Published On: Fri, Jun 14th, 2019

ಶ್ರೀನಿವಾಸಪುರಸರ್ಕಾರಿ ನೌಕರರ ಸಂಘಕ್ಕೆಆಯ್ಕೆ

ಶ್ರೀನಿವಾಸಪುರ;ತಾಲ್ಲೂಕು ಸರ್ಕಾರಿ ನೌಕರರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮೂರು ಸ್ಥಾನಗಳಿಗೆ ಬಂಗವಾದಿ ಎಂ.ನಾಗರಾಜ್, ತಿಪ್ಪಣ್ಣ, ಸಿ.ಎಂ.ವೆಂಕಟರವಣ ಆಯ್ಕೆಯಾಗಿರುತ್ತಾರೆ.

News-2 (1)
ಮುಂದಿನ 5 ವರ್ಷಗಳ ಸರ್ಕಾರಿ ನೌಕರರ ಸಂಘದ ಆಡಳಿತಾವಧಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ 3 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 810 ಮಂದಿ ಮತಗಳ ಪೈಕಿ ಇವುಗಳಲ್ಲಿ 700 ಮತಗಳು ಚಲಾಯಿಸಿದ್ದು, ಈ ಚುನಾವಣೆಯಲ್ಲಿ 3 ಸ್ಥಾನಗಳಿಗೆ 7 ಮಂದಿ ಅಭ್ಯರ್ಥಿಗಳು ಕಣದಲ್ಲಿ ನಿಂತಿದ್ದು ಇವರಲ್ಲಿ ಎಂ.ನಾಗರಾಜ್ 567, ತಿಪ್ಪಣ್ಣ 484, ಸಿ ಎಂ ವೆಂಕಟರವಣ 353 ಮತಗಳನ್ನು ಪಡೆದು ಜಯಶೀಲರಾಗಿದ್ದು ಇವರ ಪ್ರತಿ ಸ್ಪರ್ದಿಗಳಾಗಿ ಎಲ್.ಆನಂದ 264, ಆರ್.ರವಿಕುಮಾರ್ 272, ಲಕ್ಷ್ಮೀನರಸಮ್ಮ ಕೆ.ವಿ 193 ಹೆಚ್.ಜಯರಾಮರೆಡ್ಡಿ 154, ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.

ಫ್ರೌಢಶಾಲಾ ಶಿಕ್ಷಕರ ಸಂಘದಿಂದ ಬೈರೇಗೌಡ 197 ಮತಗಳನ್ನು ಪಡೆದು ಜಯಗಳಿಸಿದ್ದು ಇವರ ಪ್ರತಿಸ್ಪರ್ಧಿ ಐಮಾರೆಡ್ಡಿ 67 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ. ಹಾಗೆಯೇ ಕಾಲೇಜು ಉಪನ್ಯಾಸಕರ ಸಂಘದಿಂದ ಮಂಜುನಾಥ ರೆಡ್ಡಿ ಕೆ.ಎನ್. 24 ಮತಗಳು ಪಡೆದು ಜಯಗಳಿಸಿದ್ದು ಇವರ ಪ್ರತಿ ಸ್ಪರ್ದಿ ಲಕ್ಷಣರೆಡ್ಡಿ 23 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ. ಉಳಿದ ಹಾಗೆ 28 ಇಲಾಖೆಗಳಿಂದ 28 ಮಂದಿ ಇಲಾಖೆಗೆ ಒಬ್ಬರಂತೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾ ಅಧಿಕಾರಿ ನಾಯಕ್ ತಿಳಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಫಲಿತಾಂಶ ಹೊರಬಿದ್ದಂತೆ ಬಂಗವಾದಿ ನಾಗರಾಜ್ ತಿಪ್ಪಣ್ಣ, ಸಿ.ಎಂ.ವೆಂಕಟರವಣ ಇವರ ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ದಿಂಬಾಲ ಅಶೋಕ್, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥ್, ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದರೆಡ್ಡಿ, ರೋಟರಿ ಸಂಸ್ಥೆಯ ಶಿವಮೂರ್ತಿ, ಸಿಆರ್.ಸಿ.ಕೃಷ್ಣಮೂರ್ತಿ, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವಿ.ಕೃಷ್ಣಪ್ಪ, ಗೌರವಾಧ್ಯಕ್ಷ ಹೊದಲಿ ಶ್ರೀನಿವಾಸಯ್ಯ, ರವೀಂದ್ರ ಸಿಂಗ್, ಕಳಾಶಂಕರ್, ಮುರಳಿಬಾಬು, ಅಶೋಕ್, ಬಿ.ಇ.ಓ.ಕಛೇರಿ ಸಿಬ್ಬಂದಿ ಭಾಷಾ ವಿಜೇತ ಶಿಕ್ಷಕರು ಮತ್ತಿತರರು ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter