Published On: Thu, Jul 11th, 2019

ಅರ್ಕುಳ: ತುಪ್ಪೆಕಲ್ಲುವಿನಲ್ಲಿ ಕದಂಬ ಗಿಡ ನೆಟ್ಟ ಪ್ರಧಾನಿ ಸಹೋದರ

ಬಂಟ್ವಾಳ:ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ದೇಶಕ್ಕಾಗಿ ದುಡಿಯುತ್ತಿದ್ದು, ಇದೀಗ ಅವರು ದೇಶದ ಆಸ್ತಿಯಾಗಿದ್ದು, ನಾನು ಪ್ರಧಾನಿಯವರ ಸಹೋದರ ಅಲ್ಲ. ಕೇವಲ ನರೇಂದ್ರ ಮೋದಿ ಅವರ ಸಹೋದರ ಎಂದು ಗುಜರಾತಿನ ಸಾಮಾಜಿಕ ಕಾರ್ಯಕರ್ತ ಸೋಮಭಾಯ್ ಮೋದಿ ಹೇಳಿದ್ದಾರೆ .ಅರ್ಕುಳ ಗ್ರಾಮದ ತುಪ್ಪೆಕಲ್ಲು ಎಂಬಲ್ಲಿ ಅಖಿಲ ಕರ್ನಾಟಕ ಗಾಣಿಗ ಸಂಘದ ಕಾರ್ಯದರ್ಶಿ  ಮಹೇಶ ತುಪ್ಪೆಕಲ್ಲು ಮನೆಗೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದ ವೇಳೆ ಅಲ್ಲಿ  ಕದಂಬ ಹಣ್ಣಿನ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿ ಮಳೆ-ಬೆಳೆ ಜೊತೆಗೆ ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರು ಕೂಡಾ ಅರಿತುಕೊಂಡು ಮರ ಗಿಡಗಳನ್ನು ನೆಡುವುದಕ್ಕಾಗಿ ಆಂದೋಲನ ನಡೆಸಬೇಕು ಎಂದರು.10btl-Arkula

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ನೀಡಿ ಸೋಮಭಾಯ್ ಮೋದಿ ಅವರನ್ನು ಸನ್ಮಾನಿಸಲಾಯಿತು. ಅರ್ಕುಳಬೀಡು ಕ್ಷೇತ್ರದ ಧರ್ಮದರ್ಶಿ ವಜ್ರನಾಭ ಶೆಟ್ಟಿ, ಸದಾನಂದ ಆಳ್ವ ಕಂಪ ಮತ್ತಿತರರು ಅಭಿನಂದಿಸಿದರು. ಗುಜರಾತ್ ಬಿಜೆಪಿ ಘಟಕ ಅಧ್ಯಕ್ಷ ಲಲಿತ್ ಶಾ, ಅಖಿಲ ಕರ್ನಾಟಕ ಗಾಣಿಗ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಗಾಣಿಗ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಗೀತಾಂಜಲಿ ಸುವರ್ಣ ಕಾಪು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಮಾಜಿ ಅಧ್ಯಕ್ಷ ರಮೇಶ ಎಸ್., ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ  ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್, ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ತಾರನಾಥ, ಉಪಾಧ್ಯಕ್ಷ ಸಂಜೀವ ಅಡ್ಯಾರು, ಕರಾವಳಿ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ವೆಂಕಟೇಶ್, ಮಂಗಳೂರು ಗಾಣಿಗ ಸಂಘದ ಅಧ್ಯಕ್ಷ ನಾರಾಯಣ ಸಪಲ್ಯ ಕಣ್ಣೂರು, ಬಂಟ್ವಾಳ ಗಾಣಿಗ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಮಾಜಿ ನಿರ್ಧೇಶಕ ಮೋಹನ್ ಕೆ.ಶ್ರೀಯಾನ್ ರಾಯಿ, ಎಡಪದವು ಗಾಣಿಗ ಸಂಘದ ಅಧ್ಯಕ್ಷ ಭಾಸ್ಕರ ಎಸ್.ಎಡಪದವು, ಮೂಡುಬಿದ್ರೆ ಗಾಣಿಗ ಸಂಘದ ಅಧ್ಯಕ್ಷ ಪ್ರತಾಪ್ ಬೆಡ್ಕೇರಿ, ಕಾರ್ಯದರ್ಶಿ ರಾಜೇಶ ಬಂಗೇರ ಮೂಡುಬಿದ್ರೆ, ಮಂಜೇಶ್ವರ ಗಾಣಿಗ ಸಂಘದ ಮಾಜಿ ಅಧ್ಯಕ್ಷ ಬಿ.ಎಂ.ಕಮಲಾಕ್ಷ, ಪ್ರಮುಖರಾದ ಹರೀಶ ಕುತ್ತಾರು, ವೆಂಕಟೇಶ್ ಕದ್ರಿ, ರವಿ ಒಡಿಯೂರು, ತಿರುಲೇಶ್ ಬೆಳ್ಳೂರು ಮತ್ತಿತರರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter