Published On: Sat, Jun 15th, 2019

ಕುಕ್ಕಟ್ಟೆ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

ಗಂಜಿಮಠ : ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜಿ ಸುನಿಲ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಕುಕ್ಕಟ್ಟೆ ಮತ್ತು ಸೂರಲ್ಪಾಡಿ ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಹೈಯರ್ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ `ಶ್ರೀ ವಿಜಯ ವಾಹಿನಿ’ ಗಂಜಿಮಠ ಸಂಸ್ಥೆ ಎಂದು ಸೇರಿಸಿಕೊಳ್ಳಿ. ಈ ಸಂಸ್ಥೆಯ ಮೂಲಕ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.gur-june-15-udgatane

gur-june-15-pusthaka vithrane-2ಗಂಜಿಮಠ ಗ್ರಾಪಂ ಸ್ಥಳೀಯ ಸದಸ್ಯ ಜಯಾನಂದ ಕುಲಾಲ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಸಿಂಟಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ ವಾಮನ್ ಭಟ್ ಮಾತನಾಡುತ್ತ, ವಿದ್ಯೆ ಮನುಷ್ಯಗೆ ಮುಖ್ಯ. ಸಮಾಜದಿಂದ ಸಿಗುವ ಇಂತಹ ನೆರವಿನ ಸದುಪಯೋಗಪಡಿಸಿಕೊಳ್ಳಬೇಕು. ನಮಗೆ ನಾವೇ ಪ್ರೇರಣೆಯಾಗಬೇಕು. ಕಲಿಕೆಯಲ್ಲಿ ಸ್ವಯಂ ಸ್ಪರ್ಧೆ ಬೆಳೆಸಿಕೊಳ್ಳಿ ಎಂದು ಮಕ್ಕಳಿಗೆ ಕಿವಿ ಮಾತನ್ನಾಡಿದರು.gur-june-15-makkalige pusthake-2

ತಾಪಂ ಸದಸ್ಯ ಸುನಿಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರಾಜು ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ವಾರಿಜಾ, ಶಿಕ್ಷಕ ಮಹಾಲಿಂಗ ನಾಯ್ಕ್, ಇತರ ಶಿಕ್ಷಕವೃಂದ ಹಾಗೂ ಮಕ್ಕಳ ಪಾಲಕರು ಇದ್ದರು. ಬೂಬ ಪೂಜಾರಿ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter