Published On: Thu, Jun 13th, 2019

ಗುರುಪುರದ ಬಳ್ಳಿಯಲ್ಲಿ ಬೃಹತ್ ಭಾರೀ ಆಲದ ಮರ ಬಿದ್ದು ಮನೆ ಸಂಪೂರ್ಣ ಜಖಂ

ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಬಳ್ಳಿಯಲ್ಲಿ ಚಂದ್ರಶೇಖರ ಪೂಜಾರಿಯವರ ಮನೆ ಮೇಲೆ ಭಾರೀ ಗಾತ್ರದ ಆಲದ(ಗೋಳಿ) ಮರವೊಂದು ಬಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ. ಇದರಿಂದ ಸುಮಾರು ಐದು ಲಕ್ಷದಷ್ಟು ನಷ್ಟ ಸಂಭವಿಸಿದೆ.

gur-june-12-manege mara-5

ಬುಧವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮರ ಬಿದ್ದಿದೆ. ಬೆಳಿಗ್ಗಿನಿಂದಲೂ ಭಾರೀ ಗಾಳಿ ಬೀಸುತ್ತಿದ್ದು, ಮನೆಯ ಪಕ್ಕದ ಗುಡ್ಡದ ಮೇಲಿದ್ದ ಮರ ಮುರಿದು ಬಿದ್ದಿದೆ. ಮನೆಯಲ್ಲಿ ಚಂದ್ರಶೇಖರರ ಸಹೋದರಿ ಪುಷ್ಪಾ ಎಂಬವರು ಮಾತ್ರ ಇದ್ದರು. ಮನೆಗೆ ಮರ ಮುರಿದು ಬೀಳುತ್ತಲೇ ಅವರು ಹೊರಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

gur-june-12-manege mara-3

ಮನೆಯ ಗೋಡೆ ಸಂಪೂರ್ಣ ಜಖಂಗೊಂಡಿದೆ. ಎರಡು ಕೊಠಡಿಯ ಸೊತ್ತುಗಳು ಪುಡಿಯಾಗಿವೆ. ಸದ್ಯ ಮಳೆ ನೀರು ಮನೆಯೊಳಗೆ ಸುರಿಯುತ್ತಿದೆ. ಮರ ತೆರವುಗೊಳಿಸಿ, ಮನೆಗೆ ಟರ್ಪಾಲು ಹಾಸಲಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಬಿಜೆಪಿ ಮುಖಂಡ ರಾಜೇಶ್ ಸುವರ್ಣ, ಗ್ರಾಮ ಪಂಚಾಯತ್ ಪಿಡಿಒ ಹಾಗೂ ಇತರ ಸಿಬ್ಬಂದಿ ಆಗಮಿಸಿ, ಪರಿಶೀಲನೆ ನಡೆಸಿದರು.

gur-june-12-manege mara-4

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter