Published On: Thu, Jul 11th, 2019

ಜಿಲ್ಲಾಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ ಖಜಾಂಚಿಯಾಗಿ ವಿಜಯ್,ರಾಜ್ಯಪರಿಷತ್‍ಗೆ ಡಿ.ಸುರೇಶ್‍ಬಾಬು

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ ಹಾಗೂ ಖಜಾಂಚಿಯಾಗಿ ಕೆ.ವಿಜಯ್, ರಾಜ್ಯಪರಿಷತ್ ಸದಸ್ಯರಾಗಿ ಡಿ.ಸುರೇಶ್‍ಬಾಬು ಆಯ್ಕೆಯಾದರು.ತೀವ್ರ ಕುತೂಹಲ ಕೆರಳಿಸಿದ್ದ ನೌಕರರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ 34 ಮತಗಳನ್ನು ಪಡೆದು ಆಯ್ಕೆಯಾಗಿದ್ದು, ಅವರ ಪ್ರತಿಸ್ವರ್ಧಿ ಕೆ.ಎನ್.ಮಂಜುನಾಥ್ ಅವರಿಗೆ 30 ಮತಗಳು ಬಂದವು.ಉಳಿದಂತೆ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್ ಬಣದಿಂದ ಖಜಾಂಚಿಯಾಗಲು ಕಣಕ್ಕಿಳಿದಿದ್ದ ಕೆ.ವಿಜಯ್ ಮತ್ತು ರಾಜ್ಯಪರಿಷತ್ ಸದಸ್ಯರಾಗಲು ಕಣಕ್ಕಿಳಿದಿದ್ದ ಸರ್ವೇ ಇಲಾಖೆಯ ಡಿ.ಸುರೇಶ್‍ಬಾಬು ಆಯ್ಕೆಯಾಗಿದ್ದಾರೆ.12kolar5

ಖಜಾಂಚಿಯಾಗಿ ಗೆದ್ದಿರುವ ಕೆ.ವಿಜಯ್ ಅವರಿಗೆ 35 ಮತ, ಅವರ ಪ್ರತಿಸ್ವರ್ಧಿ ಮಂಜುನಾಥ್ ಅವರಿಗೆ 29 ಮತಗಳು ಲಭಿಸಿವೆ. ರಾಜ್ಯಪರಿಷತ್ ಸ್ಥಾನಕ್ಕೆ ಕಣಕ್ಕಿಳಿದು ಗೆಲುವು ಸಾಧಿಸಿರುವ ಡಿ.ಸುರೇಶ್‍ಬಾಬು ಅವರಿಗೆ 48 ಮತಗಳು ಹಾಗೂ ಅವರ ಪ್ರತಿಸ್ವರ್ಧಿ ಎಂ.ಸುರೇಶ್ ಬಾಬು ಅವರಿಗೆ 16 ಮತಗಳು ಬಂದಿವೆ. ಕೆ.ಬಿ.ಅಶೋಕ್ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಅವರ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ನಂತರ ನಚಿಕೇತನಿಲಯದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು.ಕೆ.ಬಿ.ಅಶೋಕ್ ಸ್ವಷ್ಟನೆ ಸರ್ಕಾರಿ ನೌಕರರ ಜಾತಿ ನನ್ನನ್ನು ಜಾತಿ ಆಧಾರದಲ್ಲಿ ಗುರುತಿಸುವ ಪ್ರಯತ್ನ ನಡೆಯಿತು ಆದರೆ ನನ್ನದು ಸರ್ಕಾರಿ ನೌಕರರ ಜಾತಿ, ಎಂದು ಸ್ವಷ್ಟನೆ ನೀಡಿ, ನಾನೆಂದು ನೌಕರರಲ್ಲಿ ಜಾತಿ ಪರಿಗಣನೆ ಮಾಡುವುದಿಲ್ಲ ಎಂದರು.
ಜಿಲ್ಲೆಯ ನೌಕರರು ನನ್ನನ್ನು ಆಯ್ಕೆ ಮಾಡಿದ್ದು, ಅವರ ನಂಬಿಕೆಗೆ ಎಂದೂ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ, ನೌಕರರ ಸಮಸ್ಯೆಗಳಿಗೆ ಬದ್ದತೆಯಿಂದ ದುಡಿಯುತ್ತೇನೆ ಎಂದು ಭರವಸೆ ನೀಡಿದರು.ವೇತನ ವಿಳಂಬ, ಬಡ್ತಿಯಲ್ಲಿ ವಿಳಂಬ,ವೇತನ ತಾರತಮ್ಯ ಹೀಗೆ ನೌಕರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪಕ್ಷಪಾತ ತೋರದೇ ನಾನು ಬದ್ದತೆಯಿಂದ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.ವಿಜಯೋತ್ಸವದಲ್ಲಿ ನೌಕರರ ಸಂಘದ ಮುಖಂಡರಾದ ಶಿಕ್ಷಣ ಇಲಾಖೆ ಅನಿಲ್ ಕುಮಾರ್, ಜಿ.ಶ್ರೀನಿವಾಸ್, ಆರ್.ಶ್ರೀನಿವಾಸನ್,ಮಾಗೇರಿ ಶ್ರೀನಿವಾಸ್,ಶ್ರೀರಾಮ್, ನ್ಯಾಯಾಂಗ ಇಲಾಖೆಯ ಮಂಜುನಾಥ್, ಬೈರೇಗೌಡ, ಆಂಜನೇಯಗೌಡ, ನಾರಾಯಣಸ್ವಾಮಿ, ಕೆ.ಟಿ.ನಾಗರಾಜ್, ಖಜಾನೆ ಶಂಕರ್,ರೆಡ್ಡಪ್ಪ,ಎಂ.ಸುರೇಶ್ ಬಾಬು,ಅನಿಲ್‍ಕುಮಾರ್,ಮೋಹನಾಚಾರಿ,ರವಣಪ್ಪ, ಮುರಳಿಮೋಹನ್, ಆನಂದ್,ಪರಮೇಶ್,ಸುದೀಪ್,ಸಿ.ನಾರಾಯಣಸ್ವಾಮಿ ಮತ್ತಿತರರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter