Published On: Fri, Jun 14th, 2019

ಚೆಕ್ ಡ್ಯಾಂ ಕಾಮಗಾರಿಯ ವೀಕ್ಷಣೆ

ಬಂಟ್ವಾಳ:  ಪಶ್ಚಿಮವಾಹಿನಿ ಯೋಜನೆಯಡಿ ಬಂಟ್ವಾಳ ತಾಲೂಕಿನ ಮೂರು ಕಡೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಚೆಕ್ ಡ್ಯಾಂನ ಕಾಮಗಾರಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಶುಕ್ರವಾರ ಪರಿಶೀಲಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪಶ್ಚಿಮವಾಹಿನಿ ಯೋಜನೆಯಲ್ಲಿ ಕರಾವಳಿ ಜಿಲ್ಲೆಗಳಾದ ದ.ಕ.,ಉಡುಪಿ ಹಾಗೂ ಉ.ಕ.ಜಿಲ್ಲೆಯಲ್ಲಿ ಚೆಕ್ ಡ್ಯಾಂ,ಕಿಂಡಿಅಣೆಕಟ್ಟು,ಸೇತುವೆಗಳ  ನಿರ್ಮಾಣಕ್ಕೆ ೨೬೫ ಕೋ.ರೂ.ಮಂಜೂರಾಗಿತ್ತು.

15-13-58-IMG-20190614-WA0012-768x354

am33ಈ ಪೈಕಿ  80 ಕೋ.ಉಡುಪಿ ಜಿಲ್ಲೆಗೆ,   35 ಕೋ.ರೂ ಉತ್ತರ ಕನ್ನಡ ಜಿಲ್ಲೆಗೆ ಹಂಚಿಕೆ ಮಾಡಲಾಗಿದ್ದರೆ ಉಳಿದಂತೆ ದ.ಕ.ಜಿಲ್ಲೆಗೂ ಅನುದಾನ ಬಿಡುಗಡೆಗೊಂಡಿತ್ತು,      ಮಾಜಿ ಸಚಿವ ರಮಾನಾಥ ರೈ ಅವರ ಶ್ರಮದ ಫಲವಾಗಿ  ಬಂಟ್ವಾಳ ತಾಲೂಕಿನ ಮೂರು ಕಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಮಂಜೂರಾತಿ ದೊರಕಿತ್ತು.ತಾಲೂಕಿನ ಕರಿಯಂಗಳ ಗ್ರಾಮದ ಕಡಪುಕರಿಯದಲ್ಲಿ 12.5  ಕೋ.ರೂ.ವೆಚ್ಚದಲ್ಲಿ ಚೆಕ್ ಡ್ಯಾಂನಿರ್ಮಾಣವಾಗುತ್ತಿದ್ದರೆ. ಸಂಗಬೆಟ್ಟುವಿನ ಕರ್ಪೆಯಲ್ಲಿ 15 ಕೋ.ರೂ.ಹಾಗೂ ಪುಚ್ಚೇರಿಯಲ್ಲಿ 7 ಕೋ.ರೂ.ವೆಚ್ಚದಲ್ಲಿ ಚೆಕ್ ಡ್ಯಾಂಗಳ ನಿರ್ಮಿಸಲಾಗುತ್ತಿದೆ.

15-13-24-IMG-20190614-WA0016-768x354ಈ ಮೂರು ಡ್ಯಾಂಗಳ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರಾತಿಗೊಂಡಿರುವ ಈ ಮಹತ್ವಾಕಾಂಕ್ಷೆಯ  ಯೋಜನೆಯಿಂದ ಅಂರ್ತಜಲವು ವೃದ್ದಿಯಾಗಲಿದೆಯಲ್ಲದೆ ಸಂಪರ್ಕ ಕೊಂಡಿಯಾಗಿ ಜನರಿಗೆ ಸಹಕಾರಿಯಾಗಲಿದೆ ಎಂದರು.         ಕರಿಯಂಗಳ ಗ್ರಾಮದ ಕಡಪುಕರಿಯದಲ್ಲಿ 12.5 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುವ  ಡ್ಯಾಂ ನಿಂದ ಕಡಪಕರಿಯದಿಂದ ಮನೇಲು ಸಂಪರ್ಕ ಕಲ್ಪಿಸಲಾಗುತ್ತಿದ್ದು,ಪೊಳಲಿ ದೇವಾಲಯಕ್ಕೆ ಮನೇಲಿನಿಂದ ದೈವದ  ಭಂಡಾರ ಬರಲು ಈ ಡ್ಯಾಂ ಅನುಕೂಲವಾಗಲಿದೆ ಎಂದು ರೈ ಹೇಳಿದರು.
ಸಿದ್ದಕಟ್ಟೆ ಸಮೀಪದ ಕರ್ಪೆ ಎಂಬಲ್ಲಿ 15 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಚೆಕ್ ಡ್ಯಾಂ ನ ವಿನ್ಯಾಸವನ್ನು ಬದಲಾಯಿಸುವ ನಿಟ್ಟಿನಲ್ಲಿ ಮರುಅನುಮೋದನೆಗಾಗಿ ಸರಕಾರಕ್ಕೆ  ಕಳುಹಿಸಿಕೊಡಲಾಗಿದೆ ಎಂದ ಅವರು ಪುಚ್ಚೆಮೊಗರುವಿನಲ್ಲಿ  ಪಲ್ಗುಣಿ ನದಿಗೆ ಸುಮಾರು  7 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚೆಕ್ ಡ್ಯಾಂ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.am1

ಪುಚ್ಚಮೊಗರು ಚೆಕ್ ಡ್ಯಾಂ ನಿಂದಾಗಿ ಪುಚ್ಚಮೊಗರು ಬಹುಗ್ರಾಮ ಕುಡಿಯುವ ನೀರಿಗೂ ಪ್ರಯೋಜನ ವಾಗಲಿದೆ ಎಂದ ಮಾಜಿ ಸಚಿವ ರಮಾನಾಥ ರೈ
ಈ ಯೋಜನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ರುಗಳಾದ ಬೇಬಿಕುಂದರ್, ಸುದೀಪ್ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,     ಚಂದ್ರಹಾಸ ಪಲ್ಲಿಪ್ಪಾಡಿ,ಲಕ್ಷ್ಮೀಶ್ ಶೆಟ್ಟಿ,ಲೋಕಯ್ಯಪೂಜಾರಿ,ಗೋಪಾಲಪೂಜಾರಿ, ಶಿವಪ್ರಸಾದ್ ಕೂಡಾರಿಗುಡ್ಡೆ,ಮುಸ್ತಾಫ ಪಲ್ಲಿಪ್ಪಾಡಿ,ಜಯರಾಮ್ ಹಾಗೆಯೇ    ಕುಕ್ಕಿಪಾಡಿ ಗ್ರಾ. ಪಂ.ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ಗ್ರಾ.ಪಂ.ಸದಸ್ಯರಾದ ದೇವಪ್ಪ ಕರ್ಕೇರ,  ಜಗದೀಶ ಕೊಯಿಲ ಮೊದಲಾದ ಪ್ರಮುಖರು ಮತ್ತು ಇಂಜಿನಿಯರುಗಳಾದ ಪ್ರಸನ್ನ , ಕೃಷ್ಣಕುಮಾರ್  ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter