Published On: Mon, Aug 19th, 2019

ಮಾವು ಅಭಿವೃದ್ಧಿ ಕೇಂದ್ರಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ

ಶ್ರೀನಿವಾಸಪುರ :ವಿಧಾನ ಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ 85 ಕೊಳವೆ ಬಾವಿಗಳನ್ನು ಹೊಸದಾಗಿ ಕೊರೆಸಬೇಕಾಗಿದ್ದು 15 ದಿನಗಳೊಳಗಾಗಿ ಅವಶ್ಯಕತೆ ಇರುವ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಬೇಕು. ಸರ್ಕಾರಿ ಬೋರ್‍ವೆಲ್ ಎಂದು ಬೋರ್‍ವೆಲ್ ಮಾಲೀಕರು ಬೋರು ಕೊರೆಸಲು ಮುಂದೆ ಬರದಿದ್ದರೆ ಅಂತಹ ಬೋರ್‍ವೆಲ್ ಲಾರಿಗಳನ್ನು ವಶಪಡಿಸಿಕೊಳ್ಳುವಂತೆ ವಿಧಾನ ಸಭಾ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಜಿಲ್ಲಾಧಿಕಾರಿ ಜೆ. ಮಂಜುನಾಥ್‍ರವರಿಗೆ ಸೂಚಿಸಿದರು.Srinivaspur Photo 16-08-2019 Ph-1.

ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಶುಕ್ರವಾರ ಶ್ರೀನಿವಾಸಪುರ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು 35 ಗ್ರಾಮಗಳಲ್ಲಿ ತುರ್ತು ಕೊಳವೆ ಬಾವಿಗಳನ್ನು ಕೊರೆಸಬೇಕಾಗಿದೆ. ಇನ್ನು 50 ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಇರುವುದರಿಂದ ಆ ಗ್ರಾಮಗಳಲ್ಲಿಯೂ ಕೊಳವೆ ಬಾವಿಗಳ ಅವಶ್ಯಕತೆ ಇದೆ ಎಂದು ಎಇಇ ಅಪ್ಪಿರೆಡ್ಡಿ ಮಾಹಿತಿ ನೀಡಿದರಲ್ಲದೆ ಕೊಳವೆ ಬಾವಿಗಳನ್ನು ಕೊರೆಸಲು ಲಾರಿ ಮಾಲೀಕರು ಹಾಗೂ ಗುತ್ತಿಗೆದಾರರು ಮುಂದಾಗುತ್ತಿಲ್ಲ. ಈಗಾಗಲೇ ಕೊರೆಸಿರುವ ಕೊಳವೆ ಬಾವಿಗಳು ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಆ ಕಾರಣಕ್ಕಾಗಿ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗುತ್ತಿಲ್ಲ ಎಂದು ಮಾಹಿತಿ ನೀಡಿದಾಗ ಬಾಕಿ ಇರುವ ಹಣವನ್ನು ಸರ್ಕಾರದೊಂದಿಗೆ ಚರ್ಚಿಸಿ ಬಿಡುಗಡೆ ಮಾಡಿಸುವುದಾಗಿ ಗುತ್ತಿಗೆದಾರ ಕೃಷ್ಣಾರೆಡ್ಡಿಗೆ ಭರವಸೆ ನೀಡಿದರಲ್ಲದೆ ಈಗ ಅವಶ್ಯಕತೆ ಇರುವ ಕೊಳವೆ ಬಾವಿಗಳನ್ನು ಕೊರೆಸಲು ಲಾರಿಗಳನ್ನು ಕಳುಹಿಸಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಬೋರ್‍ವೆಲ್ ಲಾರಿಗಳನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ದಿನದ 24 ಗಂಟೆಗಳ ಅವಧಿಯಲ್ಲಿಯೂ ಕೊಳವೆ ಬಾವಿಗಳಿಗಾಗಿ ವಿದ್ಯುತ್ ಸರಬರಾಜು ಆಗುತ್ತಿರುವುದರಿಂದ ಕೊಳವೆ ಬಾವಿಗಳನ್ನು 5 ರಿಂದ 6 ಗಂಟೆಗಳ ಮಾತ್ರ ಬಳಸುವಂತಾಗಬೇಕು ಖಾಸಗಿಯವರಿಗೂ ಸೂಚನೆ ನೀಡಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಪ್ರತಿ ಗ್ರಾಮಕ್ಕೂ ಬೇಟಿ ನೀಡುತ್ತೇನೆ ಸರ್ಕಾರದಿಂದ ಮಂಜೂರಾಗಿರುವ ಎಲ್ಲ ಕಾಮಗಾರಿಗಳು ಮುಗಿದಿರಬೇಕು. ನಾನು ಗ್ರಾಮಸ್ಥರಿಗೆ ನೀಡಿರುವ ಭರವಸೆಗಳು ಎಲ್ಲವೂ ಈಡೇರಿರಬೇಕು ಅದಕ್ಕೆ ತಕ್ಕಾಗೆ ಅನುದಾನಗಳನ್ನು ನೀಡಿದ್ದೇನೆ. ಅದನ್ನು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಬಳಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅಂಬೇಡ್ಕರ್, ವಾಲ್ಮೀಕಿ, ಇತರೆ ಸಮುದಾಯ ಭವನಗಳಿಗೆ 5 ಲಕ್ಷ ಬದಲಾಗಿ ಹೆಚ್ಚುವರಿಯಾಗಿ ತಲಾ ಎರಡು ಲಕ್ಷ ರೂಗಳ ಅನುದಾನವನ್ನು ನೀಡಲಾಗಿದೆ. ಇದರ ಹಣ ದುರುಪಯೋಗ ಆಗದಂತೆ ಕಾಮಗಾರಿಗಳ ಪೂರ್ಣಗೊಳಿಸಲು ಸಹಕರಿಸಬೇಕೆಂದು ಕೋರಿದರು.

ಈಗಾಗಲೇ ಪೂರ್ಣಗೊಂಡಿರುವ ಸಮುದಾಯ ಭವನಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಕೋಡಿಪಲ್ಲಿ ಸುಬ್ಬರೆಡ್ಡಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನರೇಶ್ ತಿಳಿಸಿದಾಗ ಶೇ. 50 ರಷ್ಟು ಕಾಮಗಾರಿಗಳು ಮುಗಿದಿದ್ದು ಇನ್ನು 50 ರಷ್ಟು ಕಾಮಗಾರಿಗಳು ಪ್ರಗತಿಯಲ್ಲಿದೆ. ವಾಲ್ಮೀಕಿ ಸಮುದಾಯ ಭವನಗಳಿಗೆ ಹಣ ಬಿಡುಗಡೆಯಾಗಬೇಕಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯಿಂದ ಮಾಹಿತಿ ನೀಡಿದರು. ಇದು ಅಂಬೇಡ್ಕರ್ ನಿಗಮದಿಂದ ಬರುವ ಹಣ ಈ ಹಣ ದುರುಪಯೋಗವಾದರೆ ಅಂಬೇಡ್ಕರ್‍ರವರಿಗೆ ಅಪಮಾನ ಆದಂತೆ ತಿನ್ನುವುದಕ್ಕೆ ನಳಪಾಕ ಅಲ್ಲ ಮಾನ ಮರ್ಯಾದೆಯಿಂದ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ದರಖಾಸ್ತು ಕಮಿಟಿಯಲ್ಲಿ ಮಂಜೂರಾಗಿರುವ ಸಾಗುವಳಿ ಚೀಟಿಗಳನ್ನು ಕೆಲವರಿಗೆ ತಲುಪಿಲ್ಲ. ಕೆಲವು ಅರ್ಜಿಗಳು ತಿರಸ್ಕರಿಸಲಾಗಿದೆ ಎಂದು ದಲಿತ ಮುಖಂಡ ಬಂದಾರ್ಲಪಲ್ಲಿ ಮುನಿಯಪ್ಪ ತಿಳಿಸಿದಾಗ ಪಟ್ಟಣದಲ್ಲಿ ನಿವೇಶನ ಹಾಗೂ ಮನೆಯನ್ನು ಸರ್ಕಾರದಿಂದ ಪಡೆದವರಿಗೆ ಮತ್ತೇ ಜಮೀನು ಬೇಕು ಎಂದರೆ ಸಾಧ್ಯವಿಲ್ಲ. ನಜವಾದ ಅರ್ಹ ಫಲಾನುಭವಿಗಳನ್ನು ಮಾತ್ರ ಗುರ್ತಿಸಿ ಅಂತಹವರಿಗೆ ಮಾತ್ರ ಸಾಗುವಳಿ ಚೀಟಿಯನ್ನು ನೀಡಲಾಗಿದೆ ಎಂದರು. ವಿವಿಧ ವಸತಿ ಯೋಜನೆಗಳಲ್ಲಿ 2017-18ನೇ ಸಾಲಿನಲ್ಲಿ ಮಂಜೂರಾಗಿರುವ ಮನೆಗಳಿಗೆ 10 ದಿನಗಳೊಳಗಾಗಿ ಮಂಜೂರಾತಿ ಪತ್ರಗಳನ್ನು ನೀಡುವಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ ಶಾಸಕರ ಅನುದಾನದಲ್ಲಿ ಮಂಜೂರಾಗಿರುವ ಸಿ.ಸಿ. ರಸ್ತೆ ಹಾಗೂ ಎನ್.ಆರ್.ಇ.ಜಿಯಲ್ಲಿ ನಿರ್ಮಿಸುವ ರಸ್ತೆಗಳನ್ನು ಒಂದು ತಿಂಗಳೊಳಗಾಗಿ ಪೂರ್ಣಗೊಳಿಸಬೇಕೆಂದು ಅಭಿವೃದ್ಧಿ ಅಧಿಕಾರಿಗಳಿಗೆ ಗಡುವು ನೀಡಿದರು.ಬೆಸ್ಕಾಂ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೆ ಬಿಳಂಭವಾಗಿರುವ ಕಾಮಗಾರಿಗಳನ್ನು ಮುಗಿಸಬೇಕು ಎಂದು ಎಚ್ಚರಿಕೆ ನೀಡಿದರು.

 ಗ್ರಾಮ ಪಂಚಾಯ್ತಿಗಳಿಗೆ ಮಂಜೂರಾಗಿರುವ 14ನೇ ಹಣಕಾಸು ಯೋಜನೆಯಲ್ಲಿ ಶೇ.50 ರಷ್ಟು ಕುಡಿಯುವ ನೀರಿಗೆ ಬಳಸುವಂತೆ ಕ್ರೀಯಾಯೋಜನೆ ತಯಾರಿಸಕೊಂಡು ಬಂದರೆ ಮಾತ್ರ ಅನುಮೋದನೆ ನೀಡುವುದಾಗಿ ಸಿ.ಇ.ಓ ಜಗದೀಶ್ ಪಿ.ಡಿ.ಓಗಳಿಗೆ ಸೂಚನೆ ನೀಡಿದರು.
ವರ್ಷಕ್ಕೆ ಒಬ್ಬರು ಅಧ್ಯಕ್ಷರು ಬದಲಾವಣೆ ಆಗುವ ಕಾರಣ 14ನೇ ಹಣಕಾಸು ಯೋಜನೆ ಕಾರಣವಾಗಿದೆ ತಮಗೆ ಇಷ್ಟಬಂದಂತೆ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅರ್ಧ ಹಣವನ್ನು ನೀರು ಪೂರೈಕೆಗೆ ಬಳಸಿದರೆ ಉಳಿದ ಹಣವನ್ನು ಶಾಶ್ವತವಾದಂತಹ ಕಾಮಗಾರಿಗಳಿಗೆ ಬಳಸಬೇಕು ಎಂದು ರಮೇಶ್ ಕುಮಾರ್ ತಿಳಿಸಿದಾಗ ಹಳೆಯ ರಿಪೇರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೆ ಹೊಸದಾಗಿ ಮಾಡುವ ಕಾಮಗಾರಿಗಳಾದ ರಸ್ತೆ, ಚರಂಡಿ ಮುಂತಾದ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಲು ಸಿ.ಇ.ಓ ಜಗದೀಶ್ ಪಿಡಿಓಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಜೆ. ಮಂಜುನಾಥ್, ಎ.ಸಿ. ಸೋಮಶೇಖರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಗೋವಿಂದಸ್ವಾಮಿ, ಡಿ.ಸಿ. ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನರೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸನ್, ಸಿ.ಎಂ. ಮುನಿಯಪ್ಪ, ಎ.ಪಿ,ಎಂ.ಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಕೆ.ಕೆ. ಮಂಜು ಮುಂತಾದವರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter