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಇವರು ವಹಿಸಿ ಶುಭ ಹಾರೈಸಿದರು. ಯೋಜನಾಧಿಕಾರಿ ಹರೀಶ್ ರವರು ಉಪಸ್ಥಿತರಿದ್ದರು. ಕಾಯಕ ಎಂಬ ಶೀರ್ಷಿಕೆಯಡಿಯಲ್ಲಿ ತಿಂಗಳಿಗೆ 2 ಭಿತ್ತಿ ಪತ್ರಿಕೆಗಳನ್ನು ವಿದ್ಯಾರ್ಥಿಗಳು ಹೊರತರುತ್ತಿದ್ದಾರೆ.ವಿದ್ಯಾರ್ಥಿಿಗಳಾದ ಅರ್ಪಿತಾ ಸ್ವಾಗತಿಸಿ, ದುರ್ಗಾಶ್ರೀ ವಂದಿಸಿ, ವೇಘಾಶಿನಿ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter