ಕಾಂತಾವರ : ಕಾಂತಾವರ ಕೆಪ್ಲಾಜೆ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಕಾಲಾವಧಿ ಆಟಿ ಮಾರಿಪೂಜೆಯು ನಡೆಯಿತು.ಶ್ರೀದೇವರ ಕಟ್ಟೆಯಲ್ಲಿ ಬಿಂಬಸಹಿತ ಕಲಶ ಪ್ರತಿಷ್ಠಾಪನೆ ಪೂಜೆಯು ಮಂಗಳವಾರ ಸಂಜೆ 7ರಿಂದ ಪ್ರಾರಂಭಗೊಂಡು, ಬುಧವಾರ ದೇವಿದರ್ಶನ, ದೇವರ ಬಿಂಬ ನಿರ್ಗಮನದೊಂದಿಗೆ ಉತ್ಸವವು ಸಂಪನ್ನಗೊಂಡಿತು.ಗ್ರಾಮಸ್ಥರು ಹಾಗೂ ಭಕ್ತಾಭಿಮಾನಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
