Published On: Wed, Aug 14th, 2019

ಎಸ್ಸಿ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆ ಸದಸ್ಯತಾ ಅಭಿಯಾನದ ಸಭೆ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಎಸ್ಸಿ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆಯು ಹಾಗೂ ಸದಸ್ಯತಾ ಅಭಿಯಾನದ ಸಭೆಯನ್ನು ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ದಿನೇಶ್ ಅಮ್ಟೂರು ಅವರ ಅಧ್ಯಕ್ಷತೆಯಲ್ಲಿ ಜರಗಿತು.WhatsApp Image 2019-08-13 at 12.17.43 AM

ಮಂಗಳೂರಿನ ರಾಜಪ್ಪ ಕಾರ್ಯಾಲಯದಲ್ಲಿ ಭಾಜಪ ಕಾರ್ಯಾಲಯದಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಅಮ್ಟೂರು ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ರಾಜ್ಯಾಧ್ಯಕ್ಷರ ಮಾರ್ಗದರ್ಶನದಂತೆ ಪ್ರತಿಯೊಂದು ಎಸ್ಸಿ ಮೋರ್ಚಾದ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಹಾಗೂ ಪಕ್ಷದ ಜವಾಬ್ದಾರಿಯುತ ಪದಾಧಿಕಾರಿಗಳು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಂದು ಪರಿಶಿಷ್ಟ ಜಾತಿಯ ಕಾಲೊನಿಗಳನ್ನು ಭೇಟಿ ಮಾಡಿ ಅವರನ್ನು ಅವರಿಗೆ ಕೇಂದ್ರ ಸರಕಾರದ ಸಾಧನೆಯನ್ನು ತಿಳಿಸುವ ಮೂಲಕ ಪ್ರತಿ ಮನೆಗೆ ಮನೆ ಮನೆಗೆ ಭೇಟಿ ಕೊಟ್ಟು ಅವರನ್ನು ಜಾಗೃತಿ ಮೂಡಿಸುವ ಕೆಲಸ ಾಗಬೇಕು ಎಂದರು.WhatsApp Image 2019-08-13 at 12.17.44 AM

ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಪರಿಶಿಷ್ಟ ಜಾತಿಯ ಬಂಧುಗಳು ಭಾರತೀಯ ಜನತಾ ಪಾರ್ಟಿಯ ಜನತಾ ಪಾರ್ಟಿಯ ಪರಿಶಿಷ್ಟ ಜಾತಿಯ ಬಂಧುಗಳು ಸದಸ್ಯರಾಗಲಿ ಭಾರತೀಯ ಜನತಾ ಪಾರ್ಟಿಯ ಎಸ್ಸಿ ಮೋರ್ಚಾದ ಪದಾಧಿಕಾರಿಗಳು ಶ್ರಮವಹಿಸಬೇಕು ಅದಲ್ಲದೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಸೆಯನ್ನು ಕಳೆದ ಅರುವತ್ತು ಏಳು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಯುಪಿಎ ಸರಕಾರ ಮಾಡದ ಕೆಲಸವನ್ನು ಕಳೆದ ಆರು ವರ್ಷಗಳಿಂದ ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಹಾಗೂ ನರೇಂದ್ರ ಮೋದಿ ಅವರ ಕ್ಯಾಬಿನೆಟ್ ಮಂತ್ರಿಗಳು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.WhatsApp Image 2019-08-13 at 12.17.43 AM (1)

ವಿಶ್ವ ಮಟ್ಟದ ನಾಯಕರಾದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂಥ ಕೆಲಸ ಕಾರ್ಯಗಳು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಮಾಡಿದ್ದಾರೆ ಅದಲ್ಲದೇ ಅಂಬೇಡ್ಕರ್ ಅವರ ಐದು ಪುಣ್ಯಕ್ಷೇತ್ರಗಳನ್ನು ಪಂಚತೀರ್ಥ ಪುಣ್ಯಕ್ಷೇತ್ರ ಮಾಡುವ ಮೂಲಕ ಅದಲ್ಲದೆ ಜೈ ಭೀಮ್ ಆ್ಯಪ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಕೆಲಸ ಕಾರ್ಯಗಳು ತರಬೇತಿಗಳ ಮೂಲಕ ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟಿದ್ದಾರೆ.

ಅದಲ್ಲದೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಅನ್ವಯ ಆಗುವಂತೆ ಮಾಡಿದ ಗೌರವಾನ್ವಿತ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ನರೇಂದ್ರ ಮೋದಿ ಸರಕಾರಕ್ಕೆ ಅಭಿನಂದನೆಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ವಿನಯ ನೇತ್ರ ಹಾಗೂ ಶೀನಾ ಮಾಸ್ತಿಕಟ್ಟೆ ಕೋಶಾಧಿಕಾರಿ ಡಿಎಸ್ ಪ್ರಸನ್ನ ರಾಜ್ಯ ಕಾರ್ಯದರ್ಶಿ ಬಿಎಸ್ ವಸಂತ್ ಕುಮಾರ್ ಹಾಗೂ ಜಿಲ್ಲೆಯ ಮಂಡಲಗಳ ಅಧ್ಯಕ್ಷರುಗಳಾದ ಉಮಾನಾಥ ಅಮೀನ್ ಉಮೇಶ್ ಕೋಟ್ಯಾನ್ ವಿಠಲ ಮೂಡುಬಿದಿರೆ ಬಾಲಪ್ಪ ಸುಳ್ಯ ಗಂಗಾಧರ್ ಕೋಟ್ಯಾನ್ ಬಂಟ್ವಾಳ ಮಂಡಲಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಹಿಳಾ ಕಾರ್ಯದರ್ಶಿಯಾದ ವನಿತಾ ಸೋಮನಾಥ್ ಅವರು ಹಾಗೂ ಜಿಲ್ಲೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter