Published On: Fri, Jun 14th, 2019

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನದಚುನಾವಣೆ

ಶ್ರೀನಿವಾಸಪುರ;ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರ ಚುನಾವಣೆ 2 ನೇ ಅವಧಿಗೆ 13 ರಂದು ನಿಗದಿಯಾಗಿದ್ದು ಕೋರಂ ಕೊರತೆ ಇರುವುದರಿಂದ ಇದೇ ತಿಂಗಳು 21 ರಂದು ಮತ್ತೊಂದು ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಯಾದ ವಿ.ಸೋಮಶೇಖರ್ ರವರು ತಿಳಿಸಿದ್ದಾರೆ.News -1

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಆಯ್ಕೆಯ ಪ್ರಕ್ರಿಯೆ ಚುನಾವಣೆ 13 ನೇ ತಾರಿಖಿನಂದು ನಿಗದಿಯಾಗಿದ್ದು ಬೆಳಗ್ಗೆ 9:30 ರಿಂದ ನಾಮ ಪತ್ರ ಸಲ್ಲಿಸಲು ಅವಕಾಶವಿದ್ದು ಒಟ್ಟು 18 ಮಂದಿ ಸದಸ್ಯರಲ್ಲಿ 10 ಮಂದಿ ಜೆಡಿಎಸ್ ಬೆಂಬಲಿತ ಮತ್ತು 8 ಮಂದಿ ಕಾಂಗ್ರೇಸ್ ಬೆಂಬಲಿತ ಸದಸ್ಯರು ಇದ್ದು ಇವರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತವಾಗಿ ಕೆ.ಎಂ.ನರೇಶ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಆರ್.ಜಿ.ನರಸಿಂಹಯ್ಯ, ಬಾಲಾವತಿ ಮೂರು ಮಂದಿ ನಾಮ ಪತ್ರ ಸಲ್ಲಿಸಿದ್ದು, ಮದ್ಯಾಹ್ನ 1-00 ಗಂಟೆಗೆ ಕೋರಂ ಸಭೆ ಕರೆಯಲಾಗಿದ್ದು, 1:30 ನಿಮಿಷಗಳಾದರು ಜೆಡಿಎಸ್ ನ 10 ಮಂದಿ ಸದಸ್ಯರಲ್ಲಿ ಯಾವೊಬ್ಬರು ಸಹ ಹಾಜರಾಗದೆ ಕೇವಲ ಕಾಂಗ್ರೇಸ್ ನ 8 ಮಂದಿ ಸದಸ್ಯರು ಹಾಜರಾಗಿದ್ದರಿಂದ ಕೋರಂ ಕೊರತೆಯಿಂದ ಅಧ್ಯಕ್ಷರ ಸ್ಥಾನ ಆಯ್ಕೆ ಪ್ರಕ್ರಿಯೆ ಮುಂದಿನ ಇದೇ ತಿಂಗಳ 21 ನೇ ತಾರೀಖಿನಂದು ಮದ್ಯಾಹ್ನ 12 ಗಂಟೆಗೆ ಮತ್ತೊಮ್ಮೆ ಸಭೆಯನ್ನು ಕರೆಯಲಾಗಿದೆ ಎಂದು ಚುನಾವಣಾ ಅಧಿಕಾರಿ ಸೋಮಶೇಖರ್ ರವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಭಾರ ಇ.ಓ.ರಾಜಣ್ಣ, ಲೆಕ್ಕಾಧಿಕಾರಿ ಮಂಜುನಾಥ, ಎಫ್.ಡಿ.ಎ ಆನಂದಚಾರಿ ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter