Published On: Fri, Jun 14th, 2019

ಸಂತ ಅಂತೋನಿ ಚರ್ಚ್ ಫೆರ್ಮಾಯ್ ಇದರ ವಾರ್ಷಿಕ ಮಹೋತ್ಸವ

ಸಂತ ಅಂತೋನಿ ಚರ್ಚ್ ಫೆರ್ಮಾಯ್ ಇದರ ವಾರ್ಷಿಕ ಮಹೋತ್ಸವವು ಜೂ.13 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ನಿವೃತ್ತ ಧರ್ಮಧ್ಯಕ್ಷರು ಅತಿ ವಂದನೀಯ ಪರಮಪೂಜ್ಯ ಎಲೋಶಿಯಸ್ ಪಾವ್ಲ್ ಡಿ’ಸೋಜಾ ಪ್ರಧಾನ ಯಾಜಕರಾಗಿ ಬಲಿಪೂಜೆಯನ್ನು ನೆರವೇರಿಸಿ ಕ್ರೈಸ್ತ ಜೀವನ ಪವಾಡ ಪುರುಷ ಸಂತ ಅಂತೋನೀಯವರು ಪ್ರೇರಣೆ ಬಗ್ಗೆ ಪ್ರಭೋಧನೆ ನೀಡಿದರು. ಸಿಟಿ ವಲಯದ ಹಾಗೂ ಇತರ ಹಲವಾರು ಗುರುಗಳು ಬಲಿಪೂಜೆಯಲ್ಲಿ ಸಹಭಾಗಿಗಳಾದರು.

_DSF6980
ಸಂತ ಅಂತೀನಿಯವರ ವಾರ್ಷಿಕ ಮಹೋತ್ಸವಕ್ಕೆ ಪೂರ್ವ ಸಿದ್ದತೆಯಾಗಿ ದಿನಾಂಕ ಜೂ.4 ರಿಂದ 9 ದಿನಗಳ ನೊವೇನ ಪ್ರಾರ್ಥನೆ ಬಲಿಪೂಜೆ ಹಾಗೂ ವಿವಿಧ ಮೌಲ್ಯಗಳ ವಿಷಯಗಳ ಮೇಲಿನ ಪ್ರವಚಣೆ ನಡೆಸಲಾಗಿತ್ತು.
ಚರ್ಚ್ ಪಾಲಲಾ ಸಮಿತಿಯ ಉಪಾಧ್ಯಕ್ಷ ಜೋನ್ ಪ್ರಣಮ್ ಪಿಂಟೋ ಮೇಲ್ವೀಚಾರಣೆ ನಡೆಸಿದರು.ಕಾರ್ಯದರ್ಶಿ ಕ್ಲಾರಾ ಪಿಂಟೊ ಸಹಕರಿಸಿದರು. ಚರ್ಚ್‍ನ ಧರ್ಮಗುರು ರೆ.ಫಾ ಲೂಯಿಸ್ ಕುಟಿನ್ಹಾ ಮಾರ್ಗದರ್ಶನ ನೀಡಿದರು. ವಾರ್ಷಿಕೊತ್ಸವ ದಿನದಂದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.

_DSF6920 _DSF6921 _DSF6943 _DSF6964 _DSF6969

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter