Published On: Fri, Jun 21st, 2019

ಮುತ್ತೂರು ತೂಗುಸೇತುವೆ ರಸ್ತೆಗೆ ಕಾಂಕ್ರೀಟೀಕರಣ

ಕೈಕಂಬ:ಮುತ್ತೂರು ಮುಖ್ಯ ರಸ್ತೆಯಿಂದ ತೂಗುಸೇತುವೆವರೆಗಿನ ಸುಮಾರು 1ಕಿ.ಮೀ ಉದ್ದದ ರಸ್ತೆಗೆ ಕಾಂಕ್ರೀಟ್ ಭಾಗ್ಯ ಒದಗಿ ಬಂದಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಮೂಲರ ಪಟ್ನ ಸೇತುವೆ ಕುಸಿದ ನಂತರ ಜನರು ನದಿ ದಾಟಲು ಈ ತೂಗುಸೇತುವೆಯನ್ನು ಬಳಸುತ್ತಿದ್ದಾರೆ.ಹೊಂಡ ಗುಂಡಿಗಳಿಂದ ಕಂಡಿದ್ದ ಈ ರಸ್ತೆ ವಾಹನ ಸಹಿತ ಜನಸಂಚಾರಕ್ಕೂ ಯೋಗ್ಯವಲ್ಲದ ರೀತಿಯಲ್ಲಿ ಕೆಟ್ಟುಹೋಗಿತ್ತು.

21vp muthuru ಈ ರಸ್ತೆಯ ದುರಸ್ಥಿಗೆ ಜನರಿಂದ ಅಗ್ರಹವೂ ಕೇಳಿಬಂದಿತ್ತು ಇದೀಗ ಶಾಸಕ ಭರತ್‍ಶೆಟ್ಟಿಯವರ ಮುತುವರ್ಜಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಧಿಯಿಂದ ಸುಮಾರು 25ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ವಾಹನಸಂಚಾರಕ್ಕೆ ಮುಕ್ತವಾಗಲಿದೆ.ಈ ರಸ್ತೆ ಹದಗೆಟ್ಟು ಹೋಗಿದ್ದರಿಂದಾಗಿ ಬಸ್ಸುಗಳು ತೂಗುಸೇತುವೆ ಬಲಿಗೆ ಹೋಗದೆ ಮುಖ್ಯ ರಸ್ತೆಯಲ್ಲೆ ಪ್ರಯಾಣೀಕರನ್ನು ಇಳಿಸುತ್ತಿದ್ದವು. ಇದು ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು.

IMG-20190621-WA0042

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter