Published On: Thu, Aug 22nd, 2019

ಕಾಮಾಜೆ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವನಮಹೋತ್ಸವ

ಬಂಟ್ವಾಳ: ತಾಂತ್ರಿಕ ಜೀವನದ ಮಧ್ಯೆ ಗಿಡಮರಗಳ ನೆನಪು ಮರೆತುಬಿಟ್ಟಿದೆ, ಹೂಗಿಡಗಳ ಪ್ರೀತಿ ಯ ಬದಲು ಮೊಬೈಲ್ ನ ಮೇಲೆ ಪ್ರೀತಿ ಹೆಚ್ಚಾಗಿರುವುದು  ದುರಂತ ಎಂದು ಬಂಟ್ವಾಳ ಕಾಮಾಜೆ ಪ್ರಥಮ ದರ್ಜೆ ಕಾಲೇಜಿನ ಕಾರ್ಯಧ್ಯಕ್ಷ ,ಬಿ.ಸಿ.ರೋಡಿನ ವಕೀಲ ಪ್ರಸಾದ್ ಕುಮಾರ್ ರೈ ಹೇಳಿದರು.    ಅರಣ್ಯ ಇಲಾಖೆ , ದ.ಕ‌.ಜಿಲ್ಲಾ ಪಂಚಾಯತ್ , ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು ಹಾಗೂ ಸಾಮಾಜಿಕ ಅರಣ್ಯ ವಲಯ ಬಂಟ್ವಾಳ ಇದರ ವತಿಯಿಂದ ಬಂಟ್ವಾಳ ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ   ಗುರುವಾರ   ನಡೆದ ವನಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡುತ್ತಿದ್ದರು.1 (3)
ಈ ದೇಶ ಉಳಿಯಬೇಕಾದರೆ ವನ್ಯ ಸಂಪತ್ತು ಉಳಿಯಬೇಕಾಗಿದೆ, ವನ್ಯ ಸಂಪತ್ತು ಉಳಿಯಬೇಕಾದರೆ  ವೈಜ್ಞಾನಿಕ ರೀತಿಯಲ್ಲಿ ಇದರ ಅಧ್ಯಯನ ಆಗಬೇಕು ಎಂದ ಅವರು,ಅರಣ್ಯ ರಕ್ಷಣೆ ನಮ್ಮ ಹೊಣೆಯಾಗಬೇಕು, ಅದು ವಿದ್ಯಾರ್ಥಿ ದೆಸೆಯಿಂದ ಆರಂಭವಾಗಬೇಕು ಎಂದು ಹೇಳಿದರು.ಕಾರ್ಯಕ್ರಮ ಆಧ್ಯಕ್ಷತೆ ವಹಿಸಿದ ಕಾಮಾಜೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ್ ಭಟ್ ಮಾತನಾಡಿ, ಮನುಷ್ಯನ ಭವಿಷ್ಯ ಕ್ಕಾಗಿ ಅರಣ್ಯ ರಕ್ಷಣೆ ಮಾಡಬೇಕಾಗಿದೆ ಎಂದರು.2
ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುರೇಶ್ ಬಿ ಪುರಸಭಾ ಸದಸ್ಯೆ  ಶೋಭಾಹರಿಶ್ಚಂದ್ರ, ಐ.ಕ್ಯೂ, ಎ.ಸಿ.ಸಂಚಾಲಕ ಪ್ರೋಫೆಸರ್ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ಸಾಮಾಜಿಕ ಅರಣ್ಯ ವಲಯಾಧಿಕಾರಿ  ರಾಜೇಶ್ ಬಳಿಗಾರ್ ಪ್ರಸ್ತಾವಿಸಿ,ಸ್ವಾಗತಿಸಿದರು.ಉಪವಲಯ ಅರಣ್ಯಾಧಿಕಾರಿ ರಂಜಿತ ಎ. ವಂದಿಸಿದರು.
ವಿದ್ಯಾರ್ಥಿ ನಿ ಲಿಖಿತ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter