Published On: Fri, Jun 14th, 2019

ಪ್ರಾಂತ್ಯ ಶಾಲೆಯಲ್ಲಿ ಜೆಸಿಐ ಮೂಡುಬಿದಿರೆ ತ್ರಿಭುವನ್‍ನಿಂದ ಪರಿಸರ ಜಾಗೃತಿ

ಮೂಡುಬಿದಿರೆ: ವಿದ್ಯಾರ್ಥಿಗಳು ಪರಿಸರ ಉಳಿವಿಗಾಗಿ ಪಂಚಸೂತ್ರವನ್ನು ಅನುಸರಿಸಿದರೆ ಪ್ರಕೃತಿ ಮಾಲಿನ್ಯ ಹಾಗೂ ನಾಶವಾಗುವುದನ್ನು ತಡೆಯಬಹುದು. ಉಸಿರಿಗಾಗಿ ಹಸಿರು, ಜೀವನಕ್ಕಾಗಿ ನೀರು, ಬೇಡವಾದ ವಸ್ತುಗಳ ಖರೀದಿಯಿಂದ ದೂರವಿರುವುದು, ಖಾಸಗಿ ವಾಹನಗಳ ಮಿತಿಮೀರಿದ ಬಳಕೆಗೆ ಕಡಿವಾಣ, ತಂತ್ರಜ್ಞಾನಗಳ ಬಳಕೆಯಲ್ಲಿ ಇತಿಮಿತಿ ಅನುಸರಿಸಿದರೆ ಪ್ರಕೃತಿ ಉಳಿವಿಗಾಗಿ ನಮ್ಮಿಂದಾದಷ್ಟು ಕೊಡುಗೆ ನೀಡಬಹುದು ಎಂದು ಮೂಡುಬಿದಿರೆ ಪುರಸಭೆಯ ಪರಿಸರ ಅಧಿಕಾರಿ ಶಿಲ್ಪಾ ಹೇಳಿದರು.

Jci pranthya

ಪ್ರಾಂತ್ಯ ಮಂಜುನಾಥ ಸ್ವಾಮೀ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಜ್ಯೂನಿಯರ್ ಜೇಸಿ ವಿಭಾಗ ಜೆಸಿಐ ಮೂಡುಬಿದಿರೆ ತ್ರಿಭುವನ್ ಆಶ್ರಯದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಜೆಸಿಐ ವಲಯ 15ರ ಮಹಿಳಾ ವಿಭಾಗದ ವಲಯ ನಿರ್ದೇಶಕಿ ಸಂಗೀತಾ ಪ್ರಭು ಮುಖ್ಯ ಶಿಕ್ಷಕಿ ಶಕುಂತಳಾ , ಮೂಡುಬಿದಿರೆ ಜೆಸಿಐ ಅಧ್ಯಕ್ಷ ಸುದೀಪ್ ಬುನ್ನನ್, ಕಾರ್ಯದರ್ಶಿ ವರುಣ್, ಜ್ಯೂನಿಯರ್ ಜೇಸಿ ಅಧ್ಯಕ್ಷ ದಿವೇಶ್, ಜ್ಯೂನಿಯರ್ ಜೇಸಿ ಸದಸ್ಯರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter