Published On: Wed, Aug 14th, 2019

ಕೃಷ್ಣರಾಜಪೇಟೆ ಅನರ್ಹ ಶಾಸಕ ಡಾ| ನಾರಾಯಣ ಆರ್.ಗೌಡ ನೇತೃತ್ವದಲ್ಲಿ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಪಾದಯಾತ್ರೆ-ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಸಂಗ್ರಹ

ಮುಂಬಯಿ: ತೆಂಡೇಕೆರೆಯ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರಶಿವಾಚಾರ್ಯ ಶ್ರೀಗಳು ಮತ್ತು ಸಾಂಸ್ಕøತಿಕ ರಾಯಭಾರಿಗಳಾದ ಶ್ರೀ ಗೋಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಅನರ್ಹ ಶಾಸಕ ಡಾ| ನಾರಾಯಣ ಆರ್.ಗೌಡ ಚಾಲನೆ ನೀಡಿ ವೈಯಕ್ತಿಕವಾಗಿ ತಮ್ಮ ತಂದೆತಾಯಿಗಳ ಹೆಸರಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5ಲಕ್ಷ ರೂಪಾಯಿ ಹಾಗೂ ನೆರೆ ಪೀಡಿತ ಸಂತ್ರಸ್ತ ಮಹಿಳೆಯರಿಗೆ 10ಸಾವಿರ ಮೌಲ್ಯದ ಸೀರೆಗಳನ್ನು ಕೊಡಿಸಿದರು.14-KRPETE-.1

ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭವಾದ ನೆರೆ ಸಂತ್ರಸ್ತರ ನಿಧಿ ಸಂಗ್ರಹ ಪಾದಯಾತ್ರೆಗೆ ಮೊದಲಿಗೆ ಆಸರೆ ಸಮಾಜಸೇವಾ ಟ್ರಸ್ಟಿನ ಅಧ್ಯಕ್ಷ ಹೆಚ್.ಬಿ.ಮಂಜುನಾಥ್ ಅವರ ಪುತ್ರಿ ಪುಟ್ಟ ಬಾಲಕಿ ಬೆಳ್ಳಿ ತಾನು ಗೋಲಕದಲ್ಲಿ ಸಂಗ್ರಹಿಸಿ ಇಟ್ಟಿದ್ದ ನಾಣ್ಯದ ಗೋಲಕವನ್ನು ಶಾಸಕ ನಾರಾಯಣಗೌಡರಿಗೆ ಹಸ್ತಾಂತರಿಸುವ ಮೂಲಕ ಮಾನವತೆಯ ಔದಾರ್ಯತೆಯನ್ನು ಮೆರೆದಳು. ನಂತರ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತ, ಎಪಿಎಂಸಿ ಮಾರುಕಟ್ಟೆ, ಎಳನೀರು ಮಾರುಕಟ್ಟೆ, ಬುಧವಾರದ ಸಂತೆ, ಮುಖ್ಯರಸ್ತೆ, ನಾಗಮಂಗಲ ರಸ್ತೆ, ಹಳೇ ಕಿಕ್ಕೇರಿ ರಸ್ತೆ, ಕೆ.ಆರ್.ಪೇಟೆ ಪಟ್ಟಣ ಪುರಸಭೆಯ ಪಕ್ಕದ ರಸ್ತೆಯಲ್ಲಿ ಪೂಜ್ಯಶ್ರೀಗಳು, ಅನರ್ಹ ಶಾಸಕರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಕಾಲೇಜು ವಿದ್ಯಾರ್ಥಿಗಳು ಫುಟ್‍ಪಾತ್ ವ್ಯಾಪಾರಿಗಳು, ವಿವಿಧ ಅಂಗಡಿಗಳ ವರ್ತಕರುಗಳ ಬಳಿ ತೆರಳಿ ಹಣ ಮತ್ತು ದಿನಬಳಕೆಯ ಅಗತ್ಯ ವಸ್ತುಗಳನ್ನು ಪಡೆದುಕೊಂಡರು. ಪಾದಯಾತ್ರೆಯಲ್ಲಿ ಸಂಗ್ರಹವಾದ 75ಸಾವಿರ ರೂಪಾಯಿ ಹಣ, 40ಚೀಲ ಅಕ್ಕಿ, ಬಟ್ಟೆ ಬರೆಗಳು, ಸೀರೆಗಳು, ಬಿಸ್ಕೆಟ್ ಬಾಕ್ಸ್‍ಗಳು, ಟಾರ್‍ಪಾಲ್‍ಗಳು, ಔಷಧಿ ವಸ್ತುಗಳು, ದೀರ್ಘಕಾಲ ಬಾಳಿಕೆ ಬರುವ ಹಾಲಿನ ಪ್ಯಾಕೇಟ್‍ಗಳನ್ನು ಸಂಗ್ರಹಿಸಿ ತಾಲೂಕಿನ ನೋಡೆಲ್ ಅಧಿಕಾರಿ ಚಂದ್ರಮೌಳಿ ಅವರಿಗೆ ಹಸ್ತಾಂತರಿಸಲಾಯಿತು.14-KRPETE-..1

ಪಟ್ಟಣದ ಹೊಸ ಕಿಕ್ಕೇರಿ ರಸ್ತೆಯ ಕೆಬಿಸಿ ಕಾಂಪ್ಲೆಕ್ಸ್‍ನಲ್ಲಿರುವ ಶ್ರೀರಂಗನಾಥ ಪ್ಲೈವುಡ್ ಅಂಗಡಿಯ ಮಾಲೀಕ ಬಿಲ್ಲೇನಹಳ್ಳಿ ಶೇಖರ್ 10ಸಾವಿರ, ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಎನ್.ಸುಧಾಕರ್ 10ಸಾವಿರ, ಹಿತೇಷ್ ಎಲೆಕ್ಟ್ರಿಕಲ್ಸ್ ಮಾಲೀಕ ಹಿತೇಶ್ 5ಸಾವಿರ, ಲವೆನ್ ಸೂಪರ್ ಮಾರ್ಕೇಟ್ ಮಾಲೀಕ ವೆಂಕಟೇಶ್ 5ಚೀಲ ಅಕ್ಕಿ, ಕೆ.ಹೆಚ್ ರಾಮಯ್ಯ ಸನ್ಸ್ ಅಂಗಡಿಯ ಮಾಲೀಕ ಕೆ.ಆರ್ ಚಂದ್ರಶೇಖರ್ 5ಚೀಲ ಅಕ್ಕಿ, ಕೆ.ಹೆಚ್ ಶ್ರೀಕಂಠಯ್ಯ ಅವರು 5ಚೀಲ ಅಕ್ಕಿ, ಮೋಹನ್ ಭಂಡಾರ್ ಮಾಲೀಕ ಲಕ್ಷ್ಮಣ್ 5ಚೀಲ ಅಕ್ಕಿ, ಕೆ.ಖಾಸಿಂಖಾನ್ ಸನ್ಸ್ ಔಷಧ ಅಂಗಡಿಯ ಮಾಲೀಕರು ಅಗತ್ಯ ಔಷಧಿ ವಿತರಿಸಿದರೆ, ಹೂವು, ಹಣ್ಣುಗಳ ವ್ಯಾಪಾರಿಗಳು, ಎಳನೀರು ವ್ಯಾಪಾರಿಗಳು ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ನೆರೆ ಸಂತ್ರಸ್ತರಿಗೆ ಮಾನವೀಯತೆ ಮೆರೆದರು.14-KRPETE-...1

ಪಾದಯಾತ್ರೆಯಲ್ಲಿ ಶಾಸಕ ನಾರಾಯಣಗೌಡ ಅಭಿಮಾನಿ ಬಳಗದ ಅಧ್ಯಕ್ಷ ಚಂದ್ರಮೋಹನ್, ಸಂಚಾಲಕ ಲಕ್ಷ್ಮೀಪುರ ಶಿವಸ್ವಾಮಿ, ಮಹಿಳಾ ಹೋರಾಟಗಾರ್ತಿ ಪ್ರಮೀಳ ವರದ ರಾಜೇಗೌಡ, ಪುರಸಭೆಯ ಸದಸ್ಯರಾದ ನಟರಾಜು, ಗಾಯಿತ್ರಮ್ಮ, ಇಂದ್ರಾಣಿ ವಿಶ್ವನಾಥ್, ಪದ್ಮಾರಾಜು, ಶೋಭಾ ದಿನೇಶ್, ಶುಭಾ ಗಿರೀಶ್, ಮಹದೇವಿನಂಜುಂಡ, ಅಶೋಕ್, ಶಾಮಿಯಾನತಿಮ್ಮೇಗೌಡ, ಲೋಕೇಶ್, ಪುರಸಭೆಯ ಮಾಜಿ ಸದಸ್ಯ ಕೆ.ವಿನೋದ್‍ಕುಮಾರ್, ಕೆ.ಆರ್.ನೀಲಕಂಠ, ಹನುಮಂತರಾಜ್, ದಯಾನಂದ, ಕೈಗೋನಹಳ್ಳಿ ಕುಮಾರ್, ಸಂತೇಬಾಚಹಳ್ಳಿ ಮರೀಗೌಡ, ಹೊಸಳ್ಳಿ ನಾಗೇಶ್, ಸೇರಿದಂತೆ ಭಜರಂಗದಳ, ಆರ್.ಎಸ್.ಎಸ್, ಬಿಜೆಪಿ ಕಾರ್ಯಕರ್ತರು, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಡಿಎಸ್‍ಎಸ್ ಮುಖಂಡರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ಸ್ವಯಂಸೇವಕರು ಪಾದಯಾತ್ರೆಯಲ್ಲಿ ಭಾಗವಹಿಸಿ ಮಾನವೀಯತೆಯನ್ನು ಮೆರೆದರು. ನೆರೆ ಸಂತ್ರಸ್ತರ ಪರವಾಗಿ ರಸ್ತೆಗಳ ಉದ್ದಕ್ಕೂ ಅನುಕಂಪದ ಹೊಳೆಯೇ ಹರಿಯಿತು. ಕೂಲಿ ಕಾರ್ಮಿಕರು, ಗ್ರಾಮೀಣ ಜನರು ತಮ್ಮ ಶಕ್ತಾನುಸಾರ ಸಹಾಯ ಹಸ್ತವನ್ನು ಚಾಚಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter