Published On: Wed, Jul 17th, 2019

ಕೆಸರುಮಯಗೊಂಡ ಅಖಿಲೇಶ್ವರ ರಸ್ತೆ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿಯಿಂದ ಶ್ರೀ ಅಖಿಲೇಶ್ವರ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆ ಕೆಸರುಮಯಗೊಂಡು ಗದ್ದೆಯಂತಾಗಿದೆ. ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ.ಈ ರಸ್ತೆಯನ್ನು ಪೊಳಲಿಯಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗತ್ತು ಆದರೆ ಇದೀಗ ಮಳೆ ಬಂದು ರಸ್ತೆಗೆ ಹಾಕಿದ್ದ ಮಣ್ಣು ಕೆಸರಾಗಿದ್ದು ಗದ್ದೆಯಂತಾಗಿದೆ.17vpakileswara raste

ಈ ರಸ್ತೆಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಮಳೆ ನೀರು ರಸ್ತೆಯಲ್ಲೆ ಹರಿದು ವಾಹನಗಳು ಮಾತ್ರ ಸಂಚರಿಸಲು ಸಾಧ್ಯವಾಗಿದೆ. ಜನಸಾಮನ್ಯರು ನಡೆದು ಕೊಂಡು ಹೋದರೆ ಸಂಪೂರ್ಣವಾಗಿ ಕೆಸರುಮಯವಾಗುವುದು ಖಂಡಿತ.ಶ್ರೀ ಅಖಿಲೇಶ್ವರ ದೇವಸ್ಥಾನಕ್ಕೆ ಹೋಗುವ ಈ ರಸ್ಥೆಯು ಕರಿಯಂಗಳ ,ಅಚಾರಿತೋಟ, ಮಳಲಿ ಮತ್ತು ನದಿ ದಾಟಿ ಪೊಳಲಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೂ ಬಹು ಉಪಯೋಗವಾಗುವ ರಸ್ತೆಯಾಗಿದೆ. ಅಚಾರಿತೋಟ, ಹಾಗೂ ಕರಿಯಂಗಳ ಕಡಪುಕರಿಯದ ಆಸುಪಾಸಿನವರಿಗೆ ಇದು ಪ್ರಮುಖ ರಸ್ತೆಯಾಗಿರುದರಿಂದಾಗಿ ಈ ಭಾಗದ ಗ್ರಾಮಸ್ತರು ಭಾರಿ ತೊಂದರೆಯನ್ನು ಎದುರಿಸುತ್ತಿದ್ದಾರೆ.

ಎಲ್ಲಾ ಕಡೆಗಳ ರಸ್ತೆಗಳು ಕಾಂಕ್ರೀಟಿಕರಣಗೊಳ್ಳುತ್ತಿದ್ದರು ಈ ರಸ್ತೆ ಮಾತ್ರ ಶಾಪಗ್ರಸ್ತವಾಗಿರುವ ಬಗ್ಗೆ ಜನರು ಆಕ್ರೋಶವ್ಯಕ್ತಪಡಿಸುತ್ತಾರೆ. ಕನಿಷ್ಠ ಪಕ್ಷ ನಡೆದಾಡಲು ಯೋಗ್ಯವಾಗುವಂತೆ ರಸ್ತೆಯನ್ನು ದುರಸ್ಥಿ ಮಾಡಿಕೊಡಿ ಎಂದು ನಾಗರಿಕರು ಗ್ರಾಮ ಪಂಚಾಯತ್‍ನ್ನು ಆಗ್ರಹಿಸಿದ್ದಾರೆ.

;;;;;;;;;;;;;;;
“ಬೇಸಿಗೆಯಲ್ಲಿ ರಸ್ತೆಗೆ ಮಣ್ಣು ಹಾಕಿದ್ದು ಮಳೆ ಬಂದಾಗ ಕೆಸರಾಗಿದೆ.ಮಳೆ ಕಡಿಮೆಯಾಗದೇ ಜಲ್ಲಿಹುಡಿ ಹಾಕಿದರು ಪ್ರಯೋಜನವಿಲ್ಲ ಮಳೆ ನಿಂತಕೂಡಲೇ ಜಲ್ಲಿ ಹುಡಿ ಹಾಕಿ ರಸ್ತೆಯನ್ನು ದುರಸ್ಥಿ ಮಾಡಲಾಗುವುದು. ಕರಿಯಂಗಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಾವತಿ”

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter