Published On: Fri, Jun 14th, 2019

ಮೂಡುಬಿದಿರೆ: ಮಲೇರಿಯಾ ವಿರೋಧ ಮಾಸಾಚರಣೆ

ಮೂಡುಬಿದಿರೆ: ಮಳೆಗಾಲ ಆರಂಭವಾಗುತ್ತಿರುವ ಸನ್ನಿವೇಶದಲ್ಲಿ ಮಲೇರಿಯಾ, ಡೆಂಗ್ಯೂನಂಥ ಸಾಂಕ್ರಾಮಿಕ ರೋಗಗಳು ಹಬ್ಬುವ ಅಪಾಯದ ಬಗ್ಗೆ ಜನರಿಗೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತೆಯವರು ನೀಡುವ ಮಾಹಿತಿಯನ್ನು ಜನರು ಸರಿಯಾಗಿ ತಿಳಿದುಕೊಂಡು ತಂತಮ್ಮ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಂಡು ಆರೋಗ್ಯಕರ ವಾತಾವರಣ ನೆಲೆಗೊಳ್ಳುವಂತೆ ಮಾಡಬೇಕಾಗಿದೆ’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

maleria
ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾ„ಕಾರಿಗಳ ಕಚೇರಿ ಮಂಗಳೂರು, ತಾಲೂಕು ಆರೋಗ್ಯಾ„ಕಾರಿಗಳ ಕಚೇರಿ, ಮೂಡುಬಿದಿರೆ ಪುರಸಭೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮೂಡುಬಿದಿರೆ, ಜವನೆರ್ ಬೆದ್ರ ಸಂಘಟನೆ ಹಾಗೂ ಆಳ್ವಾಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ಮಾರ್ಪಾಡಿ ಗ್ರಾಮದ ಕಡ್ದಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ನಡೆದ ಮಲೇರಿಯಾ ವಿರೋಧ ಮಾಸಾಚರಣೆ :ಜನಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿ ಡಾ.ಅರುಣ್‍ಕುಮಾರ್ ಅವರು ಮಲೇರಿಯಾ ವಿರೋ„ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆಳ್ವಾಸ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಮಲೇರಿಯಾ, ಡೆಂಗ್ಯೂ ಮೊದಲಾದ ರೋಗಗಳಿಗೆ ಕಾರಣವಾಗುವ ಸಂಗತಿಗಳನ್ನು , ತಡೆಗಟ್ಟುವ ವಿಧಾನಗಳನ್ನು ವಿಷದಪಡಿಸಿದರು.
ಜಿಲ್ಲಾ ಕೀಟ ತಜ್ಞೆ ಮಂಜುಳಾ ಅವರು ಲಾರ್ವ ಸಮೀಕ್ಷೆ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಪುರಸಭಾ ವಾರ್ಡ್ ಸದಸ್ಯೆ ದಿವ್ಯ ಜಗದೀಶ್ ಎಂ.ಕೆ., ಸದಸ್ಯ ನಾಗರಾಜ ಪೂಜಾರಿ, ಪುರಸಭಾ ಪ್ರಭಾರ ಮುಖ್ಯಾ„ಕಾರಿ ಸೂರ್ಯಕಾಂತ ಖಾರ್ವಿ, ಪರಿಸರ ಎಂಜಿನಿಯರ್ ಶಿಲ್ಪಾ ಎಸ್., ಮಾಜಿ ನಾಮನಿರ್ದೇಶಿತ ಸದಸ್ಯ ಹರೀಶ್ ಎಂ.ಕೆ., ಜವನೆರ್ ಬೆದ್ರ ತಂಡದ ನಾಯಕ ಅಮರ್ ಕೋಟೆ, ಪತ್ರಕರ್ತರ ಸಂಘದ ಪ್ರತಿನಿಧಿಯಾಗಿ ಪ್ರೇಮಶ್ರೀ, ಆಳ್ವಾಸ್ ನರ್ಸಿಂಗ್ ಕಾಲೇಜಿನ ಸಹಾಯಕ ಪೆÇ್ರಫೆಸರ್ ಶಾಂತಿ ಅನಿತಾ ಲೂಯಿಸ್ ಮುಖ್ಯಾತಿಥಿಗಳಾಗಿದ್ದರು.
ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಪುರಸಭಾ ಸದಸ್ಯೆ ದಿವ್ಯ ಜಗದೀಶ್ ಮಲೇರಿಯಾ ವಿರೋಧ ಪ್ರಚಾರಾಂದೋಲನಕ್ಕೆ ಹಸಿರು ಬಾವುಟ ಬೀಸಿ ಚಾಲನೆ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಕ ಕುಮಾರ್ ನಿರೂಪಿಸಿದರು. ಆರೋಗ್ಯ ಶಿಕ್ಷಣಾ„ಕಾರಿ ಸುಶೀಲ, ಕಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ, ಮಾಜಿ ನಾಮನಿರ್ದೇಶಿತ ಪುರಸಭಾ ಸದಸ್ಯ ಹರೀಶ್ ಎಂ.ಕೆ. , ಅಂಗನವಾಡಿ ಕಾರ್ಯಕರ್ತೆ ರಾಜೀವಿ ಹಾಗೂ ಸಹಾಯಕರು ಉಪಸ್ಥಿತರಿದ್ದರು.
ಜವನೆರ್ ಬೆದ್ರ ತಂಡದವರು ಪುರಸಭಾ ಸಿಬಂದಿಗಳೊಂದಿಗೆ ಸೇರಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ವಿದ್ಯಾರ್ಥಿಗಳು ಮನೆ ಮನೆಗಳಿಗೆ ತೆರಳಿ ಮಲೇರಿಯಾ, ಡೆಂಗ್ಯೂ ಮತ್ತಿತರ ರೋಗಗಳು ಬಾರದಂತೆ ಮನೆಗಳ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ತಿಳಿವಳಿಕೆ ಮೂಡಿಸಿದರು. ಸೊಳ್ಳೆ ನಾಶಕ ಸಿಂಪಡನೆ ಮಾಡಲಾಯಿತು. ಮನೆಗಳಲ್ಲಿರುವ ಸೊಳ್ಳೆ ಪರದೆಗಳನ್ನು ಸಂಗ್ರಹಿಸಿ ಮುಂದೆ ರಾಸಾಯನಿಕ ಲೇಪಿತ ಸೊಳ್ಳೆ ಪರದೆಗಳನ್ನು ವಿತರಿಸಲಾಗುವುದು ಎಂದು ತಿಳಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter