Published On: Mon, Jul 8th, 2019

ರೈತ ಸಂಘದಿಂದ ಕೋಲಾರ ಮಾಲೂರು ರಸ್ತೆಗೆ ಜಾನುವಾರುಗಳ ಮತ್ತು ಟೋಮೋಟೋ ಸುರಿದು ಪ್ರತಿಭಟನೆ

ಕೋಲಾರ: ಟೊಮೋಟೋ ಮಾರುಕಟ್ಟೆಗೆ ಜಾಗದ ಕೊರತೆಯಿರುವುದರಿಂದ 50 ಎಕರೆ ಜಮೀನನ್ನು ಮಂಜೂರು ಮಾಡಿ ಮಾರುಕಟ್ಟೆಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಮಾರುಕಟ್ಟೆಯಲ್ಲಿ ಆಗುತ್ತಿರುವ ಅವ್ಯವಸ್ಥೆಯನ್ನು ತಪ್ಪಿಸಿ, ರೈತರಿಗೆ ಅನುಕೂಲ ಮಾಡಿ ಮಾರುಕಟ್ಟೆಯನ್ನು ಅಭಿವೃದ್ದಿ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಕೋಲಾರ ಮಾಲೂರು ರಸ್ತೆಗೆ ಜಾನುವಾರುಗಳ ಮತ್ತು ಟೋಮೋಟೋ ಸುರಿದು ಪ್ರತಿಭಟನೆ ಮಾಡಲಾಯಿತು.Raitha sangha malur -kolar road band a.p.m.c horata news - 08-07-2019 (9)

ಹೋರಾಟದ ನೇತೃತ್ವವಹಿಸಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಮಾರುಕಟ್ಟೆ ಎಂಬ ಹೇಸರಾಗಿರುವ ಕೋಲಾರ ಜಿಲ್ಲೆಯ ಮಾರುಕಟ್ಟೆಯಲ್ಲಿ ಅತ್ಯಾಧಿಕವಾಗಿ ತರಕಾರಿಗಳು ಬರುವುದರಿಂದ ಜಾಗದ ಕೊರತೆಯಿಂದ ಟೊಮೋಟೋ ಬೆಳೆಗಾರರಿಗೆ ಹಾಗೂ ಖರೀದಿದಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಅತಿ ಹೆಚ್ಚು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಕೋಲಾರ ಮತ್ತು ಪಕ್ಕದ ಜಿಲ್ಲೆಯಲ್ಲಿ ಟೊಮೋಟೋ ಪ್ರಮುಖ ಬೆಳೆಯಾಗಿರುವುದರಿಂದ ಅತಿ ಹೆಚ್ಚಾಗಿ ಅಂದರೆ ಶೇ,95ರಷ್ಟು ಟೊಮೋಟೋ ಬೆಳೆ ಬೆಳೆದು ದೇಶ ಮತ್ತು ಹೊರದೇಶಕ್ಕೆ ರಪ್ತು ಮಾಡುವ ಮಾರುಕಟ್ಟೆಯಾಗಿದೆ. ಮಾರ್ಚ್‍ಯಿಂದ ಸಪ್ಟೆಂಬರ್‍ವರೆಗೂ ಪರ್ತಿನಿತ್ಯ ನೂರಾರು ವಾಹನಗಳ ಸಂಚಾರ ದಟ್ಟವಾಗಿರುತ್ತದೆ.Raitha sangha malur -kolar road band a.p.m.c horata news - 08-07-2019 (4)

ಅದರ ಜೊತೆಗೆ ಇನ್ನಿತರ ಹತ್ತಾರು ತರಕಾರಿಗಳೂ ಪ್ರತಿ ನಿತ್ಯ ಲೋಡ್‍ಗಟ್ಟಲೇ ಮಾರುಕಟ್ಟೆಗ ಬರುವುದರಿಂಧ ಜಾಗದ ಸಮಸ್ಯೆಯಿಂದ ತರಕಾರಿ ಮತ್ತು ಟೊಮೋಟೋ ಮಂಡಿ ಮಾಲೀಕರಿಗೆ ಹಾಗೂ ರೈತರಿಗೆ ವ್ಯಾಪರಸ್ಥರಿಗೆ ಪ್ರತಿನಿತ್ಯ ಜಗ¼ವಾಡುವಂತಾಗಿ ರಾಷ್ಟ್ರೀಯ ಹೆದ್ದಾರಿಯೂ 3-4 ಬಾರಿ ಬಂದ್ ಸಹ ನಡೆದಿದೆ. ಕಳೆದ ವರ್ಷ ಅವಕ ಹೆಚ್ಚಾಗಿದ್ದರಿಂದ ಸ್ಥಳದ ಸಮಸ್ಯೆ ಮತ್ತು ವಾಹ£ಗಳಿಗೆ ರಸ್ತೆಯಲ್ಲೇ ನಿಲ್ಲಿಸಿ ಲೋಡ್ ಮಾಡುವುದರಿಂದ ಮದ್ಯಾನ ಮಾರುಕಟ್ಟೆಗೆ ಬರುವ ತರಕಾರಿ ಜಾಗದ ಸಮಸ್ಯೆಯಿಂದ ಸರಿಯಾದ ಬೆಲೆ ಸಿಗದೆ ರೈತರು ತಮ್ಮ ತರಕಾರಿಯನ್ನು ರಾಷ್ಟ್ರೀಯ ಹೆದ್ದಾರಿಗೆ ಸುರಿದು ಪ್ರತಿಭಟನೆ ಮಾಡಿ ಲಾಟಿ ಚಾರ್ಜ ಸಹ ನಡೆದಿರುತ್ತದೆ. ಆಗ ಅಂದಿನ ಜಿಲ್ಲಾಧಿಕಾರಿಯಾದ ತ್ರೀಲೋಕ್‍ಚಂದ್ರರವರು ಮಾರುಕಟ್ಟೆಗೆ ಬೇಟಿ ನೀಡಿ 6 ತಿಂಗಳಲ್ಲಿ ಟೊಮೋಟೋ ಮಾರುಕಟ್ಟೆಗೆ ಪರ್ಯಾಯ ಜಾಗ ಮಾಡುತ್ತೇವೆಂದು ಆ ಜವಬ್ದಾರಿಯನ್ನು ತಹಶೀಲ್ದಾರ್ ವಿಜಿಯಣ್ಣನವರಿಗೆ ವಹಿಸಿ ವರ್ಷ ಕಳೆದರು ಜಾಗವೂ ಇಲ್ಲ ಅದರ ಬಗ್ಗೆ ಪ್ರಸ್ತಾವನೆಯೂ ಇಲ್ಲದಾಗಿದೆ, ನೆಪಮಾತ್ರಕ್ಕೆ ವಕ್ಕಲೇರಿ ಬಳಿ 40 ಎಕರೆ ಜಮೀನನ್ನು ಗುರುತಿಸಿದ್ದೇವೆಂದು ಹೇಳಿದ ಮಾತೇ ಹೊರತು ಇದುವರೆಗೂ ಮಾರುಕಟ್ಟೆಯ ಬಗ್ಗೆ ಚಕಾರವೆತ್ತುತ್ತಿಲ್ಲವೆಂದು ಅಕ್ರೋಶ ವ್ಯಕ್ತಪಡಿಸಿದರು.Raitha sangha malur -kolar road band a.p.m.c horata news - 08-07-2019

ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಹೆಸರಿಗೆ ಮಾತ್ರ ಮಾರುಕಟ್ಟೆ ಆದರೆ ಇಲ್ಲಿನ ಚುನಾಯಿತ ಪ್ರತಿನಿದಿಗಳು ಮತ್ತು ಅಧಿಕಾರಿಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವ ನೆಪದಲ್ಲಿ ಕೋಟ್ಯಾಂತರ ರೂಪಾಯಿ ಹಣ ಸ್ವಚ್ಚತೆಗೆ ಮತ್ತು ಭದ್ರತೆಗೆ ಖರ್ಚು ಮಾಡುತ್ತಿದ್ದರೂ ಯಾವುದೇ ಸ್ವಚ್ಚತೆಯಾಗುತ್ತಿಲ್ಲ. ಗಬ್ಬುನಾರುತ್ತಿರುವ ಮಾರುಕಟ್ಟೆ ಸ್ವಚ್ಚತೆ ಮಾಡುವವನನ್ನು ಕೇಳಿದರೆ ಬೇಜವಬ್ದಾರಿಯಿಂದ ಕಸ ಹಾಕಲು ಜಾಗದ ಸಮಸ್ಯೆಯೆಂದು ಹೇಳುವ ಈ ವ್ಯಕ್ತಿಗೆ ತಿಂಗಳಿಗೆ 3.5 ಲಕ್ಷ ಏಕೆ ಕೊಡಬೇಕು. ಜೊತೆಗೆ ರೈತರಿಗೆ ಮೂಲಭೂತ ಸೌಕರ್ಯಗಳಾದ , ವಿಶ್ರಾಂತಿಗೃಹಗಳು,ಶೌಚಾಲಯಗಳ ಸೌಕರ್ಯವಿಲ್ಲದೆ ರಾತ್ರಿವೇಳೆ ಸೊಳ್ಳೆಗಳಿಂದ ಕಚ್ಚಿಸಿಕೊಂಡು ನಾನಾ ರೋಗಗಳಿಗೆ ಆಹ್ವಾನ ಕೊಡುತ್ತಿದೆ. ಮಾರುಕಟ್ಟೆ ವ್ಯವಸ್ಥೇ, ಜೊತೆಗೆ ಸಾವಿರಾರು ಕೋಟಿ ವ್ಯವಹಾರ ನಡೆಯುವ ಮಾರುಕಟ್ಟೆಯಲ್ಲಿ ಸಿ.ಸಿ ಕ್ಯಾಮಾರಾಗಳಿಲ್ಲ ಇಷ್ಟೇಲ್ಲಾ ಅವ್ಯವಸ್ಥೆಗಳ ಜೊತೆಗೆ ಸರ್ಕಾರಕ್ಕೆ ಬರುವ ಆದಾಯಕ್ಕೂ ಕತ್ತರಿ ಹಾಕುವ ಅಧಿಕಾರಿಗಳಿದ್ದಾರೆ.

ಜೊತೆಗೆ ಈ ರೀತಿ ರೈತನಿಗೆ ಅನುಕೂಲವಾಗುವ ಕೆಲಸವನ್ನೇ ಮಾಡಿಕೊಡದೇ ಇದ್ದರೇ ರೈತರ ಪರಿಸ್ಥಿತಿ ಏನು ಎಂಬುದು ಜಿಲ್ಲಾಡಳಿತಕ್ಕೆ ರೈತರ ಪ್ರಶ್ನೆಯಾಗಿದೆ. ಜಿಲ್ಲಾಡಳಿತ ಸೂಕ್ತ ಜಾಗವನ್ನು ಗುರುತಿಸಿ ತರಕಾರಿ ಮತ್ತು ಟೊಮೋಟೋ ಜಾಗವನ್ನು ಬೇರೆ ಬೇರೆ ಮಾಡದೇ ಹೋದರೆ ಮಾರುಕಟ್ಟೆ ಪಕ್ಕದ ಆಂದ್ರ ರಾಜ್ಯಕ್ಕೆ ವರ್ಗಾವಣೆಯಾಗುವ ಬೀತಿಯೂ ಎದ್ದು ಕಾಣುತ್ತಿದೆ. ಮಾರುಕಟ್ಟೆ ಸ್ಥಳವಕಾಶ ನೀಡದೇ ಇದ್ದರೇ ಇದರ ಲಾಭ ಪಡೆಯಲು ಪಕ್ಕದ ರಾಜ್ಯದವರು ಜಿಲ್ಲೆಯ ತರಕಾರಿ ಬೆಳೆಗಾರರಿಗೆ ಗುಣಮಟ್ಟದ ಮಾರುಕಟ್ಟೆ ಕಲ್ಪಿಸಲು ಮುಂದಾಗುತ್ತಿದ್ದು, ಇದು ನಡೆದರೆ ಸರ್ಕಾರಕ್ಕೆ ಬರುವ ಕೋಟ್ಯಾಂತರ ರೂಪಾಯಿ ಆದಾಯ ಕೈತಪ್ಪುತ್ತದೆ. ಹಾಗೂ ಜಿಲ್ಲೆಯ ರೈತರಿಗೆ ಸಾಗಾಣಿಕೆ ಮತ್ತು ಮಾರುಕಟ್ಟೆ ದುಬಾರಿಯಾಗಿ ಪರಿಗಣಿಸುತ್ತದೆ. ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಟೊಮೋಟೋ ಅವಕ ಹೆಚ್ಚಾಗುವ ಸಾದ್ಯತೆಯಿದ್ದು, ಕೂಡಲೇ ಮಾರುಕಟ್ಟೆಗೆ ಬೇಟಿ ನೀಡಿ ಸಂಬಂದಪಟ್ಟ ಅಧಿಕಾರಿಗಳನ್ನು ಸಭೆ ಕರೆದು ಟೊಮೋಟೋ ಮಾರುಕಟ್ಟೆಗೆ 50 ಎಕರೆ ಜಮೀನನ್ನು ಮಂಜೂರು ಮಾಡಿಕೊಟ್ಟು ಮುಂದೆ ಆಗುವ ಮಾರುಕಟ್ಟೆಯಲ್ಲಿನ ಅನಾಹುತಗಳನ್ನು ತಪ್ಪಿಸಬೇಕೆಂದು ಇಲ್ಲವಾದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಮೋಟೋ ಬಾಕ್ಸ್‍ಗಳನ್ನು ಇಳಿಸುವ ಮೂಲಕ ವಿಭಿನ್ನ ರೀತಿಯ ಹೋರಾಟದ ಹಾದಿ ತುಳಿಯಬೇಕಾಗುತ್ತದೆಂಧು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ವಿಶ್ವನಾಥ್‍ರವರು ಮಾರುಕಟ್ಟೆಗೆ ಜಾಗದ ಸಮಸ್ಯೆ ಪರಿಹರಿಸಲು 40 ಎಕರೆ ಜಮೀನು ಮಂಗಸಂದ್ರದ ಬಳಿ ಮಂಜೂರಾಗಿದೆ. ಕಾನೂನಿನ ಪ್ರಕಾರ ಜಮೀನನ್ನು ಅರಣ್ಯ ಇಲಾಖೆಯವರು ನಮಗೆ ಹಸ್ತಾಂತರಿಸಬೇಕಾಗಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಸ್ವಚ್ಚತೆ ಮತ್ತು ಭದ್ರತೆಯ ಅವ್ಯವಸ್ಥೆಯಿರುವುದು. ನಿಜ ಮಾರುಕಟ್ಟೆಯಲ್ಲಿನ ಕಸ ಹಾಕಲು ಜಾಗದ ಸಮಸ್ಯೆಯಿದೆ ಇದನ್ನು ಸರಿಪಡಿಸುವ ಜೊತೆಗೆ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಗೃಹಗಳ ಬಗ್ಗೆ ಕಮಿಟಿಯಲ್ಲಿ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಜೊತೆಗೆ ಸಿ,ಸಿ ಕ್ಯಾಮಾರ ಅಳವಡಿಸಿ ಆಗುವ ಆನಾಹುತಗಳನ್ನು ತಪ್ಪಿಸುವ ಭರವಸೆಯನ್ನು ನೀಡಿದರು.

ಈ ಹೋರಾಟದಲ್ಲಿ ಕೆ.ಎನ್.ಎನ್ ಮಂಡಿ ಮಾಲೀಕರಾದ ಪ್ರಕಾಶ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಶ್ರೀ,ತಾ.ಅ ತೆರ್ನಹಳ್ಳಿ ಆಂಜಿನಪ್ಪ, ಜಿಲ್ಲಾ ಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ, ಮಂಗಸಂದ್ರ ನಾಗೇಶ್, ಪುರುಷೋತ್ತಮ್, ವೆಂಕಟೇಶಪ್ಪ, ತಿಮ್ಮಣ್ಣ, ಬೇತಮಂಗಲ ಮಂಜುನಾಥ್, ಪಿ. ಮುನಿಯಪ್ಪ, ಹೀರೇಗೌಡ, ಶ್ರೀನಿವಾಸರೆಡ್ಡಿ, ಬ್ಯಾಟರಾಯಪ್ಪ, ಮುನಿನಾರಾಯಣಪ್ಪ, ರಾಮಕೃಷ್ಣಪ್ಪ, ಚೆನ್ನರಾಯಪ್ಪ, ಸಾಗರ್, ಸುಪ್ರೀಂಚಲ, ಎ.ಪಿ.ಎಂ.ಸಿ ಪುಟ್ಟರಾಜು, ರಂಜಿತ್, ಮೂಂತಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter