Published On: Mon, Aug 19th, 2019

ಬೆಟ್ಟಿಂಗ್ ಮತ್ತು ಮಟ್ಕಾ ದಂದೆಕೋರರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಲು ರೈತ ಸಂಘದಿಂದ ಮನವಿ

ಕೋಲಾರ: ಜಿಲ್ಲಾದ್ಯಾಂತ ಜನ ಸಾಮಾನ್ಯರ ಪ್ರಾಣ ತೆಗೆಯುವ ವೀಲಿಂಗ್ ಹಾಗೂ ಬಡವರ ರಕ್ತ ಹೀರುವ ಬೆಟ್ಟಿಂಗ್ ಮತ್ತು ಮಟ್ಕಾ ದಂದೆಯಲ್ಲಿ ಭಾಗಿಯಾಗುವ ದಂದೆಕೋರರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಪೋಲಿಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.Raitha sangha sp veelling horata news 17-08-2019 (2)

ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅತಿ ಹೆಚ್ಚಾಗಿ ಮುಸ್ಲೀಂ ಹಬ್ಬಗಳಲ್ಲಿ ಹಾಗೂ ಬೇರೆ ದಿನಗಳಲ್ಲಿ 100ಕ್ಕೆ 99ರಷ್ಟು ಮುಸ್ಲೀಂ ಯುವಕರೇ ಬೈಕ್ ವೀಲಿಂಗ್‍ನಲ್ಲಿ ತೊಡಗಿದ್ದರು ಅದಕ್ಕೆ ಸಂಬಂಧಪಟ್ಟ ಮಸೀದಿ ಅದ್ಯಕ್ಷರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇವರಿಂದ ನೂರಾರು ಅಮಾಯಕರು ಪ್ರಾಣ ಕಳೆದುಕೊಳ್ಳುವ ಜೊತೆಗೆ ಕೈಕಾಲುಗಳನ್ನು ಕಳೆದುಕೊಂಡು ಅಂಗವಿಕಲರಾಗುತ್ತಿದ್ದಾರೆ. ಅದರ ಜೊತೆಗೆ ಪೋಲಿಸ್ ಇಲಾಖೆಯ ಮೇಲೆ ಸಾರ್ವಜನಿಕರು ಅಪಾರವಾದ ನಂಬಿಕೆ ಇಟ್ಟಿದ್ದಾರೆ.Raitha sangha sp veelling horata news 17-08-2019

ಪೋಲಿಸರನ್ನು ಕಣ್ಣಿಗೆ ದೇವರೆಂದೇ ನಂಬಿರುವ ಸಾರ್ವಜನಿಕರು ಇಂದು ಯಾವುದೇ ತಪ್ಪು ಮಾಡದೇ ಪುಂಡು ಪೋಕರಿಗಳು ನಡೆಸುವ ಬೈಕ್ ವೀಲಿಂಗ್‍ಗೆ ಜಿಲ್ಲಾದ್ಯಾಂತ ಅಮಾಯಕರ ಪ್ರಾಣಗಳು ಬಲಿಯಾಗುತ್ತಿವೆ. ಸುಮಾರು ಒಂದು ವರ್ಷದ ಹಿಂದೆ ಕೋಲಾರ ನಗರದಲ್ಲಿ ಗೋಪಾಲರೆಡ್ಡಿ ಎಂಬ ಹಿರಿಯರಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವೀಲಿಂಗ್ ನಡೆಸುತ್ತಿದ್ದ ಬೈಕ್ ಸವಾರ ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡರೆ ಅದೇ ರೀತಿ 1 ವಾರದಿಂದೆ ಬಂಗಾರಪೇಟೆ ರಸ್ತೆಯಲ್ಲಿ ವೀಲಿಂಗ್‍ಗೆ ಇಬ್ಬರು ಬಲಿಯಾಗಿದ್ದಾರೆ. ಅದರ ಜೊತೆಗೆ ವೀಲಿಂಗ್ ನಡೆಸುವ ಹುಡುಗರು ಸಹ ಆಯಾ ತಪ್ಪಿ ಪ್ರಾಣ ಕಳೆದುಕೊಂಡು ಕುಟುಂಬದ ಸದಸ್ಯರಿಗೆ ನುಂಗಲಾರದ ನೋವಾಗಿದೆ.

ಮತ್ತೊಂದೆಡೆ ಎಷ್ಟೇ ಕಾನೂನು ಬಿಗಿಗೊಳಿಸಿದರೂ ವೀಲಿಂಗ್‍ಗೆ ಕಡಿವಾಣ ಹಾಕಲು ಪೋಲಿಸರು ಹರಸಾಹಸ ಪಡಬೇಕಾಗಿದೆ. ಮತ್ತೊಂದೆಡೆ ಪ್ರತಿ ಶನಿವಾರ ಮತ್ತು ಭಾನುವಾರ ಬೆಂಗಳೂರು ಕಡೆಯಿಂದ ನೂರಾರು ಬೈಕ್‍ಗಳು ಇತಿಮಿತಿಯಿಲ್ಲದ ವೇಗದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೈಕ್ ವೀಲಿಂಗ್ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರು ರಸ್ತೆಗಳಲ್ಲಿ ಒಡಾಡಲು ಭಯಭೀತರಾಗಿದ್ದು, ಪೋಲಿಸ್ ಇಲಾಖೆ ಡಿ.ಎಲ್ ಹಾಗೂ ಗಾಡಿ ಪರವಾನಗಿಯನ್ನು ಪರಿಶೀಲನೆ ಮಾಡುವುದರಲ್ಲಿ ತಲ್ಲೀನರಾಗಿ ಸಾರ್ವಜನಿಕರಿಗೆ ತಲೆನೋವಾಗಿರುವ ವೀಲಿಂಗ್ ದಂದೆಗೆ ಕಡಿವಾಣ ಹಾಕುವಲ್ಲಿ ವಿಪಲರಾಗಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಬೈಕ್ ವೀಲಿಂಗ್ ನಡೆಸುವವರ ಹಾಗೂ ಅವರ ಕುಟುಂಬದ ವಿರುದ್ದವೂ ಸಹ ಯಾವುದೇ ಒತ್ತಡಕ್ಕೆ ಮಣಿಯದೇ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸುವ ಜೊತೆಗೆ ಗಡಿಪಾರು ಮಾಡಬೇಕೆಂದು ಅಗ್ರಹಿಸಿದರು.

ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಒಂದು ಕಡೆ ಬೈಕ್ ವೀಲಿಂಗ್ ಮತ್ತೊಂದು ಕಡೆ ಬಡವರ ರಕ್ತ ಹೀರುವ ಹಾಗೂ ಯುವ ಪೀಳಿಗೆಯನ್ನು ಸಾವಿನ ದವಡೆಗೆ ನೂಕುವ ಮಟ್ಕಾ ಹಾಗೂ ಬೆಟ್ಟಿಂಗ್ ದಂದೆಯ ಜೊತೆಗೆ ಮಾದಕ ವಸ್ತುಗಳಾದ ಗಾಂಜಾ, ಅಪೀಮು ದಂದೆ ಹೆಚ್ಚಾಗಿದೆ. ಈ ದಂದೆಗಳು ಹೆಚ್ಚಾಗಿ ಟವರ್, ಅರಹಳ್ಳಿ ಗೇಟ್ ಮತ್ತಿತರ ಪ್ರತಿಷ್ಠಿತ ಬಾರ್‍ಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲಿರುವ ಹೋಟೆಲ್‍ಗಳಲ್ಲಿ ರಾಜರೋಷವಾಗಿ ಕಾನೂನಿನ ಭಯವಿಲ್ಲದೆ ನಡೆಯುತ್ತಿದ್ದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪೋಲಿಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ ಸಾಹೇಬರು ವೀಲಿಂಗ್ ನಡೆಸುವ ನನ್ನ ಗಮನಕ್ಕೂ ಬಂದಿದೆ. ಅದನ್ನು ತಡೆಗಟ್ಟಲು ಕಿರಿಯ ಅಧಿಕಾರಿಗಳಿಗೆ ಯಾವುದೇ ಮುಲಾಜಿಲ್ಲದೆ, ಕೇಸು ದಾಖಲಿಸಲು ಅಧೇಶ ನೀಡಲಾಗಿದೆ. ಅದರ ಜೊತೆಗೆ ಮಟ್ಕಾ ಗಾಂಜಾ, ಬೆಟ್ಟಿಂಗ್ ದಂದೆಕೋರರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸುವ ಭರವಸೆಯನ್ನು ನೀಡಿದರು.

ಮನವಿ ನೀಡುವಾಗ ಜಿಲ್ಲಾ ಸಂಚಾಲಕ ಕೆ,ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಹಸಿರು ಸೇನೆ ಜಿಲ್ಲಾದ್ಯಕ್ಷ ಹುಲ್ಕೂರ್ ಹರಿಕುಮಾರ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಉದಯ್‍ಕುಮಾರ್, ಈಕಂಬಳ್ಳಿ ಮಂಜುನಾಥ್, ಚಂದ್ರಪ್ಪ, ಸುಪ್ರೀಂಚಲ, ರಾಮಕೃಷ್ಣಪ್ಪ, ಮುಂತಾದವರಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter