Published On: Thu, Jun 13th, 2019

ಅಂಗಡಿದಾರರೇ ಎಚ್ಚರ..ವಂಚಕರು ನಿಮ್ಮಲ್ಲಿಗೂ ಬಂದಾರು

ಬಂಟ್ವಾಳ: ಅಂಗಡಿದಾರರೇ ಎಚ್ಚರ.. ನಿಮ್ಮ ಅಂಗಡಿಗೂ ಬಂದು ಸಾಮಾಗ್ರಿ ಖರೀದಿಸಿ ಹಣ ನೀಡದೇ ಪರಾರಿಯಾಗುವ ಖದೀಮರು ನಿಮ್ಮನ್ನು ವಂಚಿಸಬಹುದು..ಈಗಾಗಲೇ ಬಂಟ್ವಾಳ ಪರಿಸರದ ಎರಡು ಅಂಗಡಿಗಳಲ್ಲಿ ಸಿಗರೇಟು ಸಹಿತ ತಂಪು ಪಾನೀಯ ಖರೀದಿಸಿ ಅಂಗಡಿ ಮಾಲಕರಿಗೆ ಹಣ ನೀಡದೇ ವಂಚಿಸಿ ಪರಾರಿಯಾಗಿರುವ ಎರಡು ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿದೆ. ಜೂ.9 ರಂದು ರಾತ್ರಿ ಸುಮಾರು 8.30 ರಹೊತ್ತಿಗೆ ಅಪರಿಚಿತ ಬೈಕ್ ಸವಾರರಿಬ್ಬರು ಬಿ. ಸಿ  ರೋಡ್ ನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಮುಂಭಾಗದಲ್ಲಿರುವ ಮಾಣಿಕ್ಯ ಸ್ಟೋರ್ ಗೆ‌ ಅಗಮಿಸಿದ್ದು, ಇದರಲ್ಲಿ ಒಬ್ಬಾತ ಬೈಕನ್ನು ಚಾಲನೆಯಲ್ಲಿಟ್ಟು ರಸ್ತೆಯಲ್ಲಿ ನಿಂತರೆ ಸಹಸವಾರ  ಅಂಗಡಿಗೆ ಬಂದು ದುಬಾರಿ ಬೆಲೆಯ  ನಾಲ್ಕು ಪ್ಯಾಕೆಟ್ ಸಿಗರೇಟ್ ಪಡೆದುಕೊಂಡಿದ್ದಾನೆ, ಆಗ ಒಂದು ಸಿಗರೇಟ್ ಸೇದಲು ಕೇಳಿದ್ದ ಈ ಯವಕನಲ್ಲಿ ಅಂಗಡಿ ಮಾಲಕ ಲೋಕೇಶ್ ಇದರ ದರ ಒಟ್ಟು  650ರೂ ಆಗಿದೆಯೆಂದಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ಯುವಕ ಒಂದು ಬಾಟಲ್ ತಂಪು ಪಾನೀಯ  ಸ್ಪ್ರೈಟ್  ತೆಗೆದಿಡಿ  ಬೈಕ್ನಲ್ಲಿರುವ  ಸ್ನೇಹಿತನಿಂದ ಹಣ ಕೇಳಿ ತರುತ್ತೆನೆಂದು  ರಸ್ತೆಯಲ್ಲಿದ್ದ ಬೈಕ್ ಸವಾರನಲ್ಲಿ ತೆರಳಿದ್ದ. ಇತ್ತ  ಅಂಗಡಿ  ಮಾಲಕ ಲೋಕೇಶ್ ಫ್ರಿಡ್ಜ್ ನಿಂದ ಸ್ಪ್ರೈಟ್ ಬಾಟಲ್  ತೆಗೆಯುವಷ್ಟರಲ್ಲಿ  ಬೈಕ್ ಸವಾರರಿಬ್ಬರು 650 ರೂ. ಬೆಲೆಯ  ಸಿಗರೇಟ್ ಸಹಿತ ಅತೀ ವೇಗದಲ್ಲಿ ಪರಾರಿಯಾಗಿದ್ದಾರೆ.   ಈ ಪ್ರಸಂಗದಿಂದ ಆತಂಕಿತರಾದ ಲೋಕೇಶ್ ತಲೆ ಮೇಲೆ ಕೈ ಹೊತ್ತು ಕೂತರು.        ಇದರ  ಮರುದಿನ ಬಂಟ್ವಾಳ ಸಮೀಪದ ಮಣಿಹಳ್ಳದಲ್ಲಿ  ಶ್ರೀಧರ್ ಎಂಬವರ  ಅಂಗಡಿಯಲ್ಲೂ ಇದೇ ಮಾದರಿಯಲ್ಲಿ  ಘಟನೆ ಮರುಕಳಿಸಿದೆ.ಇಲ್ಲಿ ಅಂಗಡಿಯಲ್ಲಿರುವ  ಸಿ. ಸಿ ಕ್ಯಾಮರಾದಲ್ಲಿ ಒಬ್ಬ ಯುವಕನ ಮುಖಚಹರೆ ಸೆರೆಯಾಗಿದ್ದು,ಬುಧವಾರವಿಡೀ ಸಾಮಾಜಿಕ ಜಾಲತಾಣದಲ್ಲಿ ಈ ವಂಚಕ ಯುವಕನ ವೀಡಿಯೋ ವೈರಲ್ ಆಗಿದೆ. ಈ ವಂಚಕ ಯುವಕರ  ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.  ಹಾಗಾಗಿ ಇಂತಹ ವಂಚಕರು ನಿಮ್ಮ ಊರಿಗೂ ಬರಬಹುದು ಎಚ್ಚರವಹಿಸಿ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter