Published On: Thu, Jul 11th, 2019

ಶಾಲಾ ವಾಹನ ಚಾಲಕರ ಪ್ರತಿಭಟನೆ

ಬಂಟ್ವಾಳ: ಸು. ಕೋ. ಅದೇಶದ ನೆಪದಲ್ಲಿ ವಾಹನ ತಪಾಸಣೆ ಮಾಡಿ  ದಂಡ ವಿಧಿಸುವ ಮೂಲಕ ಸಮಸ್ಯೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ, ನಿಯಮಗಳನ್ನು ಸಡಿಲಿಗೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾವಾಹನ ಸಾಗಾಟ ಮಾಲೀಕ, ಚಾಲಕರ ಸಂಘ ಕರೆ ನೀಡಿರುವ ಪ್ರತಿಭಟನೆಯನ್ವಯ ಬಂಟ್ವಾಳ ತಾಲೂಕಿನಲ್ಲಿಯು ಮುಷ್ಕರ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಎಎಸ್ಪಿ ಸೈದುಲು ಅದಾವತ್ ಅವರನ್ನು ಗುರುವಾರ ಭೇಟಿ ಮಾಡಿದ ಸಂಘದ ಸದಸ್ಯರು, ಈ ಕುರಿತು ಮನವಿ ಮಾಡಿ ಆಡಳಿತದ ಗಮನ ಸೆಳೆದರು. ಶುಕ್ರವಾರವೂ ಶಾಲಾ ಮಕ್ಕಳ ವಾಹನಗಳ ಸಾಗಾಟ ಇರುವುದಿಲ್ಲ ಎಂದು ಸಂಘದ ತಾಲೂಕು ಅಧ್ಯಕ್ಷ ಸದಾನಂದ ನಾವೂರ ತಿಳಿಸಿದ್ದಾರೆ.

IMG_20190711_102336

ಬೆಳಗ್ಗೆ ಮಿನಿ ವಿಧಾನಸೌಧದ ಮುಂಭಾಗ ಸಭೆ ಸೇರಿದ ಚಾಲಕರು, ಬಳಿಕ ಅಲ್ಲಿಂದ ಎಎಸ್ಪಿ ಸೈದುಲು ಅದಾವತ್ ಅವರ ಕಚೇರಿಗೆ ತೆರಳಿದರು. ನಿಯಮಗಳನ್ನು ಸಡಿಲಿಸಿದರೆ ಬಡ ಚಾಲಕ ವರ್ಗಕ್ಕೆ ಬದುಕಲು ಸಹಾಯವಾಗುತ್ತದೆ. ಅಲ್ಲದೆ ಪೋಷಕ ವರ್ಗದ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ ಎಂದು ಈ ಸಂದರ್ಭ ಹೇಳಿದ ಸಂಘದ ಅಧ್ಯಕ್ಷ ಸದಾನಂದ ನಾವರ ಮತ್ತು ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕ- ಮಾಲಕರ ಸಂಘ ಬಂಟ್ವಾಳ ಅಧ್ಯಕ್ಷ ಬಿ.ಎಂ. ಪ್ರಭಾಕರ ದೈವಗುಡ್ಡೆ, ಬಸ್ ಗಳಲ್ಲಿ ಮಿತಿಮೀರಿ ಪ್ರಯಾಣಿಕರನ್ನು ಹೇರಿಕೊಂಡು ಸಂಚರಿಸುವುದನ್ನು ಗಮನಿಸದೆ ಕೇವಲ ಶಾಲಾ ವಾಹನಗಳನ್ನು ತಪಾಸಿಸಲಾಗುತ್ತದೆ. ಕೆಲವು ವಾಹನಗಳ ಮೇಲೆ ಎರಡೆರಡು ಬಾರಿ ದಂಡ ವಿಧಿಸಿ, ಚಾಲಕರ ಲೈಸನ್ಸ್ ಮುಟ್ಟುಗೋಲು ಹಾಕಿದ್ದುಂಟು, ಇಂಥ ಸನ್ನಿವೇಶದಲ್ಲಿ ನಾವು ಕೆಲಸ ಮಾಡಲು ಸಮಸ್ಯೆ ಉಂಟಾಗುತ್ತದೆ ಎಂದು ಎಎಸ್ಪಿ ಅವರಲ್ಲಿ ಮನವಿ ಮಾಡಿದರು. ಈ ಸಂದರ್ಭ ಉತ್ತರಿಸಿದ ಎಎಸ್ಪಿ ಸೈದುಲು ಅದಾವತ್, ನಾವು ಸರಕಾರದ ನಿಯಮಗಳನ್ನು ಪಾಲಿಸುತ್ತೇವೆ. ಶಾಲಾ ವಾಹನ ಸಾಗಾಟ ಚಾಲಕರಿಗೆ ತೊಂದರೆ ಮಾಡುವ ಇರಾದೆ ನಮಗಿಲ್ಲ. ನೀವು ಸಂಚಾರಿ ನಿಯಮಗಳನ್ನು ಪಾಲಿಸಿದರೆ ಯಾವುದೇ ಸಮಸ್ಯೆ ಇಲ್ಲ. ನಿಮ್ಮ ಧ್ವನಿಯನ್ನು ಮೇಲಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ದ.ಕ.ಜಿಲ್ಲಾ ಶಾಲಾ ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಜಯರಾಮ ಆಚಾರ್ಯ, ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಸಂತ ಚಂಡ್ತಿಮಾರ್, ಪ್ರಮುಖರಾದ ರಾಜಾ ಚಂಡ್ತಿಮಾರ್, ಇಕ್ಬಾಲ್, ಸೀತಾರಾಮ, ಕಿರಣ್ ಪಿಂಟೋ, ಮ್ಯಾಕ್ಸಿಂ ಸಹಿತ ಹಲವು ವಾಹನ ಚಾಲಕರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter