Published On: Sat, Jun 22nd, 2019

ಗುರುಪುರ ಸೇತುವೆ ಕಾಮಗಾರಿ ವೀಕ್ಷಿಸಿ, ಗುತ್ತಿಗೆದಾರರಿಗೆ ಅಭಿನಂದನೆ ಸಲ್ಲಿಸಿದ ಸಂಸದ ನಳಿನ್‍ ಫೆಬ್ರವರಿ ಅಂತ್ಯಕ್ಕೆ ಹೊಸ ಸೇತುವೆ ಲೋಕಾರ್ಪಣೆ : ಸಂಸದ ನಳಿನ್

ಗುರುಪುರ : ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಫಲ್ಗುಣಿ ನದಿಗೆ ಅಡ್ಡಲಾಗಿ ಗುರುಪುರದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಸೇತುವೆ ಕಾಮಗಾರಿ ನಿಗದಿತ ಅವಧಿಗಿಂತ ಪೂರ್ವದಲ್ಲೇ ಮುಗಿಯಲಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

22vp gurupura sethuve-3ಶನಿವಾರ ಗುರುಪುರದಲ್ಲಿ ಸೇತುವೆ ಕಾಮಗಾರಿ ಪ್ರಗತಿ ವೀಕ್ಷಿಸಿ, ಪತ್ರಿಕಾಗೋಷ್ಠಿ ನಡೆಸಿದ ನಳಿನ್, 2019 ಫೆಬ್ರವರಿ 21ಕ್ಕೆ ಆರಂಭಗೊಂಡ ಸೇತುವೆ ಕಾಮಗಾರಿ 2021ರ ಫೆಬ್ರವರಿ 20ರಂದು ಪೂರ್ಣಗೊಳಿಸುವ ಕರಾರಿನ ಮೇರೆಗೆ ಕಾವೂರಿನ ಮೊಗರೋಡಿ ಕನ್‍ಸ್ಟ್ರಕ್ಷನ್ ಕಂಪೆನಿಗೆ ಗುತ್ತಿಗೆ ಒಪ್ಪಿಸಲಾಗಿತ್ತು. ಟೆಂಡರು ಪಡೆದ ತಕ್ಷಣ ಕಾಮಗಾರಿ ಆರಂಭಿಸಿರುವ ಕಂಪೆನಿ, ಬೇಸಗೆಯಲ್ಲಿ ಕ್ಷಿಪ್ರಗತಿಯಲ್ಲಿ ಪಿಲ್ಲರ್ ಹಾಕುವ ಕೆಲಸ ಮುಗಿಸಿದೆ.

22vp gurupura sethuve-2ಮಳೆಗಾಲದಲ್ಲಿ ಗರ್ಡರ್ ಮತ್ತು ಸ್ಲ್ಯಾಬ್ ಅಳವಡಿಕೆ ಕೆಲಸ ನಡೆಯಲಿದೆ. ಜಿಲ್ಲೆಯಲ್ಲೇ ಅತಿ ಶೀಘ್ರ ಮುಕ್ತಾಯಗೊಳ್ಳಲಿರುವ ಕಾಮಗಾರಿ ಇದೆಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಈ ಹಿನ್ನೆಲೆಯಲ್ಲಿ ಕಂಪೆನಿ ಮಾಲಕ ಸುಧಾಕರ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗಕ್ಕೆ ಅರ್ಹ ಅಭಿನಂದನೆ ಸಲ್ಲಬೇಕು ಎಂದರು.

gur-june-22-gurpur bridge vikshane-2
ಭಾರತ್ ಮಾಲಾ ಬೈಪಾಸ್ ರಸ್ತೆ :
ಮಂಗಳೂರು ಬೈಪಾಸ್ ರಸ್ತೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಮೂಲ್ಕಿ-ಕಿನ್ನಿಗೋಳಿ-ಕಟೀಲು-ಬಜ್ಪೆ-ಗುರುಪುರ ಕೈಕಂಬ-ಪೊಳಲಿ-ಬಿ ಸಿ ರೋಡ್-ಮೆಲ್ಕಾರು-ಮುಡಿಪು-ಕೊಣಾಜೆ ಮೂಲಕ ತಲಪಾಡಿ ಸಂಪರ್ಕಿಸಲಿದೆ. `ಭಾರತ್ ಮಾಲ’ ಯೋಜನೆಯಡಿ ಬೈಪಾಸ್ ನಿರ್ಮಾಣಗೊಳ್ಳಲಿದೆ ಎಂದವರು, ಜಿಲ್ಲೆಗೆ ಸಂಬಂಧಿಸಿದ ಕೆಲವು ರಸ್ತೆ ಕಾಮಗಾರಿಗಳ ಮಾಹಿತಿ ನೀಡಿದರು.

22vp gurupura sethuve-4
ಗೋಷ್ಠಿಯಲ್ಲಿ ಮಾತನಾಡಿದ ಸ್ಥಳೀಯ ಶಾಸಕ ಡಾ. ಭರತ್ ಶೆಟ್ಟಿ, ಮೂಲರಪಟ್ಣದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಸರ್ಕಾರದ ಮೇಲೆ ನಾವಿಬ್ಬರು(ಶಾಸಕ ರಾಜೇಶ್ ನಾಯ್ಕ್) ಒತ್ತಡ ಹೇರಿದ್ದೇವೆ. ಹೊಸ ಸೇತುವೆ ಮುಂದಿನ ವರ್ಷ ಆರಂಭಗೊಳ್ಳಲಿದೆ. ಸ್ಟೀಲ್ ಬಳಕೆಯ ಹೊಸ ತಂತ್ರಜ್ಞಾನದೊಂದಿಗೆ ಹೊಸ ಸೇತುವೆ ನಿರ್ಮಾಣಗೊಳ್ಳಲಿದ್ದು, ಇದು ಕಡಿಮೆ ವೆಚ್ಚದಲ್ಲಿ ಶೀಘ್ರ ಕಾರ್ಯಗತಗೊಳ್ಳಲಿದೆ ಎಂದರು.
gur-june-22-gurpur bridge vikshane-1
ಗುರುಪುರ ಸೇತುವೆ :
39.420 ಕೋಟಿ ರೂ ಅಂದಾಜು ವೆಚ್ಚದ ಹೊಸ ಸೇತುವೆ ಯೋಜನೆಯಲ್ಲಿ 25 ಮೀಟರ್ ಉದ್ದದ ಏಳು ಅಂಕಣಗಳಿವೆ. ಸೇತುವೆಯ ಅಗಲ 16 ಮೀಟರ್, ಸೇತುವೆ ರಸ್ತೆ ಅಗಲ 11 ಮೀಟರ್, ಕಾಲುದಾರಿ ಅಗಲ 2.50 ಮೀಟರ್(ಎರಡೂ ಕಡೆ), ಫೈಲ್ ಫೌಂಡೇಶನ್, ಮೇಲ್ಕಟ್ಟಡಕ್ಕೆ ಪಿಎಸ್‍ಸಿ ಗರ್ಡರ್ ಬೀಮ್ ಮತ್ತು ಸ್ಲ್ಯಾಬ್, ಎರಡೂ ಕಡೆ ಕೂಡುರಸ್ತೆ ತಲಾ 500 ಮೀಟರ್ ನಿರ್ಮಾಣಗೊಳ್ಳಲಿದೆ. ರಸ್ತೆಗೆ ಜಲ್ಲಿ ಹಾಸಲಾಗಿದೆ.

22vp gurupura sethuve-1

ವೇದಿಕೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ(ಮಂಗಳೂರು) ಸಹಾಯಕ ಕಾರ್ಯಪಾಲ ಇಂಜಿನಿಯರ್ ಎಚ್ ಪಿ ರಮೇಶ್, ಸಹಾಯಕ ಇಂಜಿನಿಯರ್ ಕೀರ್ತಿ ಅಮೀನ್, ವಿಹಿಂಪ ಮುಖಂಡ ಜಗದೀಶ ಶೇಣವ, ಮೊಗರೋಡಿ ಕನ್‍ಸ್ಟ್ರಕ್ಷನ್ ಕಂಪೆನಿಯ ಮುಖ್ಯ ಇಂಜಿನಿಯರ್ ಸುಬ್ರಹ್ಮಣ್ಯ, ಸ್ಥಳೀಯ ಬಿಜೆಪಿ ಮುಖಂಡರಾದ ರಾಜೇಶ್ ಸುವರ್ಣ, ಸೇಸಮ್ಮ, ಶ್ರೀಕರ ಶೆಟ್ಟಿ, ಸೋಮಯ್ಯ, ನಳಿನಿ ಶೆಟ್ಟಿ, ರಮೇಶ್ ಬಳ್ಳಿ  ಮಾಧವ, ಸೋಹನ್ ಅಧಿಕಾರಿ  ಮತ್ತಿತರರು ಇದ್ದರು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter