Published On: Thu, Jun 13th, 2019

ಗೃಹ ಮಂತ್ರಿಗೆ ಮನವಿ

ಕೋಲಾರ. ಗುಂಡ್ಲು ಪೇಟೆ ತಾಲ್ಲೂಕಿನಲ್ಲಿ ವೀರನ ಪುರ ಗ್ರಾಮದ ಪ್ರತಾಪ್ ಎಂಬ ದಲಿತ ವ್ಯಕ್ತ್ತಿಯನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಆರೋಪಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಗಡಿಪಾರು ಮಾಡಬೇಕು ಹಾಗೂ ಗ್ರಾಮದಲ್ಲಿ ಶಾಂ ತಿ ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ರೈತ ಸಂಘದಿಂದ ಉಪ ತಹಶೀಲ್ದಾರ್‍ರವರ ಮುಖಾಂತರ ಗೃಹ ಮಂತ್ರಿಗೆ ಮನವಿ ನೀಡಿ ಅಗ್ರಹಿಸಲಾಯಿತು.

Raitha sangha dalita bethale meravanige manvi news 12-06-2019 (2)
ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ದೇಶಕ್ಕೆ ಸ್ವ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಇನ್ನೂ ಜಾತಿ ಪದ್ದತಿ ಜೀವಂತವಾಗಿರುವುದು ಮಾನವ ಜನ್ಮಕ್ಕೆ ನಾಚಿಕೆಯಾಗಬೇಕು ಆದುನಿಕತೆ ಮುಂದುವರೆದು ಜೀವನ ಶೈಲಿ ಬದಲಾಗಿರುವ ಕಾಲದಲ್ಲಿ ಈ ರೀತಿ ಜಾತಿ ಜಾತಿಗಳ ನಡುವೆ ಸಂಘರ್ಷ ಇರುವುದು ನಂಬಲಾರದ ವಿಷಯವಾದರೂ ಇದು ಮನುಕುಲದ ಘೋರವಾದ ವಿಚಾರ. ತಾಯಿ ಗರ್ಭದಲ್ಲಿರುವಾಗ ಪರೀಕ್ಷೆ ಮಾಡುವ ವೈದ್ಯರು ಯಾವ ಜಾತಿ ಎಂದು ಕೇಳುವುದಿಲ್ಲ. ವಿದ್ಯಾಭ್ಯಾಸ ಕಲಿಸುವಾಗ ಗುರುಗಳ ಜಾರಿ ಕೇಳುವುದಿಲ್ಲ ಆದರೆ ಶಾಶ್ವತವಿಲ್ಲದ ಮೂರು ದಿನದ ಬದುಕಿನಲ್ಲಿ ಈ ರೀತಿ ಜಾತಿಗಳ ಹೆಸರಿನಲ್ಲಿ ಜೀವನ ಮಾಡುವ ಬದುಕು ಮಾತು ಬರದ ಮೂಕ ಪ್ರಾಣಿಗಳಿಗಿಂತ ಕೀಳಾಗಿದ್ದಾರೆ. ಅದರೆ ರಾಜಕಾರಣಿಗಳ ರಾಜಕೀಯ ಭವಿಷ್ಯಕ್ಕೆ ಇಂದು ಜಾತಿಗಳಲ್ಲಿ ವಿಗಂಡಣೆ ಮಾಡಿ ತಮ್ಮ ಬೇಳೆ ಒಂದು ಕಡೆ ಬೇಯಿಸುಕೊಳ್ಳುತ್ತಿದ್ದರೆ ಇವರ ರಾಜಕೀಯ ಭವಿಷ್ಯಕ್ಕೆ ಏನು ಅರಿಯದ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

Raitha sangha dalita bethale meravanige manvi news 12-06-2019
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ರಾಜ್ಯ ಸಮ್ಮೀಶ್ರ ಸರ್ಕಾರದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಜನ ಸಾಮಾನ್ಯರ ಸಮಸ್ಯೆ ಬಗೆಹರಿಸಬೇಕಾದ ಜನ ಪ್ರತಿನಿದಿಗಳು ಕೋಮ ಸ್ಥಿತಿಯಲ್ಲಿದ್ದಾರೆ. ಇನ್ನೂ ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ಗ್ರಾಮದ ಪ್ರತಾಪ್ ಎಂಬ ದಲಿತ ಯುವಕನನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವ ಆರೋಪಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಅವರನ್ನು ಗಡಿಪಾರು ಮಾಡಿ ಮುಂದೆ ಈ ರೀತಿ ಯಾವುದೇ ಜಾತಿ ಸಂಘರ್ಷ ಮಾಡಲು ಭಯ ಬೀಳುವ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೆಕು, ಹಾಗೂ ಗ್ರಾಮದಲ್ಲಿ ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮಾನ್ಯ ಗೃಹ ಮಂತ್ರಿಗಳನ್ನು ಅಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಶೀಲ್ದಾರ್ ಸುಜಾತ ರವರು ನಿಮ್ಮ ಈ ಮನವಿಯನ್ನು ಅತೀಶೀಘ್ರವಾಗಿ ಗೃಹ ಮಂತ್ರಿಗಳಿಗೆ ಕಳುಹಿಸಿ ಕೊಡುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷೆ ಎ,ನಳಿನಿ, ಪುರುಷೋತ್ತಮ್, ವೆಂಕಟೇಶಪ್ಪ, ಮಂಜುನಾಥ್, ನವೀನ್, ಮಂಜು, ಪುತ್ತೇರಿ ರಾಜು ಮುಂತಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter