Published On: Tue, Aug 13th, 2019

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ-ದ.ಕ ಜಿಲ್ಲಾ ಪತ್ರಕರ್ತರ ಸಂಘಗಳ ವತಿಯಿಂದ ನೆರೆಪೀಡಿತ ಪ್ರದೇಶಗಳ ತೀರ  ಬಡಜನರಿಗೆ ದೈನಂದಿನ ವಸ್ತುಗಳ ವಿತರಣೆ

ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಮತ್ತು ದ.ಕ ಜಿಲ್ಲಾ ಪತ್ರಕರ್ತರ ಸಂಘಗಳುಜಂಟಿಯಾಗಿ ಇಂದಿಲ್ಲಿ ಮಂಗಳವಾರ ಪ್ರವಾಹದಿಂದ ತೊಂದರೆಗೊಳಗಾದ ತೀರ ಬಡಜನರಿಗೆ ದೈನಂದಿನವಸ್ತುಗಳ ವಿತರಿಸಿ ಮಾನವೀಯತೆ ಮೆರೆಯಿತು.ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸಾರಥ್ಯದಲ್ಲಿಮುಂಬಯಿನಲ್ಲಿ ಸಂಗ್ರಹಿತ ಒಂದುಲೋಡ್‍ನಷ್ಟು ದೈನಂದಿನ ವಸ್ತುಗಳು ಇಂದಿಲ್ಲಿ ಮಂಗಳವಾರ ಮಂಗಳೂರು ತಲುಪಿದ್ದು ಕಪಸಮ ಸಕ್ರೀಯ ಸದಸ್ಯ ಆರೀಫ್ ಕಲ್ಕಟ್ಟಾ ಮಂಗಳೂರುನಲ್ಲಿ ಸ್ವೀಕರಿಸಿ ಬೆಳ್ತಂಗಡಿ, ಚಾರ್ಮಾಡಿ ಇನ್ನಿತರ ಪ್ರವಾಹ ಪೀಡಿತ ಗ್ರಾಮಗಳಿಗೆ ಸಾಗಿಸಿ ಗ್ರಾಮಸ್ಥರಿಗೆ ಖುದ್ಧಾಗಿ ವಿತರಿಸಿದರು. ಆಲ್ ಇಂಡಿಯಾ ಟ್ರಾನ್ಸ್‍ ಪೋರ್ಟ್ ಕಾಂಗ್ರೇಸ್ ಕರ್ನಾಟಕ ರಾಜ್ಯಧ್ಯಕ್ಷ, ಕೆನರಾ ಪಿಂಟೋ ಟ್ರಾವೆಲ್ಸ್ ಮಾಲೀಕ ಸುನೀಲ್ ಪಾಯ್ಸ್ ಅವರು ಮಂಗಳೂರುನ ಸ್ಟೇಟ್‍ಬ್ಯಾಂಕ್‍ನಲ್ಲಿವಸ್ತುಗಳ ವಿತರಣಾ ಸೇವೆಗೆ ಚಾಲನೆಯನ್ನಿತ್ತು ಶುಭಕೋರಿದರು.

KPSM Flood Releif Things Distrubution C2

KPSM Flood Releif Things Distrubution 1ಈ ಸಂದರ್ಭ ದ.ಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಮಾತನಾಡಿ, ಸಂತ್ರಸ್ತರಿಗೆಸಹಕರಿಸುವ ಮೂಲಕ ನೊಂದವರ ಬಾಳಿಗೆ ಸ್ಫೂರ್ತಿ ತುಂಬುವ ಕಾರ್ಯ ಇದಾಗಿದೆ. ದಾನಿಗಳಔದಾರ್ಯದಿಂದ ಸಂತ್ರಸ್ತರ ದಿನಬಳಕೆ ವಸ್ತುಗಳನ್ನು ಪೂರೈಸಲು ರೋನ್ಸ್ ಬಂಟ್ವಾಳ್‍ಗೆ ಸಾಧ್ಯವಾಗಿದೆ. ಇಂದುಸುಮಾರು ಮೂರುವರೆ ಲಕ್ಷ ಬೆಳೆಬಾಳುವ ದೈನಂದಿನವಾಗಿ ಬೇಕಾಗುವಆಹಾರವಸ್ತುಗಳು, ಬಿಸ್ಕೇಟು, ಟೋಸ್ಟ್,ರಸ್ಕ್, ಸಾಬೂನು, ಪೇಸ್ಟ್, ಟೂತ್‍ಬ್ರೆಶ್, ಶೂ-ಚಪ್ಪಲ್, ಬಟ್ಟೆಬರೆ ಸಂಗ್ರಹಿಸಿ ಕರ್ನಾಟಕ ರಾಜ್ಯದ ಜನತೆಗೆತಲುಪಿಸಿದೆ. ಇದು ಎರಡನೇ ಹಂತವಾಗಿ ಸಂತ್ರಸ್ತರಿಗೆ ನೆರವು ನೀಡುವನಮ್ಮ ಕಾರ್ಯವಾಗಿದ್ದು, ಜಿಲ್ಲೆಯ ಜನರನೋವಿಗೆ ಸ್ಪಂಧಿಸಿದ ಸಂಘದ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು, ದಾನಿಗಳು ಮತ್ತು ಮಹಾರಾಷ್ಟ್ರದ
ಪ್ರತಿಯೊಬ್ಬರಿಗೂ ಚಿರಋಣಿ ಎಂದರು.KPSM Flood Releif Things Distrubution 6

ಇಂದು ಉದಯವಾಣಿಯ ವಸಂತ್.ಎನ್ ಕೊಣಾಜೆ, ವಿ4 ನ್ಯೂಸ್‍ನ ಆರೀಫ್ ಕಲ್ಕಟ್ಟ, ಪ್ರಜಾವಾಣಿಯ ಮೋಹನ್ ಕುತ್ತಾರ್, ಮುಕ್ತ ಸುದ್ದಿವಾಹಿನಿಯ ಅಶ್ವಿನ್ ಕುತ್ತಾರ್, ವಾಯ್ಸ್ ಆಫ್ ಕರಾವಳಿ.ಕಾಂ ನ ಕೀರ್ತನ್ ಮರೋಳಿ, ಅಬ್ಬಕ್ಕ ಚಾನೆಲ್ ನ ತೇಜೇಶ್ ಗಟ್ಟಿ, ಉಳ್ಳಾಲ್ ನ್ಯೂಸ್.ಕಾಂ ಇದರ ಚಿಂತನ್ ಕುಮಾರ್, ಉದ್ಯಮಿಗಳಾದ ಸಹಬಾಝ್ ಖಾದರ್, ಮುಜೀಬ್ ರೆಹ್ಮಾನ್ ವಿತರಣಾ ಸೇವೆಯಲ್ಲಿಸಹಕರಿಸಿದರು.

KPSM Flood Releif Things Distrubution 12 (1)
ಶಿವಾಸ್ ಹೇರ್ ಡಿಝೈನರ್ಸ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ್ ಕೆ.ಭಂಡಾರಿ ಮತ್ತುಗುಜರಾತ್ ಬಿಲ್ಲವ ಸಂಘ ಇದರ ವತಿಯಿಂದ ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಅಧ್ಯಕ್ಷ ಮನೋಜ್ ಸಿ.ಪೂಜಾರಿ ಸೂರತ್, ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ, ಪ್ರಧಾನ ಕೋಶಾಧಿಕಾರಿ ಜಿನರಾಜ್ ಪೂಜಾರಿ, ಸರಿತಾ ಸೋಮನಾಥ್ ಪೂಜಾರಿ ಮತ್ತು ಸಂಘದ ವಿವಿಧ ಶಾಖೆಗಳು ಮತ್ತು ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರ, ದಾನಿಗಳ ಸೇವಾರ್ಥವಾಗಿ ಬುಧವಾರ ಮೂರನೇ ಹಂತವಾಗಿ ಬಟ್ಟೆಬರೆ ಹಾಗೂದಿನಬಳಕೆ ವಸ್ತುಗಳನ್ನು ಪ್ರದಾನಿಸಲಾಗುವುದು ಎಂದು ಆರೀಫ್ ಕಲ್ಕಟ್ಟಾ ತಿಳಿಸಿದ್ದಾರೆ. ಕಪಸಮ ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಸಕ್ರೀಯ ಸದಸ್ಯೆ ತಾರಾ ಆರ್.ಬಂಟ್ವಾಳ್, ವಿಶೇಷ ಆಮಂತ್ರಿತ ಸದಸ್ಯ ಸಾ.ದಯಾ (ದಯಾನಂದ್ ಸಾಲ್ಯಾನ್), ದೇವರಾಜ್ ಪೂಜಾರಿ ಡೊಂಬಿವಿಲಿ, ಕೃಷ್ಣಬಂಗೇರಾಮತ್ತಿತರರು ಉಪಸ್ಥಿತರಿದ್ದು ಕಾರ್ಯನಿರ್ವಹಿಸಿ ಸಹಕರಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter