Published On: Mon, Aug 19th, 2019

ಬೆನ್ನುಮೂಳೆ ಮುರಿತಕೊಳಗಾದ ಕರುಣಾಕರ ಪೂಜಾರಿ ಚಿಕಿತ್ಸೆಗೆ ಸ್ಫಂದನೆ

ವಿಟ್ಲ: ಕಳೆದ ಹತ್ತು ವರ್ಷಗಳ ಹಿಂದೆ ಬಾವಿ ಕೆಲಸದಲ್ಲಿ ನಿರತರಾಗಿದ್ದ ಕರುಣಾಕರ ಪೂಜಾರಿ ನವಗ್ರಾಮ ಮಂಗಳಪದವು ಇವರು ಆಕಸ್ಮಿಕವಾಗಿ ಬಾವಿಯ ಮೇಲಿನಿಂದ ಬಿದ್ದ ಕಾರಣ ಬೆನ್ನುಮೂಳೆ ಮುರಿತಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಹತ್ತು ವರ್ಷಗಳಿಂದಲೂ ಮಲಗಿದ ಸ್ಥಿತಿಯಲ್ಲಿದ್ದಾರೆ.427a39ad-8937-4293-8228-8e3a895f610d

ತನ್ನ ದೈನಂದಿನ ಚಟುವಟಿಕೆಗಳನ್ನು ಕೂಡ ಹಾಸಿಗೆಯಲ್ಲಿಯೇ ನಡೆಸುತ್ತಿದ್ದು ಮನೆಯ ಆಧಾರ ಸ್ತಂಬವೇ ಕಳಚಿದಂತಾಗಿದೆ. ಪ್ರಸ್ತುತ ಇವರ ಚಿಕಿತ್ಸಾವೆಚ್ಚ, ಮೂರು ಹೆಣ್ಣುಮಕ್ಕಳ ಜವಾಬ್ದಾರಿಯನ್ನು ಇವರ ಧರ್ಮಪತ್ನಿ ನಿಭಾಯಿಸುತ್ತಿದ್ದು ದಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ನೆರವು ನೀಡಲೆಂದೇ ರೂಪುಗೊಂಡಿರುವಂತಹ ತಂಡವೇ ” ಸ್ಪಂದನ ಗುರುತು ವಿಟ್ಲ ” ಈ ತಂಡದ ಸದಸ್ಯರು ಕರುಣಾಕರ ಪೂಜಾರಿ ಯವರ ಪರಿಸ್ಥಿತಿಯನ್ನು ಪರಿಶೀಲಿಸಿ ಆ.18 ರಂದು ಅವರ ಮನೆಗೆ ಭೇಟಿ ನೀಡಿ “ಸ್ಪಂದನ ಗುರುತು “ತಂಡದ ಹೆಸರಿನ ರೂಪಾಯಿ 10,000ದ ಚೆಕ್ಕನ್ನು ಹಸ್ತಾಂತರಿಸುವ ಮೂಲಕ ತಂಡವು ತನ್ನ ಪ್ರಥಮ ಹೆಜ್ಜೆ ಇಟ್ಟಿದೆ.5c2162bf-7307-4b3d-aa83-4414a4f89cef (1)

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter